ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೇಗ ಎದ್ದು ಮನೆಕೆಲಸವನ್ನು ಮಾಡಿ ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆಯನ್ನು ಮಾಡುತ್ತಿದ್ದರು.ಈಗ ಕಾಲ ಬದಲಾಗಿದೆ ಮಹಿಳೆಯರು ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಮನೆಯಲ್ಲಿನ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮಹಿಳೆ ಕೆಲಸ ಮಾಡುತ್ತಾಳೆ. ಯಾವ ಮನೆಯಲ್ಲಿ ಸಂಸ್ಕಾರ, ಸಂಪ್ರದಾಯಗಳಿರುತ್ತವೆಯೋ ಅ ಮನೆಯಲ್ಲಿ ಲಕ್ಷ್ಮೀ ನೆಲಸಿರುತ್ತಾಳೆ. ವಾಸ್ತು ಹಾಗೂ ಗ್ರಂಥಗಳ ಪ್ರಕಾರ ಮಹಿಳೆಯರು ಬೆಳಗ್ಗೆ ಈ ಕೆಲಸವನ್ನು ಮಾಡಬೇಕು. ಮನೆಯ ದ್ವಾರಬಾಗಿಲು ಸ್ವಚ್ಛ ತೆ ಹಾಗೂ ಅಂಗಳ ಗೂಡಿಸುವುದನ್ನು ಬೆಳಗ್ಗೆನೆ ಮಾಡಬೇಕು.ಅಲ್ಲದೆ ನಿಮ್ಮ ಮನೆಯೂ ವಾಸ್ತು ದೋಷದಿಂದ ಮುಕ್ತವಾಗಿರುವುದು ಮುಖ್ಯವಾಗುತ್ತದೆ.
ಮನೆಯ ಮುಂದೆ ರಂಗೋಲಿ ಹಾಕಿ ದ್ವಾರಬಾಗಿಲನ್ನು ಹೂಗಳಿಂದ ಅಲಂಕರಿಸಬೇಕು.ಮನೆಯು ಮಡಿ ಯಿಂದ, ಶುಚಿಯಾಗಿ, ಸುಂದರವಾಗಿದ್ದರೆ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬರಲು ಮನಸ್ಸು ಮಾಡುತ್ತಾಳೆ.
ಮನೆಯ ಬಳಿ ಯಾವುದೇ ಮರಗಳ ಪೂದೆ ಇರಬಾರದು.ಅಲ್ಲದೆ ದ್ವಾರಬಾಗಿಲಿನಿಂದ ಪದೇ ಪದೇ ಶಬ್ಧ ಮಾಡಬಾರದು ಇದರಿಂದ ಮನೆಗೆ ಶುಭಕರವಲ್ಲ. ಹೀಗೆ ಮನೆಯಲ್ಲಿ ಈ ನಿಯಮವನ್ನು ಅನುಸರಿಸಿ ಲಕ್ಷ್ಮೀ ಯನ್ನು ಆಹ್ವಾನಿಸಿಕೊಳ್ಳಿ.