ಲಕ್ಷ್ಮಿ ದೇವಿಯನ್ನ ನಾವು ಧನದ ಅಧಿ ದೇವತೆ ಎಂದು ಕರೆಯುತ್ತೇವೆ. ಸಂಪತ್ತು ಸಂವೃದ್ದಿಯನ್ನ ಕೊಡುವವಳು ಎಂದು ಪುರಾತನ ಕಾಲದಿಂದಲೂ ತಿಳಿದಿದ್ದೇವೆ. ಲಕ್ಶ್ಮಿಗೆ ಪ್ರಿಯವಾದ ಕೆಲವು ನಿಯಮಗಳನ್ನು ಪಾಲಿಸಿದರೆ ಆ ದೇವತೆ ಹೆಚ್ಚು ಹಣ ಸಂಪತ್ತನ್ನು ಕೊಡುತ್ತಾಳೆ, ಅವು ಯಾವುವು ಎಂಬುದು ಇಲ್ಲಿದೆ ನೋಡಿ.
ಕುಬೇರ ದೇವರು: ಕುಬೇರ ದೇವರನ್ನು ವಿಶ್ವದ ಧನ ರಕ್ಷಕನೆಂದು ನಂಬಿದ್ದೇವೆ, ಆದ್ದರಿಂದ ಮನೆಯಲ್ಲಿ ಕುಬೇರ ದೇವರ ಪ್ರತಿಮೆಯನ್ನು ಇಟ್ಟು ಪೂಜಿಸಬೇಕು, ಹೀಗೆ ಮಾಡಿದರೆ ಲಕ್ಷ್ಮೀದೇವಿಯನ್ನು ಸಂತೋಷ ಪಡಿಸಬಹುದು. ಯಾವಾಗಲು ಪ್ರತಿಮೆ ಇಡುವ ಸ್ಥಳವನ್ನ ಸ್ವಚ್ಛವಾಗಿಡಬೇಕು.
ಕವಡೆ: ಈ ಕವಡೆಯನ್ನು ಸಾಮಾನ್ಯವಾಗಿ ಮಕ್ಕಳು ಆಟವಾಡಲು ಬಳಸುತ್ತಾರೆ. ಅಲ್ಲದೆ ಇವುಗಳು ಶಸ್ತ್ರ ಹೇಳುವವರ ಹತ್ತಿರವೂ ಇರುತ್ತವೆ. ಇವುಗಳು ಸಮುದ್ರದಿಂದ ಹೊರಬರುತ್ತವೆ ಅಗಾಗಿಯೇ ಇವಕ್ಕೂ ದೇವಿಗೂ ಹೆಚ್ಚಿನ ಸಂಬಂಧವಿದೆ. ಏಕೆಂದರೆ ಲಕ್ಷ್ಮಿ ದೇವಿಯು ಸಮುದ್ರದಿಂದ ಹೊರಬಂದವಳು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಕವಡೆಯನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿಯನ್ನು ಆಕರ್ಷಿಸಿದಹಾಗೆ ಎನ್ನಲಾಗುತ್ತದೆ.
ಸಣ್ಣ ತೆಂಗಿನನಕಾಯಿ: ಇದು ಸಾಮಾನ್ಯವಾಗಿ ಇರುವ ತೆಂಗಿನಕಾಯಿಗಿಂತ ಚಿಕ್ಕದಾಗಿರುತ್ತದೆ. ಇದನ್ನು ಶರೀಫಲ್ ಎಂದು ಕರೆಯುತ್ತಾರೆ. ಇದರ ಅರ್ಥ ಲಕ್ಷ್ಮಿಯ ಹಣ್ಣು, ಆದ್ದರಿಂದ ಮನೆಯಲ್ಲಿ ಈ ತೆಂಗಿನಕಾಯಿಯನ್ನು ಪೂಜಿಸಿದರೆ ಲಕ್ಷ್ಮೀದೇವಿ ನಿಮಗೆ ಒಲಿಯುತ್ತಾಳೆ.
ದಕ್ಷಿಣ ಬಾಯಿ ಶಂಖ: ಈ ದಕ್ಷಿಣ ಬಾಯಿ ಶಂಖವನ್ನ ಬಹಳ ವಿಶೇಷವಾದ ಶಂಖ ಎಂದು ಹೇಳುತ್ತಾರೆ. ಹಾಗಾಗಿ ಇಅದನ್ನು ಆರಾಧನಾ ಕೊರಡಿಯಲ್ಲಿ ಅಥವಾ ಕೈಚೀಲದಲ್ಲಿ ಇಟ್ಟುಕೊಂಡರೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಬರುತ್ತಾಳೆ. ಇಲ್ಲಿ ನಾವು ತಿಳಿಸಿರುವ ವಸ್ತುಗಳಲ್ಲಿ ಯಾವುದಾದರು ಒಂದನ್ನ ಇಟ್ಟು ಪೂಜೆಮಾಡಿದರೆ ಸಾಕು ಲಕ್ಷ್ಮೀದೇವಿ ನಿಮಗೆ ಒಲಿಯುವಳು.