ಆಯುರ್ವೇದ ಅವಶ್ಯಕ ತೈಲಗಳನ್ನು ಹಲವಾರು ಬಗೆಯ ಔಷಧಿಗಳ ರೂಪದಲ್ಲಿ ಬಳಸುತ್ತದೆ. ಇದನ್ನು ಬಳಸುವ ವ್ಯಕ್ತಿಗಳಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಕಷ್ಟ ವಾಗುವುದಿಲ್ಲ. ಆದರೆ ಅವಶ್ಯಕ ತೈಲಗಳನ್ನು ದೇಹದ ವಿವಿಧ ಭಾಗಗಳಿಗೆ ಹಚ್ಚಿಕೊಂಡಾಗ ಬೇರೆ ಬೇರೆ ಬಗೆಯ ಪರಿಣಾಮಗಳು ಎದುರಾಗುತ್ತವೆ. ಕೆಲಪು ಪರಿಣಾಮಗಳು ಆರೋಗ್ಯಕರವಾಗಿದ್ದರೆ ಕೆಲವು ವಿಪರೀತವಾಗಬಹುದು. ಹಾಗಾಗಿ ಅವಶ್ಯಕ ತೈಲಗಳನ್ನು ಸೂಕ್ತ ಮಾಹಿತಿಯಿಲ್ಲದೇ ನೇರವಾಗಿ ಬಳಸಬಾರದು.
ಆದರೆ ನಾಭಿಗೆ ಹಚ್ಚಿಕೊಳ್ಳುವ ವಿಷಯ ಬಂದಾಗ ಆಯುರ್ವೇದ ಇದರಿಂದ ಏಳಕ್ಕೂ ಹೆಚ್ಚು ಪ್ರಯೋಜನಗಳಿವೆ ಎಂದು ವಿವರಿಸುತ್ತದೆ. ಅವಶ್ಯಕ ತೈಲವನ್ನು ನಾಭಿಯ ಮೇಲೆ ಹಚ್ಚಿಕೊಳ್ಳುವ ಮೂಲಕ ಹೊಟ್ಟೆ ನೋವು ಮತ್ತು ಕೆಳಹೊಟ್ಟೆಯ ಸೆಳೆತದ ನೋವನ್ನು ಕಡಿಮೆ ಮಾಡಬಹುದು. ಅಲ್ಲದೇ ಅಜೀರ್ಣತೆ ಅಥವಾ ವಿಷಯುಕ್ತ ಆಹಾರ ಸೇವನೆಯಿಂದ ಜಠರದ ಆರೋಗ್ಯವನ್ನೂ ರಕ್ಷಿಸುತ್ತದೆ. ಅಲ್ಲದೇ ಅತಿಸಾರವನ್ನು ನಿಲ್ಲಿಸಲೂ ಈ ವಿಧಾನ ಉತ್ತಮವಾಗಿದೆ.
ಹೊಟ್ಟೆಯುಬ್ಬರಿಕೆ, ವಾಕರಿಕೆ ಮೊದಲಾದವುಗಳನ್ನೂ ಕಡಿಮೆ ಮಾಡಬಹುದು. ಹೊಟ್ಟೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿತ ತೊಂದರೆಗಳಿದ್ದರೆ ಶುಂಠಿಯ ಎಣ್ಣೆ ಅಥವಾ ಪುದಿನಾ ಎಣ್ಣೆಯನ್ನು ಬಳಸಬಹುದು. ಹಾಗಿದ್ದರೆ ಹೆಣ್ಣುಮಕ್ಕಳು ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಾಕುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳು ಇವೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕೊಬ್ಬರಿ ಎಣ್ಣೆ ನಮ್ಮ ಆರೋಗ್ಯಕ್ಕೆ ಬಳಷ್ಟು ಉತ್ತಮವಾದದ್ದು. ಆರೋಗ್ಯದ ದೃಷ್ಟಿಯಿಂದಲೋ ಅಥವಾ ಅಡುಗೆ ಮನೆಯಲ್ಲಿ ಅಡುಗೆಗೋ ನಾವು ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡಿಯೇ ಮಾಡುತ್ತೇವೆ. ಆಯುರ್ವೇದದ ಪ್ರಕಾರ ಕೊಬ್ಬರಿ ಎಣ್ಣೆಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಇರುತ್ತವೆ. ಹಾಗಾಗಿ ಇದನ್ನು ಆಹಾರದ ರೂಪದಲ್ಲಿ ಅಥವಾ ಒಂದು ಔಷಧೀಯ ರೂಪದಲ್ಲಿ ಕೂಡಾ ಬಳಕೆ ಮಾಡಬಹುದು.
ಇನ್ನೂ ಹೊಕ್ಕಳಿಗೆ ಎರಡು ಹನಿ ಕೊಬ್ಬರಿ ಎಣ್ಣೆ ಹಾಕುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳು ಇವೆ ಎಂದು ನೋಡುವುದಾದರೆ, ಯಾವುದೇ ಸ್ತ್ರೀ ಅಥವಾ ಪುರುಷ ಇಬ್ಬರೂ ಸಂತಾನ ಫಲವತ್ತತೆಯ ಸಮಸ್ಯೆ ಇದ್ದರೆ ಅಂತವರು ರಾತ್ರಿ ಮಲಗುವ ಮುನ್ನ ಎರಡು ಹನಿ ಕೊಬ್ಬರಿ ಎಣ್ಣೆಯನ್ನು ಹೊಕ್ಕಳಿಗೆ ಹಾಕಿಕೊಂಡು ಮಲಗಿದರೆ ಸಂತಾನ ಫಲವತ್ತತೆ ಹೆಚ್ಚುತ್ತದೆ.
ನೆಗಡಿ, ಕೆಮ್ಮು, ಕಫ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತೀ ದಿನ ರಾತ್ರಿ ಮಲಗುವ ಮುನ್ನ ಎರಡು ಹನಿ ಕೊಬ್ಬರಿ ಎಣ್ಣೆಯನ್ನು ಹೊಕ್ಕಳಿಗೆ ಹಾಕಿಕೊಂಡು ಮಲಗಿದರೆ ಈ ಎಲ್ಲಾ ಸಮಸ್ಯೆಗಳೂ ಕಡಿಮೆ ಆಗುತ್ತದೆ. ಮುಖದಲ್ಲಿ ಮೊಡವೆಗಳು, ನೆರಿಗೆಗಳು ಆಗಿದ್ದು, ಚರ್ಮ ಸುಕ್ಕುಗಟ್ಟಿ ವಯಸ್ಸು ಹೆಚ್ಚಾದ ಹಾಗೆ ಕಾಣಿಸಿದರೆ ಅದಕ್ಕೂ ಕೂಡಾ ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಲಗಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಇನ್ನು ಕೈ ಹಾಗೂ ಕಾಲುಗಳ ಬೆರಳಿನ ಉಗುರುಗಳ ಬೆಳವಣಿಗೆ ಸರಿಯಾಗಿ ಆಗದೆ ಇದ್ದರೇ ಆಗಲೂ ಸಹ ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಲಗಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಕೆಲವರಿಗೆ ತೂಕ ಹೆಚ್ಚಾದಾಗ ಹೊಟ್ಟೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತವೆ ಸಾಮಾನ್ಯವಾಗಿ ಗರ್ಭಿಣಿಯರಿಗೆ ಡೆಲಿವರಿ ಆದ ನಂತರ ಈ ರೀತಿಯ ಮಾರ್ಕ್ಸ್ ಕಾಣಿಸುತ್ತವೆ ಹಾಗೂ ತೂಕ ಕಡಿಮೆ ಆದಾಗ ಕೂಡಾ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತವೆ.
ಇಂತವರು ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಲಗುವುದರಿಂದ ಸ್ಟ್ರೆಚ್ ಮಾರ್ಕ್ಸ್ ನಿಂದ ಮುಕ್ತಿ ಪಡೆಯಬಹುದು. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಲಗುವುದರಿಂದ ಹೊಟ್ಟೆ ನೋವು ಮಾತ್ರವಲ್ಲದೇ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಯಾವುದೇ ನೋವು ಇದ್ದರೂ ಕಡಿಮೆ ಆಗುತ್ತದೆ. ಕಣ್ಣಿನ ಆರೋಗ್ಯಕ್ಕೂ ಸಹ ಇದು ಉತ್ತಮ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಯಾವುದೇ ಆಯುರ್ವೇದ ಔಷಧ ಆಗಲಿ ಒಂದೇ ದಿನಕ್ಕೆ ನಮಗೆ ಪರಿಣಾಮ ಕಾಣಿಸುವುದಿಲ್ಲ ಯಾವುದೇ ಅಡ್ಡಪರಿಣಾಮ ಇಲ್ಲದೆಯೇ ನಿಧಾನವಾಗಿ ತನ್ನ ಪರಿಣಾಮವನ್ನು ತೋರುತ್ತದೆ.