ಕೆಲವೊಂದಿಷ್ಟು ಜನರನ್ನ ನೋಡಿದರೆ ಅವರು ಹುಟ್ಟಿರುವುದೇ ಬೇರೆಯವರಿಗೆ ಸಹಾಯ ಮಾಡೋಕೆ ಅನ್ನುವ ಹಾಗೆ ಇರುತ್ತಾರೆ. ಯಾವತ್ತಿಗೂ ಹಣದ ಮೌಲ್ಯವನ್ನ ನೋಡುವುದಿಲ್ಲ. ಅದರ ಬದಲಿಗೆ ಮಾನಯೀಯ ಮೌಲ್ಯಗಳನ್ನು ಮತ್ತೆ ಹೃದಯ ವೈಶಾಲ್ಯತೆಯನ್ನು ನೋಡುತ್ತಾರೆ. ಇಲ್ಲೊಬ್ಬ ಕನ್ನಡದ ನಟನೂ ಕೂಡಾ ಹಾಗೆ. ಹಿಂದೆ ಮುಂದೆ ನೋಡದೆ ಏನೂ ಯೋಚನೆ ಮಾಡದೆ ನೂರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ದಾನ ಮಾಡಿದ್ದಾರೆ. ಅವರು ಯಾರು ಯಾತಕ್ಕಾಗಿ ಅಷ್ಟೊಂದು ಬೆಲೆ ಬಾಳುವ ಆಸ್ತಿಯನ್ನ ದಾನ ಮಾಡಿದ್ರು ಯಾರಿಗಾಗಿ ದಾನ ಮಾಡಿದ್ದರು ಅನ್ನುವುದನ್ನ ತಿಳಿದರೆ ಅವರ ಮೇಲೆಯಿನ ಮತ್ತಷ್ಟು ಹೆಚ್ಚು ಆಗುವುದರಲ್ಲಿ ಅನುಮಾನ ಇಲ್ಲ. ಹಾಗಾದ್ರೆ ಆ ನಟ ಯಾರು ಅನ್ನೋದನ್ನ ನೋಡೋಣ ಬನ್ನಿ.
ಒಂದು ಕಡೆ ದಟ್ಟ ಪರ್ವತ ಪ್ರದೇಶದಗಳು ಒಂದು ಕಡೆ ಕೊರೆಯುವ ಚಳಿ, ಇನ್ನೊಂದು ಕಡೆ ಪಾಪಿ ಪಾಕಿಸ್ತಾನ ಇನ್ನೊಂದು ಕಡೆ ಕುತಂತ್ರಿ ಚೀನಾ. ಹೀಗೆ ಭಾರತವನ್ನು ನಾಶ ಮಾಡಲು ಹೊಂಚು ಹಾಕಿ ಕುಳಿತಿರುವ ಶತ್ರುಗಳ ಎದುರು ಗೋಡೆಯಂತೆ ನಿಂತು ನಮ್ಮನ್ನೆಲ್ಲ ರಕ್ಷಣೆ ಮಾಡುತ್ತ ಇದ್ದಾರೆ ನಮ್ಮ ವೀರ ಸೈನಿಕರು. ಆ ಎಲ್ಲ ವೀರ ಇಧರಿಗೆ ನಾವು ಎಷ್ಟು ಆಭಾರಿ ಆಗಿದ್ದರು ಸಾಲದು. ನಮಗಾಗಿ ಹಗಲು ರಾತ್ರಿ, ಚಳಿ ಗಾಳಿ ಬಿಸಿಲಿ ಮಳೆ ಎನ್ನದೇ ದಿನದ 24 ಗಂಟೆಯೂ ಕಾವಲು ಕಾಯುತ್ತಾ ಇರುವ ಸೈನಿಕರಿಗಾಗಿ 170 ಎಕರೆ ಜಮೀನನ್ನು ಕನ್ನಡದ ಖ್ಯಾತ ನಟರೊಬ್ಬರು ನೀಡಿದ್ದಾರೆ. ಅವರು ಯಾರಿರಬಹುದು??
ಮೂರು ಭಾಷೆಗಳಲ್ಲಿ ಸೋಲಿಲ್ಲದ ಸರದಾರನಂತೇ ಟಾಪ್ ನಟನಾಗಿ ಇದ್ದಾಗ ಕಾಣದ ಕೆಟ್ಟ ಕೈಗಳಿಗೆ ಸಿಕ್ಕಿ, ಒಂದು ವರ್ಷ ಜೈಲಿನಲ್ಲಿ ಇದ್ದು ಮತ್ತೆ ಆ ಸ್ಥಾನವನ್ನು ಪಡೆಯಲು ಆಗದ ಕನ್ನಡದ ನಟ ಸುಮನ್. ಇವರು ಹೃದಯ ಶ್ರೀಮಂತಿಕೆಯಲ್ಲಿ ಸೂಪರ್ ಹೀರೋ. ಯುದ್ಧದಲ್ಲಿ ಮರಣ ಹೊಂದಿದ ವೀರ ಯೋಧರಿಗಾಗಿ ಹೈದ್ರಾಬಾದಿನಲ್ಲಿ ಪೂರ್ಣಗಿರಿ ಎಂಬಲ್ಲಿ ಇದ್ದ ತನ್ನ 170 ಎಕರೆ ಜಮೀನನ್ನು ನಟ ಸುಮನ್ ನೀಡಿದ್ದಾರೆ. ಇಲ್ಲಿ ಈ ಪ್ರದೇಶದಲ್ಲಿ ಅಬ್ಬಬ್ಬಾ ಅಂದರೂ ಒಂದು ಎಕರೆಗೆ ಒಂದರಿಂದ ಒಂದೂವರೆ ಕೋಟಿ ಬೆಲೆ ಬಾಳುವ ಜಮೀನು ಅದು. ಅದರ ಪಕ್ಕದಲ್ಲಿಯೇ ಮೆಟ್ರೋ ರೂಟ್ ಕೂಡಾ ಸಿದ್ಧ ಆಗುತ್ತಾ ಇದೇ. ಆದರೆ ಇದ್ಯಾವುದನ್ನು ಲೆಕ್ಕಿಸದ ನಟ ಸುಮನ್, ಇದ್ಯಾವುದನ್ನೂ ಲೆಕ್ಕಿಸದೆ ವೀರ ಯೋಧರ ಕುಟುಂಬಗಳಿಗೆ ನೀಡಿದ್ದಾರೆ.
ದೇಶದ ಒಳಗೆ ಇರುವ ನಮಗಾಗಿ ಯೋಧರು ಗಡಿಯಲ್ಲಿ ನಿಂತು ಕಾವಲು ಕಾಯುತ್ತಾ, ಹೋರಾಡುತ್ತಾ, ಪ್ರಾಣಾರ್ಪಣೆ ಮಾಡುತ್ತಾರೆ. ಹಾಗಾಗಿ ಯೋಧರ ಕುಟುಂಬಗಳಿಗೆ ಆದಂತಹ ನಷ್ಟವಕ್ಕೆ ಹೋಲಿಕೆ ಮಾಡಿದರೆ ತಾನು ಇಷ್ಟು ಜಮೀನನ್ನು ಕಳೆಸುಕೊಳ್ಳುವುದು ದೊಡ್ಡ ನಷ್ಟ ಏನೂ ಅಲ್ಲ ಎಂದು ತಿಳಿದು, ನಟ ಸುಮನ್ ಅವರು ಹಿಂದೆ ಮುಂದೆ ಯೋಚನೆ ಮಾಡದೆ ಜಮೀನುಗಳನ್ನು ಯೋಧರ ಕುಟುಂಬಗಳಿಗೆ ಬರೆದುಕೊಟ್ಟು ಮಾದರಿ ಆಗಿದ್ದಾರೆ. ಒಂದು ಚಿಕ್ಕ ಸಹಾಯ ಮಾಡಿದ್ದನ್ನು ಫೋಟೋ ತೆಗೆದು ಬಿಲ್ಡಪ್ ತೆಗೆದುಕೊಳ್ಳುವ ಎಷ್ಟೋ ಸಿಲೆಬ್ರೆಟಿ ಸ್ಟಾರ್ ಗಳ ಮಧ್ಯೆ ಯಾವುದೇ ಪಬ್ಲಿಸಿಟಿ ಮಾಡಿಕೊಳ್ಳದೆ ತನ್ನ170 ಎಕರೆ ಜಮೀನನ್ನು ಯೋಧರಿಗಾಗಿ ದಾನ ಮಾಡಿದ ನಟ ಸುಮನ್ ಅವರು ನಿಜಕ್ಕೂ ಗ್ರೇಟ್. ಬರೀ ಸ್ಟಾರ್ ಗಿರಿ ಇಟ್ಟುಕೊಂಡರೆ ಏನು ಪ್ರಯೋಜನ?ಅದರ ಜೊತೆಗೆ ಹೃದಯ ಶ್ರೀಮಂತಿಕೆ ಕೂಡಾ ಇರಬೇಕು ಅಲ್ಲವೇ ನಾವು ನಮ್ಮವರ ಜಿತೆ ಯಾವುದೇ ಭಯ ಇಲ್ಲದೆ ದಿನ ಕಳೆಯುತ್ತೇವೆ ಅಂದರೆ ಅದಕ್ಕೆ ಕಾರಣ.ತಮ್ಮವರನ್ನೆಲ್ಲ ಬಿಟ್ಟು ದಿನದ 24 ಗಂಟೆಯೂ ಹೆಗಲು ಕೊಟ್ಟು ನಿಂತ ಯೋಧರು ಶತ್ರುಗಳ ಜೊತೆ ಹೋರಾಡಿ ವೀರ ಮರಣ ಹೊಂದಿದ ಯೋಧರ ಕುಟುಂಬಗಳಿಗೆ ನಟ ಸುಮನ್ ಮಾಡಿದ ಸಹಾಯ ಎಲ್ಲರೂ ಮೆಚ್ಚುವಂತದ್ದು.