ಸಾಮಾನ್ಯವಾಗಿ ದೇವಸ್ತಾನಗಳಿಗೆ ಹೋಗುವ ಭಕ್ತಾದಿಗಳು ಬರೀ ಕೈಯ್ಯಲ್ಲಿ ಹೋಗುವುದಿಲ್ಲ ಹೋಗುವಾಗ ದೇವರ ನೈವೇದ್ಯಕ್ಕೆಂದು ತೆಂಗಿನ ಕಾಯಿ ಬಾಳೆ ಹಣ್ಣು ಹೂವು ಕರ್ಪೂರ ಇತ್ಯಾದಿಗಳನ್ನು ತಮ್ಮ ಇಚ್ಚೆಗನುಸಾರವಾಗಿ ಕೊಂಡೊಯ್ಯುತ್ತಾರೆ, ಇದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದಲೂ ನಡೆದು ಬಂದಂತಹ ಒಂದು ರೂಡಿಯಾಗಿದೆ ಅಲ್ಲದೇ ದೇವಸ್ಥಾನದ ಪೂಜೆಗೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣನ್ನು ಬಿಟ್ಟರೆ ಬೇರೆ ಯಾವುದೇ ಹಣ್ಣುಗಳನ್ನು ಕೊಂಡೊಯ್ಯುವುದಿಲ್ಲ. ಯಾಕಂದ್ರೆ ತೆಂಗಿನ ಕಾಯಿ ಮತ್ತು ಬಾಳೆಹಣ್ಣುಗಳಿಗೆ ಅದರದ್ದೇ ಆದ ಮಹತ್ವವಿದೆ ಆದ್ದರಿಂದಲೇ ತೆಂಗಿನ ಕಾಯಿ ಮತ್ತು ಬಾಳೆಹಣ್ಣು ದೇವರ ಪೂಜೆಗೆ ಮತ್ತು ನೈವೇದ್ಯಕ್ಕೆ ಸರ್ವ ಶ್ರೇಷ್ಠ ಹಾಗಾದ್ರೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳಿಗೆ ಇರುವ ಮಹತ್ವ ಮತ್ತು ದೇವರಿಗೇ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳನ್ನು ಮಾತ್ರವೇ ಯಾಕೆ ನೈವೇದ್ಯಕ್ಕೆ ಬಳಸಲಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳು ನಮ್ಮ ಪುರಾಣಗಳಲ್ಲಿ ದೈವ ಫಲಗಳು ಎಂದು ಉಲ್ಲೇಖವಾಗಿವೆ ಮತ್ತು ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳು ಪೂರ್ಣ ಫಲಗಳು ಕೂಡ ಯಾಕಂದ್ರೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳಿಗೆ ನಮ್ಮ ಹಿಂದೂ ಧರ್ಮ ಶಾಸ್ತ್ರದಲ್ಲಿ ಅದರದ್ದೇ ಆದ ಮಹತ್ವವಿದೆ ಮೊದಲನೆಯದಾಗಿ ತೆಂಗಿನ ಮರ ಅಂದರೆ ಕಲ್ಪ ವೃಕ್ಷವು ಸಮುದ್ರ ಮಂಥನ ಮಾಡುವ ಸಮಯದಲ್ಲಿ ಈ ಭೂಲೋಕಕ್ಕೆ ಬಂದದ್ದು ಮತ್ತು ಇದೊಂದು ದೈವೀಕ ಸ್ವರೂಪಾಗಿರುವುದಲ್ಲದೆ ಬೇಡಿದ್ದನ್ನೆಲ್ಲ ನೀಡುವಂತಹ ಶಕ್ತಿ ಈ ತೆಂಗಿನ ಮರಕ್ಕೆ ಇದೆ ಆದ್ದರಿಂದಲೇ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ ಇನ್ನೂ ಬಾಳೆ ಗಿಡವು ಪುರಾಣಗಳ ಪ್ರಕಾರ ರಂಬೆಯ ಮತ್ತೊಂದು ರೂಪವಾಗಿ ಭೂಲೋಕದಲ್ಲಿ ನೆಲೆಯೂರಿದ ಮರವಾಗಿದೆ ಮತ್ತು ಈ ಬಾಳೆ ಗಿಡವು ವಿಷ್ಣುವಿನ ಆಶೀರ್ವಾಡದೊಂದಿಗೆ ಭೂಲೋಕಕ್ಕೆ ಬಂದಿರುವುದಾಗಿ ನಮ್ಮ ಹಿಂದೂ ಧರ್ಮ ಶಾಸ್ತ್ರದ ಗ್ರಂಥಗಳು ಸ್ಪಷ್ಟಪಡಿಸುತ್ತವೆ
ನಾವು ಮೇಲೆ ಹೇಳಿದ ಎಲ್ಲವೂ ನಮ್ಮ ಹಿಂದೂ ಪುರಾಣಗಳಿಗೆ ಸಂಬಂಧಿಸಿದ್ದಾಯಿತು ಆದರೇ ಅದಷ್ಟೇ ಅಲ್ಲದೇ ಇನ್ನೂ ಒಂದು ಕಾರಣವನ್ನು ಸಹ ನಾವು ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳನ್ನು ಪೂಜೆಗೆ ಬಳಸುವುದರ ಹಿಂದೆ ಸ್ಪಷ್ಟೀಕರಿಸಲಾಗಿದೆ, ಅದೇನೆಂದರೆ ನಾವು ಮೊದಲೇ ಹೇಳಿದ ಹಾಗೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣು ದೈವ ಫಲಗಳು ಅದಕ್ಕೂ ಹೆಚ್ಚಾಗಿ ಅವು ಪೂರ್ಣ ಫಲಗಳು ಹೌದು ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳು ಎಂಜಲು ರಹಿತವಾದುವು ಯಾಕಂದ್ರೆ ಮೊದಲನೆಯದಾಗಿ ಯಾವುದೇ ಹಣ್ಣನ್ನು ನಾವು ನೋಡಿದರೂ ಜನರು ಅದನ್ನು ತಿಂದು ಅದರ ಬೀಜವನ್ನು ಭೂಮಿಯಲ್ಲಿ ಎಸೆದಾಗ ಮಾತ್ರವೇ ಅದು ಮತ್ತೆ ಚಿಗುರೊಡೆದು ಮತ್ತೆ ಗಿಡವಾಗಿ ಮರವಾಗಿ ಬೆಳೆಯುತ್ತದೆ.
ಯಾವುದಾದರೂ ಪ್ರಾಣಿ ಪಕ್ಷಿಗಳು ಎಂಜಲು ಮಾಡಿದ ನಂತರ ಬೀಜವು ಭೂಮಿಯಲ್ಲಿ ಬಿದ್ದು ನಂತರ ಗಿಡವಾಗಿ ಹುಟ್ಟುತ್ತದೆ ಹೀಗೆ ಬೆಳೆಯುವ ಗಿಡಗಳು ಮತ್ತು ಮರಗಳು ಮನುಷ್ಯರ ಮತ್ತು ಪ್ರಾಣಿ ಪಕ್ಷಿಗಳ ಎಂಜಲಿನ ಬೀಜದಲ್ಲಿ ಚಿಗುರೊಡೆದ ಮರವಾಗಲಾಗಿರುತ್ತವೆ, ಆದ್ದರಿಂದ ಇಂತಹ ಮರಗಳೇ ಆಗಲಿ ಗಿಡಗಳೇ ಆಗಲೀ ಬಿಡುವ ಹಣ್ಣುಗಳು ಎಂಜಲಾಗಿರುತ್ತವೆ ಯಾವುದೇ ಕಾರಣಕ್ಕೂ ಎಂಜಲು ಮಾಡಿದ ಪದಾರ್ಥಗಳನ್ನು ದೇವರಿಗೇ ನೈವೇದ್ಯವಾಗಿ ಅರ್ಪಿಸುವುದು ನಮ್ಮ ಸಂಸ್ಕೃತಿಯಲ್ಲ.
ತೆಂಗಿನ ಕಾಯಿಯನ್ನು ಅದರ ಸಿಪ್ಪೆ ಸಮೇತ ನೀರಿನಲ್ಲಿ ಅಥವಾ ಭೂಮಿಯಲಿ ನೆಟ್ಟರೆ ಮಾತ್ರವೇ ಅದು ಮತ್ತೆ ಗಿಡವಾಗಿ ಚಿಗುರೊಡೆದು ಮರವಾಗಿ ಬೆಳೆಯುತ್ತದೆ ಇನ್ನೂ ಬಾಳೆ ಮರವು ಯಾವುದೇ ಬೀಜದ ಸಹಾಯದಿಂದ ಬೆಳೆಯದೇ ಅದು ಚಿಕ್ಕ ಚಿಕ್ಕ ಕಂದುಗಳನ್ನು ಭೂಮಿಯಲ್ಲಿ ನೆಡುವುದರಿಂದ ಗಿಡವಾಗಿ ಬೆಳೆದು ಫಲವನ್ನು ನೀಡುತ್ತವೆ, ಆದ್ದರಿಂದ ಈ ಎರಡೂ ಅಂದರೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳು ಭೂಲೋಕದಲ್ಲಿ ಸಿಗುವ ಎಂಜಲಾಗದ ಪೂರ್ಣ ಫಲಗಳು ಮತ್ತು ದೈವ ಫಲಗಳು ಎಂಬ ಖ್ಯಾತಿಗೆ ಪಾತ್ರವಾಗಿವೆ ಆದ್ದರಿಂದಲೇ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣುಗಳನ್ನು ಹೊರತುಪಡಿಸಿ ಮತ್ತ್ಯಾವುದೇ ಹಣ್ಣುಗಳನ್ನು ದೇವರ ಪೂಜೆಗೆ ಮತ್ತು ನೈವೇದ್ಯಕ್ಕೆ ಬಳಸಲಾಗುವುದಿಲ್ಲ.