ಇಂದಿನ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ಸಹ ಬ್ಯುಸಿ ಇರುವ ಕಾರಣ ಮನೆಯ ವಾತಾವರಣ ಹದಗೆಡುತ್ತದೆ ಇದರಿಂದಾಗಿ ಎಷ್ಟೇ ದುಡಿಮೆ ಮಾಡಿದರು ಎಷ್ಟೇ ಹಣಗಳಿಸಿದರು ಸಹ ಮನೆಯಲ್ಲಿ ನೆಮ್ಮದಿ ಇರುವುದು ಇಲ್ಲ ಹಾಗಾಗಿ ಮನೆಯಲ್ಲಿ ಸರಿಯಾಗಿ ಪೂಜೆ ಪುನಸ್ಕಾರಗಳು ನಡೆಯುವುದು ಇಲ್ಲ ಇದರಿಂದ ಕಷ್ಟಗಳು ಮೇಲಿಂದ ಮೇಲೆ ಬರುತ್ತಲೆ ಇರುತ್ತದೆ
ಜನರು ಕಷ್ಟ ಬಂದಾಗ ಮಾತ್ರ ಪರಮಾತ್ಮ ಎಂದು ಹೇಳಿ ಬಿಡುತ್ತಾರೆ ಅಷ್ಟೇ ಮನೆಯಲ್ಲಿ ನೆಮ್ಮದಿಯಿಂದ ಇರಲು ಹೆಣ್ಣು ಮಕ್ಕಳು ತಮ್ಮ ಮನೆಯ ಪೂಜಾ ವಿಧಾನವನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕಂಡು ಬರುತ್ತದೆ. ಕೆಲವೊಮ್ಮೆ ಹೆಣ್ಣು ಮಕ್ಕಳೇ ಮನೆಯಲ್ಲಿ ದಾರಿದ್ರ್ಯವನ್ನು ತಂದು ಕೊಡುತ್ತಾರೆ
ಇದರಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ ಹಾಗೆಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಮನೆಯನ್ನು ಶುಭ್ರವಾಗಿ ಮತ್ತು ಸರಿಯಾಗಿ ಸಮಯದಲ್ಲಿ ಪೂಜೆ ಪುನಸ್ಕಾರ ಮಾಡುವ ಮೂಲಕ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಬರ ಮಾಡಿಕೊಳ್ಳಬಹುದು ನಾವು ಈ ಲೇಖನದ ಮೂಲಕ ಸ್ತ್ರೀ ಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟಗಳು ಸಾಮಾನ್ಯ ಕಷ್ಟಗಳನ್ನು ಎದುರಿಸುವುದೆ ಜೀವನವಾಗಿದೆ ಇದರ ಪರಿಹಾರಕ್ಕಾಗಿ ಪ್ರತಿದಿನ ವಾಸ್ತು ಪೂಜೆ ಮಾಡಬೇಕು ಹಾಗೆಯೇ ಸೂರ್ಯನ ಆರಾಧನೆ ಮಾಡಬೇಕು ಗಣಪತಿಯ ಆರಾಧನೆ ಮಾಡಬೇಕು ದೇವಿಯ ಆರಾಧನೆ ಸಹ ಮಾಡಬೇಕು ಶಿವನ ಆರಾಧನೆಯನ್ನು ಪ್ರತಿದಿನ ಮಾಡಬೇಕು ವಿಷ್ಣುವಿನ ಆರಾಧನೆ ಪ್ರತಿದಿನ ಮಾಡಬೇಕು ಇವೆಲ್ಲ ಆರಾಧನೆಯನ್ನು ಇಂದಿನ ಯುಗದಲ್ಲಿ ಮಾಡಲು ಆಗುವುದು ಇಲ್ಲ. ಇವೆಲ್ಲ ದೇವರ ಆರಾಧನೆ ಮಾಡದೆ ಇದ್ದಾಗ ಜೀವನದಲ್ಲಿ ಕಷ್ಟಗಳು ಒಂದಾಗಿ ಒಂದು ಬರುತ್ತದೆ
ಇವೆಲ್ಲ ಕಷ್ಟಗಳಿಂದ ಹೊರಬರಲು ಮನೆಯ ಕರ್ತವ್ಯವನ್ನು ಸರಿಯಾಗಿ ಮಾಡಬೇಕು ಪ್ರತಿದಿನ ಹೆಣ್ಣು ಮಕ್ಕಳು ಮಾಡುವ ತಪ್ಪು ದಾರಿದ್ರ್ಯವನ್ನು ಮನೆಗೆ ಕರೆದಂತೆ ಆಗುತ್ತದೆ ಸಾಯಂಕಾಲ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸುವುದು ರಂಗೋಲಿ ಹಾಕುವುದು ತುಂಬಾ ಕೆಟ್ಟದ್ದು ತುಂಬಾ ಜನರ ಮನೆಯಲ್ಲಿ ಈ ರೀತಿಯ ರೂಢಿ ಇರುತ್ತದೆ ನಾವು ಮಾಡುವ ಕಾರ್ಯದಿಂದಲೇ ಮನೆಯಲ್ಲಿ ದಾರಿದ್ರ್ಯ ಮನೆಯಲ್ಲಿ ನೆಲೆಸುತ್ತದೆ.
ಆದರೆ ರಾತ್ರಿ ಹೊತ್ತು ಬಾಗಿಲನ್ನು ತೊಳೆದು ರಂಗೋಲಿ ಇಡಬಹುದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡು ಮನೆಯ ಮುಂದೆ ರಂಗೋಲಿ ಇಡುವುದು ತುಂಬಾ ಒಳ್ಳೆಯದು ಹೀಗೆ ಆರು ತಿಂಗಳು ಮಾಡಿದರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ವ್ಯವಹಾರಗಳು ಸಹ ಕೈ ಹಿಡಿಯುತ್ತದೆ ಹೆಣ್ಣು ಮಕ್ಕಳು ಪೂಜೆ ಪುರಸ್ಕಾರಗಳಲ್ಲಿ ಕೂದಲುಗಳನ್ನು ಬಿಚ್ಚಿ ಪೂಜೆಯನ್ನು ಮಾಡಬಾರದು ಯಾವುದೇ ಪೂಜೆ ಮಾಡುವಾಗ ಕೂದಲನ್ನು ಕಟ್ಟಿ ಪೂಜೆಯನ್ನು ಮಾಡಬೇಕು ದೇವರ ಮನೆಯನ್ನು ಸ್ವಚ್ಚಗೊಳಿಸಿ ತುಪ್ಪದ ದೀಪ ಆದರೆ ಬಲ ಭಾಗದಲ್ಲಿ ಹಚ್ಚಬೇಕು
ಹಾಗೆಯೇಎಣ್ಣೆ ದೀಪ ಆದರೆ ದೇವರ ಎಡ ಭಾಗದಲ್ಲಿ ಹಚ್ಚಬೇಕು. ಮನೆಯ ಹೆಣ್ಣು ಮಕ್ಕಳು ತುಳಸಿ ಪೂಜೆಯನ್ನು ಮಾಡಬೇಕು ತುಳಸಿ ಪೂಜೆಯಿಂದ ಅಲಕ್ಷ್ಮಿಯು ದೂರ ಆಗುತ್ತಾಳೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಸೆಳೆದುಕೊಳ್ಳುವ ಶಕ್ತಿ ಸಾಮರ್ಥ್ಯ ತುಳಸಿ ಗಿಡಕ್ಕೆ ಇರುತ್ತದೆ ಹಾಗಾಗಿ ಮನೆಯ ಹೆಣ್ಣು ಮಕ್ಕಳು ಪ್ರತಿನಿತ್ಯ ಈ ಥರ ಪೂಜಾ ವಿಧಾನವನ್ನು ಮಾಡುವ ಮೂಲಕ ಮನೆಯಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ನೆಮ್ಮದಿ ನೆಲೆಸುತ್ತದೆ ಹಾಗೆಯೇ ನಕಾರಾತ್ಮಕ ಶಕ್ತಿಗಳು ಹೊರಟು ಹೋಗುತ್ತದೆ ಧನಾತ್ಮಕ ಶಕ್ತಿಗಳು ನೆಲೆಸುತ್ತದೆ.