ಸಾಮಾನ್ಯವಾಗಿ ಎಲ್ಲಾ ಹಣ್ಣುಗಳು ಉತ್ತಮ ಆರೋಗ್ಯಕರ ಗುಣಗಳನ್ನು ಹೊಂದಿರುತ್ತವೆ. ಹಳ್ಳಿಗಳಲ್ಲಿ ಕಾಣ ಸಿಗುವ ಪಪ್ಪಾಯ ಹಣ್ಣು ಸೇವನೆಯಿಂದ ಕೆಲವು ಆರೋಗ್ಯಕರ ಲಾಭವಿದೆ ಅದರಂತೆ ಕೆಲವರು ಪಪ್ಪಾಯ ಸೇವನೆ ಮಾಡಬಾರದು. ಹಾಗಾದರೆ ಪಪ್ಪಾಯ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಹಾಗೂ ಯಾರೆಲ್ಲಾ ಪಪ್ಪಾಯ ಸೇವನೆ ಮಾಡಬಾರದು ಎಂದು ಈ ಲೇಖನದಲ್ಲಿ ನೋಡೋಣ.
ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ಆದರೆ ವೈದ್ಯರು ಪಪ್ಪಾಯ ತಿನ್ನಲು ಹೆಚ್ಚಿನ ಜನರಿಗೆ ಸಲಹೆ ನೀಡುವುದಿಲ್ಲ ಏಕೆಂದರೆ ಪಪ್ಪಾಯಿಯು ಕೆಲವರಿಗೆ ಹಾನಿಕಾರಕವಾಗಿದೆ. ಪಪ್ಪಾಯಿಯು ಫೈಬರ್ ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳಿಂದ ತುಂಬಿದೆ. ಇದು ಜೀರ್ಣಕ್ರಿಯೆ, ತೂಕ ಹೆಚ್ಚಾಗುವುದು, ಮಧುಮೇಹ, ಕ್ಯಾನ್ಸರ್ ಮುಂತಾದ ಖಾಯಿಲೆಗಳಿಂದ ರಕ್ಷಿಸುತ್ತದೆ.
ವಿಶೇಷವೆಂದರೆ ಈ ಹಣ್ಣನ್ನು ಪ್ರತಿ ಸೀಸನ್‌ನಲ್ಲಿಯೂ ಸುಲಭವಾಗಿ ಪಡೆಯಬಹುದು. ಪಪ್ಪಾಯಿ ಸೇವಿಸುವವರು ಕಾಳಜಿಯನ್ನು ವಹಿಸಬೇಕಾಗುತ್ತದೆ ಏಕೆಂದರೆ ಪಪ್ಪಾಯಿ ಸೇವನೆ ಕೆಲವರಿಗೆ ವರ್ಜಿತ ಎಂದು ಹೇಳಲಾಗಿದೆ. ಹೃದಯ ಬಡಿತವು ಅನಿಯಂತ್ರಿತವಾಗಿದ್ದರೆ ಪಪ್ಪಾಯಿಯನ್ನು ಸೇವಿಸಬಾರದು ಆದರೂ ಕೂಡ ಪಪ್ಪಾಯಿಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಪಪ್ಪಾಯ ಹಣ್ಣು ಸೈನೋಜೆನಿಕ್ ಗ್ಲೈಕೋಸೈಡ್ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ, ಇದು ಜೀರ್ಣಾಂಗದಲ್ಲಿ ಹೈಡ್ರೋಜನ್ ಸೈನೈಡ್ ಅನ್ನು ಉತ್ಪಾದಿಸುತ್ತದೆ ಆದರೆ ಇದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಹೃದಯ ಬಡಿತವು ಅನಿಯಂತ್ರಿತವಾಗಿದ್ದರೆ ಅವರು ಪಪ್ಪಾಯ ಸೇವಿಸಿದರೆ ಹಾನಿಯುಂಟು ಮಾಡುತ್ತದೆ. ಗರ್ಭಿಣಿಯರು ಪಪ್ಪಾಯಿ ತಿನ್ನಬಾರದು ಎಂದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಪಪ್ಪಾಯಿಯು ಲ್ಯಾಟೆಕ್ಸ್ ಅನ್ನು ಹೊಂದಿರುತ್ತದೆ ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ ಅಂತಹ ಪರಿಸ್ಥಿತಿಯಲ್ಲಿ, ಅಬಾರ್ಶನ್ ಸಾಧ್ಯತೆಯಿದೆ.
ಇದಲ್ಲದೆ, ಪಪ್ಪಾಯಿಯು ಪಾಪೈನ್ ಅನ್ನು ಹೊಂದಿರುತ್ತದೆ, ಇದನ್ನು ನಮ್ಮ ದೇಹವು ಪ್ರೋಸ್ಟಗ್ಲಾಂಡಿನ್ ಎಂದು ತಪ್ಪಾಗಿ ಗ್ರಹಿಸುತ್ತದೆ. ಇದು ಭ್ರೂಣದ ಪೊರೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಪಪ್ಪಾಯಿ ತಿನ್ನುವುದನ್ನು ತಪ್ಪಿಸಬೇಕು. ಇದಲ್ಲದೆ ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಪಪ್ಪಾಯಿಯನ್ನು ತಪ್ಪಿಸಬೇಕು. ವಾಸ್ತವದಲ್ಲಿ ಪಪ್ಪಾಯಿಯು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ಉತ್ಕರ್ಷಣ ನಿರೋಧಕವಾಗಿದೆ ಆದ್ದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ಆದರೆ ಕೆಲವರು ಪಪ್ಪಾಯಿಯಿಂದ ದೂರವಿರಬೇಕು.
ಪಪ್ಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಉತ್ಪಾದನೆಗೆ ಕಾರಣವಾಗಬಹುದು, ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ, ನಂತರ ಮೂತ್ರದ ಮೂಲಕ ಕಲ್ಲು ಹಾದುಹೋಗಲು ಕಷ್ಟವಾಗುತ್ತದೆ ಆದ್ದರಿಂದ ಅವರು ಪಪ್ಪಾಯ ಸೇವನೆ ಮಾಡಬಾರದು. ಅಲರ್ಜಿ ಇದ್ದರೆ ಪಪ್ಪಾಯಿಯಿಂದ ದೂರವಿರಿ. ಯಾವುದೇ ರೀತಿಯ ಅಲರ್ಜಿಯಿಂದ ಬಳಲುತ್ತಿದ್ದರೆ ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ಇಂತಹ ರೋಗಿಗಳೂ ಕೂಡ ಪಪ್ಪಾಯಿಯನ್ನು ಸೇವಿಸಬಾರದು. ಪಪ್ಪಾಯಿಯೊಳಗೆ ಚಿಟಿನೇಸ್ ಎಂಬ ಕಿಣ್ವವಿದೆ ಎನ್ನಲಾಗುತ್ತದೆ, ಇದು ಲ್ಯಾಟೆಕ್ಸ್‌ನ ಮೇಲೆ ವ್ಯತಿರಿಕ್ತ ಪ್ರತಿಕ್ರಿಯೆ ಉಂಟುಮಾಡುತ್ತದೆ
ಇದರಿಂದಾಗಿ ಉಸಿರಾಟ, ಸೀನುವಿಕೆ ಮತ್ತು ಕೆಮ್ಮುವುದು, ಕಣ್ಣುಗಳಲ್ಲಿ ನೀರಿನಂಶದಂತಹ ಸಮಸ್ಯೆಗಳನ್ನು ಎದುರಿಸಬಹುದು ಆದ್ದರಿಂದ ಪಪ್ಪಾಯಿಯಿಂದ ಅಲರ್ಜಿ ಇದ್ದರೆ, ಅದನ್ನು ಸೇವಿಸಬಾರದು. ಪಪ್ಪಾಯ ಸೇವನೆ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. ಪಪ್ಪಾಯ ಕೆಲವು ಉತ್ತಮ ಗುಣಗಳನ್ನು ಹೊಂದಿದ್ದರೂ ಕೆಲವರು ಪಪ್ಪಾಯ ಸೇವನೆಯಿಂದ ದೂರವಿರಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ವರ್ಷಕ್ಕೆ ಒಂದು ಬಾರಿಯಾದರೂ ಪಪ್ಪಾಯ ಸೇವಿಸಿ ಆರೋಗ್ಯವಾಗಿರಿ.