ಸುಲಭವಾಗಿ ರುಚಿಯಾಗಿ ಹೆಸರುಬೇಳೆ ಹಾಗೂ ರವೆ ಪಾಯಸ ಹೇಗೆ ಮಾಡೋದು ಅನ್ನೋದನ್ನ ನೋಡೋಣ.ಬೇಕಾಗುವ ಸಾಮಗ್ರಿಗಳು:ಹೆಸರು ಬೇಳೆ ಅರ್ಧ ಕಪ್ ,ರವೆ ಕಾಲು ಕಪ್, ಬೆಲ್ಲ ಮುಕ್ಕಾಲು ಕಪ್, ಒಣ ಕೊಬ್ಬರಿ ತುರಿ ಕಾಲು ಕಪ್, ಹಾಲು ಅರ್ಧ ಕಪ್, ತುಪ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ
ಮಾಡುವ ವಿಧಾನ :ಮೊದಲು ಹೆಸರುಬೇಳೆಯನ್ನು ಹಾಗೆ ಸ್ವಲ್ಪ ಕೆಂಪು ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು. ಇದನ್ನ ಒಂದೆರಡು ಬಾರಿ ತೊಳೆದು ಕುಕ್ಕರ್ ಗೆ ಹಾಕಿ ಮೂರು ನಾಲ್ಕು ವಿಸಿಲ್ ಕೂಗಿಸಿ ಬೇಯಿಸಿಕೊಳ್ಳಬೇಕು ( ಇಲ್ಲಿ ಅರ್ಧ ಕಪ್ ಹೆಸರು ಬೇಳೆಗೆ 4 ಕಪ್ ನೀರು ಬೇಕಾಗುವುದು). ನಂತರ ಬೆಲ್ಲವನ್ನು ಅರ್ಧ ಕಪ್ ನೀರು ಹಾಕಿ ಕರಗಿಸಿಕೊಳ್ಳಬೇಕು. ನಂತರ ಒಂದು ಬಾಣಲೆಗೆ ಒಂದು ಟೀ ಸ್ಪೂನ್ ತುಪ್ಪ ಹಾಕಿಕೊಂಡು ದ್ರಾಕ್ಷಿ ಗೋಡಂಬಿ ಸೇರಿಸಿ ಹುರಿದು ತೆಗೆದಿಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ ರವೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
ನಂತರ ಕಾಲು ಕಪ್ ರವೆಗೆ ಮುಕ್ಕಾಲು ಕಪ್ ಬಿಸಿ ಬೀರನ್ನು ಹಾಕಿಕೊಳ್ಳುತ್ತಾ ಗಂಟು ಆಗದ ಹಾಗೇ ಕೈ ಆಡಿಸುತ್ತಾ ಇರಬೇಕು. ರವೆ ಬೆಂದ ನಂತರ ಮತ್ತಷ್ಟು ಹೆಚ್ಚಾಗತ್ತೆ. ನಂತರ ಬೇಯಿಸಿಟ್ಟುಕೊಂಡ ಹೆಸರುಬೇಳೆಯನ್ನು ರವೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕರಗಿಸಿಟ್ಟುಕೊಂಡ ಬೆಲ್ಲವನ್ನು ಸಹ ಸೇರಿಸಿ ಮತ್ತೆ ಮಿಕ್ಸ್ ಮಾಡಿಕೊಳ್ಳಬೇಕು. ಬೆಲ್ಲ ಸೇರಿಸಿದ ಮೇಲೆ ಒಂದು ಕುದಿ ಬಂದ ನಂತರ ಒಣ ಕೊಬ್ಬರಿ ತುರಿಯನ್ನು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಮಧ್ಯಮ ಉರಿಯಲ್ಲಿ ನಾಲ್ಕೈದು ನಿಮಿಷಗಳ ಕಾಲ ಬಿಸಿ ಮಾಡುತ್ತಲೇ ಇರಬೇಕು. ನಂತರ ಕಾಯಿಸಿ ಆರಿಸಿದ ಹಾಲನ್ನು ಸೇರಿಸಿ ಮೊದಲೇ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿ ಒಂದು ಕುದಿ ಕುದಿಸಬೇಕು. ಈ ಅಳತೆಯಲ್ಲಿ 10 ಬಟ್ಟಲು ಪಾಯಸ ಮಾಡಬಹುದು. ಈ ಕೆಳಗಿನ ವಿಡಿಯೋ ನೋಡಿ.
ನಿಮಗೆ ಈ ರೆಸಪಿ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾಗು ಮರೆಯದೆ ನಮ್ಮ ಪೇಜ್ ಅನ್ನು ಬೆಂಬಲಿಸಿ