ಮನೆ ಕಟ್ಟುವ ಆಸೆ ಸಮನಾಗಿ ಎಲ್ಲರಿಗೂ ಇರುತ್ತದೆ. ಮನೆ ಕಟ್ಟಬೇಕೆಂದು ಸೈಟ್ ಖರೀದಿ ಮಾಡಿ ಅಲ್ಲಿ ಮನೆ ಕಟ್ಟಬೇಕೆಂಬ ಕನಸನ್ನು ಹೊಂದಿರುತ್ತಾರೆ. ಸಣ್ಣ ಜಾಗದಲ್ಲಿ ಮತ್ತು ಕಡಿಮೆ ದುಡ್ಡಿನಲ್ಲಿ ಟುಬಿಎಚ್ ಕೆ ಮನೆ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ
30 ಬೈ 20 ಸೈಟ್ ನಲ್ಲಿ ಮನೆ ಕಟ್ಟಲಾಗಿದೆ 180 ಸ್ಕ್ವೇರ್ ಫೀಟ್ ಜಾಗದಲ್ಲಿ ಸುಂದರವಾದ ಮನೆಯನ್ನು ನಿರ್ಮಿಸಲಾಗಿದೆ. 2 ಬಿಎಚ್ಚ್ ಕೆ ಮನೆ ನಿರ್ಮಾಣ ಮಾಡಲಾಗಿದೆ ಎಲ್ಲಿಯೂ ಜಾಗವನ್ನು ಹಾಳು ಮಾಡದೆ ಎದುರಿಗೆ ಒಂದು ಗೇಟ್ ಮಾಡಲಾಗಿದೆ ಒಳಗಡೆ ಪಾರ್ಕಿಂಗ್ ಮಾಡಲು ಜಾಗವಿದೆ ಅಲ್ಲಿ 30 ರಿಂದ 40 ರೂಪಾಯಿಯ ಕಡಿಮೆ ಕ್ವಾಲಿಟಿಯ ಟೈಲ್ಸ್ ಹಾಕಲಾಗಿದೆ. ಮನೆಯ ಬಾಗಿಲ ಹತ್ತಿರ ಒಂದು ಮೆಟ್ಟಿಲು ಮಾಡಿ ಸುಂದರವಾಗಿರುವ ಗಟ್ಟಿ ಮುಟ್ಟಾದ ಮೇನ್ ಡೋರ್ ಮಾಡಲಾಗಿದೆ. ಒಳಗೆ ಮನೆಯ ಎಲ್ಲ ಕಡೆ ಡೆಸರ್ಟ್ ಗ್ರೀನ್ ಗ್ರಾನೈಟ್ ಹಾಕಲಾಗಿದೆ. ಹಾಲ್ ನಲ್ಲಿ ಟಿವಿ ಯೂನಿಟ್ ಮಾಡಲಾಗಿದೆ. ರೂಮ್ ನೋಡಲು ಸುಂದರವಾಗಿ ಕಾಣುತ್ತದೆ ಚಿಕ್ಕದಾಗಿದ್ದರೂ ಕ್ಲೀನ್ ಆಗಿದೆ ಫೋರ್ ಬೈ ತ್ರಿ ಎರಡು ವಿಂಡೊ ಇದೆ, ವಾರ್ಡ್ರೋಬ್, ಡ್ರೆಸ್ಸಿಂಗ್ ಟೇಬಲ್ ಮಾಡಲಾಗಿದೆ.
ಇನ್ನೊಂದು ರೂಮ್ ಮಾಡಲಾಗಿದ್ದು ಇಲ್ಲಿಯೂ ಸಜ್ಜಾ ಇದೆ ಹಾಗೂ ವಾರ್ಡ್ರೋಬ್ ಮಾಡಲಾಗಿದೆ, ಫೋರ್ ಬೈ ತ್ರಿ ನ ಎರಡು ವಿಂಡೋ ಮಾಡಲಾಗಿದೆ. ಫೈವ್ ಬೈ ಫೋರ್ ನ ಬಾತ್ರೂಮ್ ಇದೆ, ಡಬ್ಲ್ಯೂಪಿಸಿ ಡೋರ್ ಮಾಡಲಾಗಿದೆ, ಸೆವೆನ್ ಫೀಟ್ ವರೆಗೂ ಟೈಲ್ಸ್ ಹಾಕಲಾಗಿದೆ ಕೆಳಗೆ ನೆಲಕ್ಕೆ ರಫ್ ಟೈಲ್ಸ್ ಹಾಕಲಾಗಿದೆ. ಮನೆಗೆ ಎರಡು ಕೋಟ್ ನಲ್ಲಿ ಪೇಂಟಿಂಗ್ ಮಾಡಲಾಗಿದೆ. ಓಪನ್ ಕಿಚನ್ ಆಗಿದ್ದು ವೆಂಟಿಲೇಷನ್ ವಿಂಡೋ ಹಾಕಲಾಗಿದೆ. ಕಿಚನ್ ಸುಂದರವಾಗಿದ್ದು, ಮನೆಯ ಇಂಟೀರಿಯರ್ ಗೆ ಎರಡುವರೆ ಲಕ್ಷ ರೂಪಾಯಿ ಖರ್ಚಾಗಿದೆ. ಕಿಚನ್ ಪಕ್ಕ ಬ್ಯಾಕ್ ಡೋರ್ ಇಡಲಾಗಿದೆ. ಪೂಜಾ ರೂಮ್ ಚಿಕ್ಕದಾಗಿದ್ದು ತ್ರಿ ಬೈ ತ್ರಿ ನಲ್ಲಿದೆ, ದೇವರ ಕೋಣೆಯೊಳಗೆ ವಾಸ್ತು ಪ್ರಕಾರ ಬಲಗಡೆ ಕಟ್ಟೆಯನ್ನು ಇಡಲಾಗಿದೆ. ಹಾಲ್ ಗೆ ದೊಡ್ಡದಾದ ವಿಂಡೊ ಇದೆ, ಬ್ಯಾಕ್ ಡೋರ್ ಓಪನ್ ಮಾಡಿದರೆ ಒಂದು ಯುಟಿಲಿಟಿ ಏರಿಯಾ ಹಾಗೂ ಅಲ್ಲಿಯೆ ಕಾಮನ್ ಬಾಥ್ ರೂಮ್ ನ್ನು ಮಾಡಲಾಗಿದೆ, ಅಲ್ಲಿಗೆ ವಾಷಿಂಗ್ ಮಷೀನ್ ಇಡಲು ಜಾಗ ಹಾಗೂ ಟ್ಯಾಪ್ ಇಡಲಾಗಿದೆ, ಇಲ್ಲಿಯೆ ಕಾಮನ್ ಟಾಯ್ಲೆಟ್ ಅನ್ನು ಇಡಲಾಗಿದೆ, ಡಬ್ಲ್ಯೂಪಿಸಿ ಡೋರ್ ಇಡಲಾಗಿದೆ, ಫೋರ್ ಬೈ ಫೋರ್ ಜಾಗದ ಟಾಯ್ಲೆಟ್ ಆಗಿದೆ, ಶವರ್, ಸಿಂಗಲ್ ಪೀಸ್ ಕಮೋರ್ಡ್ ಇದೆ, 7 ಫೀಟ್ ವರೆಗೆ ಟೈಲ್ಸ್ ಹಾಕಲಾಗಿದೆ ಕೆಳಗೆ ರಫ್ ಟೈಲ್ಸ್ ಬಳಸಲಾಗಿದೆ.
ಒಂಭತ್ತು ಸಾವಿರ ಕೆಪ್ಯಾಸಿಟಿ ಇರುವ ಸಂಪನ್ನು ಇಡಲಾಗಿದೆ. ಮೇಲ್ಗಡೆ ಹೋಗಲು ಎರಡು ಫೀಟ್ ಮೆಟ್ಟಿಲುಗಳನ್ನು ಇಡಲಾಗಿದೆ, ಮೇಲೆ ಹೋಗಲು ಲೈಟ್ ಇಡಲಾಗಿದೆ. ಟೆರೆಸ್ ಮೇಲೆ ಟ್ಯಾಂಕ್ ರೂಮನ್ನು ಕಟ್ಟಿ ಟ್ಯಾಂಕ್ ಇಡಲಾಗಿದೆ, ಟ್ಯಾಂಕ್ ರೂಮಿನಲ್ಲಿ ಪವರ್ ಕನೆಕ್ಷನ್ ಹಾಗೂ ಒಂದು ಟ್ಯಾಪನ್ನು ಇಡಲಾಗಿದೆ. ಅಲ್ಲಿ ಪಕ್ಕದಲ್ಲಿ ಬಟ್ಟೆ ತೊಳೆಯಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಬಟ್ಟೆ ಒಣಗಿಸಲು ವ್ಯವಸ್ಥೆ ಮಾಡಲಾಗಿದೆ. ಹೊರಗಡೆ ಇರುವ ವಿಂಡೋಕ್ಕೆ ಬಾಕ್ಸ್ ರೀತಿ ಫಿನಿಶಿಂಗ್ ಕೊಡಲಾಗಿದೆ. ಹೀಗೆ 15ಲಕ್ಷದಲ್ಲಿ ಟುಬಿಎಚ್ ಕೆ ಮನೆಯನ್ನು ನಿರ್ಮಿಸಲಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.