ಆರೋಗ್ಯವೇ ಸಂಪತ್ತು ಎನ್ನುವ ಗಾದೆ ಇದೆ. ಮನುಷ್ಯನ ಜೀವನದಲ್ಲಿ ಆರೋಗ್ಯ ಎನ್ನುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಆರೋಗ್ಯ ಇದ್ದರೆ ಮಾತ್ರ ಮನುಷ್ಯ ಏನನ್ನಾದರೂ ಸಾಧಿಸಲು ಸಾಧ್ಯ. ಆರೋಗ್ಯ ಬೇಕು ಎಂದಾದರೆ ಆರೋಗ್ಯಕ್ಕೆ ಬೇಕಾಗಿರುವ ಎಲ್ಲ ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಮತ್ತು ವಿಟಮಿನ್ ಗಳು ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಆದ್ದರಿಂದ ನಾವು ಇಲ್ಲಿ ಪ್ರೊಟೀನ್ ಇರುವ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಆರೋಗ್ಯ ಎನ್ನುವುದು ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಆರೋಗ್ಯ ಇದ್ದರೆ ಮಾತ್ರ ಏನಾದರೂ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಯಾವುದೇ ಕೆಲಸ ಮಾಡಬೇಕೆಂದರೂ ಶಕ್ತಿ ಬೇಕಾಗುತ್ತದೆ ಶಕ್ತಿ ಬೇಕು ಎಂದಾದರೆ ಸರಿಯಾಗಿ ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ. ಅದರಲ್ಲೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯಯುತ ಆಹಾರವನ್ನು ಸೇವನೆ ಮಾಡುವವರು ಬಹಳ ಕಡಿಮೆಯಾಗಿದ್ದಾರೆ.
ಪ್ರೊಟೀನ್ ಗಳು ಕೆಲವು ಆಹಾರ ಪದಾರ್ಥಗಳಲ್ಲಿ ಸಿಗುತ್ತದೆ. 100ಗ್ರಾಮ್ ಬಾಳೆಹಣ್ಣಿನಲ್ಲಿ 1.1ಗ್ರಾಮ್ ಪ್ರೊಟೀನ್ ಸಿಗುತ್ತದೆ. 100ಗ್ರಾಮ್ ಬೆಣ್ಣೆಹಣ್ಣಿನಲ್ಲಿ 2ಗ್ರಾಮ್ ಪ್ರೊಟೀನ್ ಸಿಗುತ್ತದೆ. 100ಗ್ರಾಮ್ ಬಟಾಟೆ, ಬ್ರೌನ್ ರೈಸ್ 2.5ಗ್ರಾಮ್ ಪ್ರೊಟೀನ್ ಸಿಗುತ್ತದೆ. ಹಾಗೆಯೇ 100ಗ್ರಾಮ್ ಬ್ರೋಕೌಲಿಯಲ್ಲಿ 2.8ಗ್ರಾಮ್ ಪ್ರೊಟೀನ್ ಇರುತ್ತದೆ. ಕೆಲವು ಸೊಪ್ಪುಗಳಲ್ಲಿ 2.9ರಿಂದ 3.4ಗ್ರಾಮ್ ಪ್ರೊಟೀನ್ ದೊರೆಯುತ್ತದೆ. ಅವರೆ, ಕೆಂಪುಅವರೆ, ಬಟಾಣಿ, ಕಾಬೂಲ್ ಕಡಲೆ ಸುಮಾರು 4ವರೆ ಗ್ರಾಮ್ ನಿಂದ 5ವರೆ ಗ್ರಾಮ್ ನಷ್ಟು ಪ್ರೊಟೀನ್ ಸಿಗುತ್ತದೆ.
ಹಾಗೆಯೇ ಚೀಸ್, ಹಾಲು ಇವುಗಳಲ್ಲಿ ಸುಮಾರು 100ಗ್ರಾಮ್ ಸೇವನೆ ಮಾಡಿದರೆ 9ಗ್ರಾಮ್ ಪ್ರೊಟೀನ್ ದೊರೆಯುತ್ತದೆ. ಸೋಯಾಬೀನ್ ಮತ್ತು ಮೊಟ್ಟೆ ಸುಮಾರು 100ಗ್ರಾಮ್ ಸೇವನೆ ಮಾಡಿದರೆ 13ಗ್ರಾಮ್ ದೊರೆಯುತ್ತದೆ. ಹಾಗೆಯೇ ವಾಲ್ ನಟ್ಸ್, ಡ್ರೈಫ್ರೂಟ್ಸ್ ಗಳಲ್ಲಿ 15ಗ್ರಾಮ್ ಪ್ರೊಟೀನ್ ಸಿಗುತ್ತದೆ. ಅತಿ ಹೆಚ್ಚಿನ ಪ್ರೊಟೀನ್ ಗಳು ಪೀನಟ್, ಮಟನ್, ಕುಂಬಳಕಾಯಿ ಬೀಜ, ಪೀನಟ್ ಬಟರ್ ನಲ್ಲಿ ಇರುತ್ತದೆ. ಆದ್ದರಿಂದ ಇವೆಲ್ಲ ತಿಂದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.