ಡ್ರೈ ಫ್ರೂಟ್ಸ್ ಸೇವಿಸುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳು ಯಾವುವು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಡ್ರೈ ಫ್ರೂಟ್ಸ್ ಗಳನ್ನು ಸ್ನಾಕ್ಸ್ ರೂಪದಲ್ಲಿ ತಿನ್ನುವುದು ಬಹಳ ಒಳ್ಳೆಯದು. ಡ್ರೈಫ್ರೂಟ್ಸ್ ನಲ್ಲಿರುವ ಕೊಬ್ಬಿನ ಅಂಶ ದೇಹಕ್ಕೆ ಒಳ್ಳೆಯದು. ಇದರಲ್ಲಿರುವ ಕ್ಯಾಲೋರಿಗಳು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಲ್ಲಿರುವ ನ್ಯಾಚುರಲ್ ಶುಗರ್ ಶರೀರಕ್ಕೆ ತೊಂದರೆ ಕೊಡುವುದಿಲ್ಲ. ಡ್ರೈ ಫ್ರೂಟ್ಸ್ ನಲ್ಲಿ ಐರನ್, ಕ್ಯಾಲ್ಶಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ ನಂತಹ ಮಿನರಲ್ಸ್ ಇದೆ ಅಲ್ಲದೇ ವಿಟಮಿನ್ಸ್, ಫೈಬರ್, ಒಮೆಗಾ ತ್ರಿ ಇವು ಶರೀರಕ್ಕೆ ಶಕ್ತಿ ಕೊಡುತ್ತದೆ ಅಲ್ಲದೇ ಆಕ್ಟೀವ್ ಆಗಿರಲು ಸಹಾಯಕಾರಿಯಾಗಿದೆ.
ಬಾದಾಮಿಯನ್ನು ರಾತ್ರಿ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ತಿನ್ನುವುದು ಬಹಳ ಲಾಭದಾಯಕ ಇದರಲ್ಲಿರುವ ವಿಟಮಿನ್ ಇ ಇಮ್ಮ್ಯುನ್ ಸಿಸ್ಟಮ್ ನ್ನು ಹೆಚ್ಚಿಸುತ್ತದೆ ಹಾಗೂ ಶರೀರವನ್ನು ಇನ್ ಫೆಕ್ಷನ್ ನಿಂದ ರಕ್ಷಿಸುತ್ತದೆ. ತಜ್ಞರ ಪ್ರಕಾರ ಪ್ರತಿದಿನ 5-6 ಬಾದಾಮಿ ತಿನ್ನುವುದು ಒಳ್ಳೆಯದು.
ಗೋಡಂಬಿ ಹಾಗೂ ಪಿಸ್ತಾವನ್ನು ಸಂಜೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ತಕ್ಷಣ ಶಕ್ತಿ ಕೊಡುತ್ತದೆ ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ ಮತ್ತು ಹಲ್ಲು ಹುಳುಕಾಗುವುದನ್ನು ತಡೆಯುತ್ತದೆ. ಅಲ್ಲದೇ ಇದು ರಕ್ತಚಲನೆಗೆ ಹಾಗೂ ಮಸಲ್ಸ್ ಗೆ ಶಕ್ತಿ ಕೊಡುತ್ತದೆ.
ಪಿಸ್ತಾ ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಖರ್ಜೂರ, ಒಣದ್ರಾಕ್ಷಿ, ಆಕ್ರೋಟ್ ಇವುಗಳನ್ನು ರಾತ್ರಿ ಸೇವಿಸಬೇಕು ಒಣದ್ರಾಕ್ಷಿಯಲ್ಲಿ ಡಯಟರಿ ಫೈಬರ್ ಇರುವುದರಿಂದ ಪಚನಕ್ರಿಯೆ ಸರಿಯಾಗಲು ಸಹಾಯಕಾರಿಯಾಗಿದೆ. 2 ಒಣದ್ರಾಕ್ಷಿ, 1 ಖರ್ಜೂರ, 3-4 ಆಕ್ರೋಟ್ ನ್ನು ರಾತ್ರಿ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ, ಡ್ರೈ ಫ್ರೂಟ್ಸ್ ತಿನ್ನುವುದು ಮಕ್ಕಳಿಂದ ಹಿಡಿದು ವೃದ್ದರವರೆಗೆ ಉಪಯೋಗ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.