Hindu purana: ಈ ಸೃಷ್ಟಿಯಲ್ಲಿರುವಂತಹ ಪ್ರತಿಯೊಂದು ಜೀವಿಗೆ ಜನನ ಮರಣ ಎನ್ನುವುದು ಸಾಮಾನ್ಯ ಮನುಷ್ಯನನ್ನು ಬಿಟ್ಟುಯಾವ ಜೀವಿಯು ಕೂಡ ಈ ಜನನ ಮತ್ತು ಮರಣದ ಬಗ್ಗೆ ಯೋಚನೆ ಮಾಡುವುದಿಲ್ಲ. ಜನನ ಮತ್ತು ಮರಣದ ಬಗ್ಗೆ ಯಾವ ಜೀವಿಯು ಮಾಡದಷ್ಟು ಯೋಚನೆ ಮನುಷ್ಯ ಮಾಡುತ್ತಾನೆ. ಕೆಲವು ದಶಕಗಳಿಂದ ಮನುಷ್ಯರು ಮರಣ ಯಾಕೆ ಬರುತ್ತದೆ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾ ಇದ್ದಾರೆ.

ಹಾಗಾದರೆ ಮರಣದ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಮರಣಿಸಿದ ಪ್ರತಿಜೀವಿಗೆ ಮತ್ತೆ ಪುನರ್ಜನ್ಮ ಇರುತ್ತಾ? ಇದರ ಬಗ್ಗೆ ಗರುಡ ಪುರಾಣದಲ್ಲಿ, ವಿಜ್ಞಾನ ಮತ್ತು ಹಿಂದೂ ಪುರಾಣದಲ್ಲಿ (Hindu purana) ಏನಿದೆ ಎಂದು ನೋಡೋಣ.

ನಮ್ಮ ಭೂಮಿಯ ಮೇಲೆ ಪ್ರತಿದಿನ 1,50, 000ಕ್ಕೂ ಅಧಿಕ ಜನ ಮರಣ ಹೊಂದುತ್ತಿರುತ್ತಾರೆ. ಮರಣವೇ ಇಲ್ಲದ ಜೀವಿ ಇಲ್ಲ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. hydrozoan turritopsis dohrni ಎನ್ನುವ jelly fish ಗೆ ಎಷ್ಟು ವಯಸ್ಸಾದರೂ ಕೂಡ ಮರಣ ಬರುವುದಿಲ್ಲ. ಅಂದರೆ ನಾವು ಅದನ್ನು ಹಿಡಿದುಕೊಂಡು ಅಥವಾ ಯಾವುದಾದರೂ ಪ್ರಾಣಿ ಅದನ್ನು ಸಾಯಿಸುವವರಿಗೆ ಅದಕ್ಕೆ ಮರಣವೇ ಇರುವುದಿಲ್ಲ.

ಮರಣದ ಬಗ್ಗೆ ನಮ್ಮ ಹಿಂದೂ ಪುರಾಣದಲ್ಲಿ ಏನಿದೆ ಎಂದು ತಿಳಿದುಕೊಳ್ಳೋಣ. ‌ ನಮ್ಮ ಶರೀರದಲ್ಲಿ ಆತ್ಮ ಯಾವಾಗಲೂ ವೈಬ್ರೇಟ್ ಆಗುತ್ತಾ ಇರುತ್ತದೆ ಆ ಆತ್ಮವನ್ನೆ ನಾವು consciousness ಎಂದು ಕರೆಯುತ್ತೇವೆ. ಯಾವಾಗ ನಮ್ಮ ಶರೀರ ಆ ಆತ್ಮವನ್ನು hold ಮಾಡುವ capacity ಯನ್ನು ಕಳೆದುಕೊಳ್ಳುತ್ತೋ ಆಗ ಆ ಆತ್ಮ ದೇಹದಿಂದ ಸ್ಕಿಪ್ ಆಗಿ ಬಿಡುತ್ತದೆ .ಅದು ವಯಸ್ಸಾಗಿರುವುದರಿಂದ ಕೂಡ ಆಗಬಹುದು ಅಥವಾ ಆಕ್ಸಿಡೆಂಟ್, ಸುಸೈಡ್ ಯಾವುದೇ ರೀತಿಯಲ್ಲಿ ನಮ್ಮ ಶರೀರ ಫೇಲಾದರೆ ಮರಣ ಸಂಭವಿಸುತ್ತದೆ.

ನೀನು ಯಶಸ್ವಿಯಾಗಿ ಜೀವಿಸಲು ನಿನ್ನ ಆಲೋಚನೆಗಳೇ ನಿಮಗೆ ಸಹಾಯ ಮಾಡುತ್ತದೆ. ಸತ್ತ ನಂತರ ನಿನ್ನ ಆಲೋಚನೆಗಳು ಅಥವಾ ನಿನ್ನ ಕರ್ಮಗಳು, ಒಳ್ಳೆಯ ಕರ್ಮಗಳು ಆಗಿರಬಹುದು ಅಥವಾ ಕೆಟ್ಟ ಕರ್ಮಗಳು ಆಗಿರಬಹುದು. ಮರಣದ ನಂತರ ಏನಾಗುತ್ತೆ ಎನ್ನೋದು ನಿನ್ನ ಕರ್ಮಗಳ ಮೇಲೆ ಆಧಾರವಾಗಿರುತ್ತದೆ.

ಮರಣದಲ್ಲಿ ನಾಲ್ಕು ವಿಧ ಇರುತ್ತದೆ
ಸಕಾಲ ಮರಣ : ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮರಣದ ಬಗ್ಗೆ ಈ ರೀತಿ ಹೇಳಿದ್ದಾನೆ. ನೀವು ಪ್ರತಿದಿನ ಉಡುವ ಬಟ್ಟೆಗಳನ್ನ ಹಾಗೆ ಬಿಟ್ಟರೆ ಹೇಗೆ ಹಾಳಾಗಿ ಹೋಗುತ್ತದೆಯೋ ಅದೇ ರೀತಿ ವಯಸ್ಸಾದ ನಂತರ ಶರೀರ ಜೀವಿಸೋಕೆ ಅನುಕೂಲವಾಗಿರುವುದಿಲ್ಲ ಆಗ ಮರಣ ಸಂಭವಿಸುತ್ತದೆ.

ಅಕಾಲ ಮರಣ : ಈ ಹೆಸರನ್ನು ಕೇಳಿದ ತಕ್ಷಣ ನಿಮಗೆ ಅರ್ಥವಾಗಿರುತ್ತದೆ. ಅಪಘಾತಗಳಿಂದ, ಸೂಸೈಡ್ ಗಳಿಂದ, ಕೊಲೆಗಳಿಂದ ಆಯಸ್ಸು ಮುಗಿಯುವ ಮುಂಚೆ ಮರಣಿಸುವುದು.

ತಾತ್ಕಾಲಿಕ ಮರಣ : ಇದು ಸ್ವಲ್ಪ ಇಂಟರೆಸ್ಟಿಂಗ್ ಆಗಿದೆ ಕೆಲವು ಜನ ಮರಣಿಸಿದ ನಂತರ ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಮಧ್ಯದಲ್ಲಿ ಅವರಿಗೆ ಜೀವ ಬಂದಿದೆ ಎಂದು ಹೇಳುವುದನ್ನು ಕೇಳಿರಬಹುದು ಇದನ್ನು ತಾತ್ಕಾಲಿಕ ಮರಣ ಎಂದು ಕರೆಯುತ್ತಾರೆ. ಇದು ವಯಸ್ಸಾದ ಮುದುಕರ ವಿಷಯದಲ್ಲಿ ಮತ್ತು ಆಸ್ಪತ್ರೆಯಲ್ಲಿ ಇದ್ದಂತವರಲ್ಲಿ ಇದು ಕಂಡುಬರುತ್ತದೆ.

ಮೋಕ್ಷ : ಸಾಧುಗಳ ಮತ್ತು ಸನ್ಯಾಸಿಗಳು ಮೋಕ್ಷಕ್ಕಾಗಿ ಪ್ರಯತ್ನ ಮಾಡುತ್ತಿರುತ್ತಾರೆ. ಮೋಕ್ಷ ಎಂದರೆ ಸಾವು ಇಲ್ಲದೇ ಇರುವುದಲ್ಲ ಸತ್ತ ನಂತರ ಮತ್ತೊಂದು ಜನ್ಮ ಇಲ್ಲೇ ಇರುವಂತದ್ದು. ಇದನ್ನೂ ಓದಿ Horoscope August: ಹಲವು ವರ್ಷಗಳ ನಂತರ ಮಂಗಳ ಶುಕ್ರ ಮೈತ್ರಿ, ಈ 3 ರಾಶಿಯವರಿಗೆ ಸಂಪತ್ತು ಹೆಚ್ಚಾಗಲಿದೆ. ಇವರನ್ನ ಯಾರಿಂದಲೂ ತಡೆಯೋಕೇ ಆಗಲ್ಲ

ಸಕಾಲ ಹೊಂದಿದ್ದರೆ ಸತ್ತವರು ಶರೀರದಿಂದ ಮೂಲಾದಾರ ಎಂಬ ಚಕ್ರದಿಂದ ಆತ್ಮ ಹೊರಗಡೆ ಹೋಗುತ್ತದೆ. ಈ ಆತ್ಮ ಪ್ರೇತ ಲೋಕದಲ್ಲಿ ಮೂರು ದಿನ ಇರುತ್ತದೆ .ಅಲ್ಲಿಯವರೆಗೆ ಆ ಆತ್ಮಕ್ಕೆ emotions, feeling, attachment and memories ಎಲ್ಲವೂ ಇರುತ್ತದೆ. ನಂತರ ಆತ್ಮ ಎಲ್ಲ ರೀತಿಯ ಭಾವನೆಗಳನ್ನು ತೊರೆದು ಪ್ರೇತ ಲೋಕದಿಂದ ಪಿಶಾಚ ಲೋಕಕ್ಕೆ ಹೋಗುತ್ತವೆ.

ಸದ್ಯದಲ್ಲಿ ಸತ್ತು ಹೋದಂತವರ ಎಲ್ಲರ ಆತ್ಮವು ಕೂಡ ಪಿಶಾಚಲೋಕದಲ್ಲಿರುತ್ತದೆ ಸತ್ತು ಹೋದ ಹದಿಮೂರು ದಿನದ ಒಳಗೆ ಅವರ ಮಕ್ಕಳು ಶ್ರಾದ್ಧ ಮಾಡಿ ಪಿಂಡಪ್ರಧಾನ ಮಾಡುತ್ತಾರೋ ಅವರು ಪಿಶಾಚಲೋಕದಿಂದ ಪಿತೃ ಲೋಕಕ್ಕೆ ಹೋಗುತ್ತಾರೆ. ಅವರಿಗೆ ಇಷ್ಟವಾಗುವಂತ ತಿಂಡಿಯನ್ನು ಮಾಡಿ ಇಡುತ್ತಾರೆ .ಆಗ ಕಾಗೆ ಬಂದು ತಿಂದರೆ ಅವರ ಆತ್ಮ ಪಿಶಾಚ ಲೋಕದಿಂದ ಪಿತೃ ಲೋಕಕ್ಕೆ ಹೋಗಿದೆ ಎಂದರ್ಥ ಅದಕ್ಕಾಗಿ ಕಾಗೆ ಆ ಪಿಂಡವನ್ನು ತಿನ್ನುವ ತನಕ ಎಲ್ಲರೂ ಕಾಯುತ್ತಿರುತ್ತಾರೆ.

ಪಿತೃ ಲೋಕದಲ್ಲಿ ನಮ್ಮ ಪೂರ್ವಜರು ಇರುತ್ತಾರೆ .ಈ ಮೂರು ಲೋಕದ ನಂತರ ಅವರ ಪಾಪಗಳಿಗೆ ಶಿಕ್ಷೆ ಅನುಭವಿಸಿ ದೇವತಾ ಲೋಕಕ್ಕೆ ಹೋಗುತ್ತಾರೆ ಅದೇ ಸ್ವರ್ಗ ಲೋಕ. ಗರ್ಭಿಣಿ ಆಗುವಂತಹ ಮಹಿಳೆಯರ ದೇಹಕ್ಕೆ ಈ ಆತ್ಮಗಳು ಮರಳಿ ಸೇರಿಕೊಳ್ಳುತ್ತದೆ ಆಗ ಅವರಿಗೆ ಮತ್ತೆ ಹೊಸ ಜನ್ಮ ಶುರುವಾಗುತ್ತದೆ. ಅಪಘಾತ, ಸುಸೈಡ್ ,ಕೊಲೆಯಾದಂತಹ ವ್ಯಕ್ತಿಗಳು ಅವರು ಆಯಸ್ಸು ಮುಗಿಯೋ ತನಕ ಅವರು ಯಾವ ಲೋಕಕ್ಕೂ ಹೋಗುವುದಿಲ್ಲ ಆಯಸ್ಸು ಮುಗಿದ ಮೇಲೆ ಅವರು ಮೂರು ಲೋಕಕ್ಕೂ ಹೋಗಿ ಮತ್ತೆ ಮರುಜನ್ಮ ಪಡೆಯುತ್ತಾರೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!