ಇವತ್ತಿನ ದಿನಗಳಲ್ಲಿ ನಿಶ್ಯಕ್ತಿ, ಸುಸ್ತು ತುಂಬಾ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ರಕ್ತ ಹೀನತೆ ಇರಬಹುದು . ನಮಗೆ ಏನಾದರೂ ಅತಿಯಾಗಿ ಸುಸ್ತು ನಿಶ್ಯಕ್ತಿ ಉಂಟಾಗುತ್ತ ಇದ್ದರೆ ನಾವು ನಮ್ಮ ರಕ್ತದ HB ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬೇಕು. ಕೆಲವು ಔಷಧಿಗಳ ಪ್ರಭಾವದಿಂದ ಆಗಿ, ಹೆಣ್ಣುಮಕ್ಕಳಿಗೆ ಪೀರಿಯಡ್ಸ್ ಸಮಯದಲ್ಲಿ ಅತಿಯಾಗಿ ರಕ್ತಸ್ರಾವ ಆಗುವುದರಿಂದ, ಕೆಲವು ಡೆಂಗ್ಯೂ ಅಂತಹ ರೋಗಗಳು ಬಂದು ಹೋದ ನಂತರ ಸುಸ್ತು ನಿಶ್ಯಕ್ತಿ ಅತಿಯಾಗಿ ಕಾಡುವುದು. ಹೀಗಾದಾಗ ನಾವು ಕೆಲವೊಮ್ಮೆ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇದನ್ನು ಕಡೆಗಣಿಸದೆ ಸೂಕ್ತವಾದ ಔಷಧಿಯನ್ನು ಮಾಡಿಕೊಳ್ಳಬೇಕು. ದಿನವಿಡೀ ನಾವು ಸುಸ್ತು, ನಿಶ್ಯಕ್ತಿ ಇಲ್ಲದೆ ಉತ್ಸಾಹದಿಂದ ಕೆಲಸ ಮಾಡಿಕೊಂಡು ಇರಲು ಯಾವುದೇ ಅಡ್ಡಪರಿಣಾಮ ಇಲ್ಲದ ಸುಲಭವಾದ ಮನೆಮದ್ದುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಇಲ್ಲಿ ತೆಳ್ಳಗೆ ಇರುವವರಿಗೆ ಮಾತ್ರ ನಿಶ್ಯಕ್ತಿ ಆಗುತ್ತದೆ ದಪ್ಪ ಇರುವವರಿಗೆ ನಿಶ್ಯಕ್ತಿ ಉಂಟಾಗದು ಅಂತೇನೂ ಇಲ್ಲ. ನಿಜಕ್ಕೂ ತೆಳ್ಳಗೆ ಇರುವವರಿಗಿಂತ ದಪ್ಪ ಇರುವವರಿಗೆ ನಿಶ್ಯಕ್ತಿ ಉಂಟಾಗುವುದು ಹೆಚ್ಚು. ನಾವು ದಪ್ಪ ಆದ ಹಾಗೆ ನಮ್ಮ ಹೃದಯಕ್ಕೆ ತೊಂದರೆ ಹೆಚ್ಚು. ಇದರಿಂದ ಹೃದಯದ ಶಕ್ತಿ ಕುಂದುತ್ತದೆ. ಇದರಿಂದ ಅನೇಕ ಸಮಸ್ಯೆಗಳೂ ಕೂಡಾ ಉಂಟಾಗುವುದು. ನಿಷ್ಯಕ್ತಿಯನ್ನು ಹೋಗಲಾಡಿಸಿಕೊಳ್ಳಲು ಸುಲಭ ಉಪಾಯ ಎಂದರೆ ,ಒಣಗಿದ ಅಂಜೂರದ ಹಣ್ಣು ಮತ್ತು ಒಣ ದ್ರಾಕ್ಷಿ ಇವೆರಡನ್ನೂ ರಾತ್ರಿ ಚೆನ್ನಾಗಿ ತೊಳೆದು ನೆನಸಿ ಇಡಬೇಕು. ಇವೆರಡನ್ನೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಇದರಿಂದ ನಮ್ಮ ದೇಹದಲ್ಲಿನ ನಿಶ್ಯಕ್ತಿ ಕಡಿಮೆ ಆಗುವುದು. ಇದೇ ರೀತಿಯಲ್ಲಿ ನಮ್ಮ ದೇಹದ ನಿಷ್ಯಕ್ತಿಯನ್ನ ಕಡಿಮೆ ಮಾಡಿಕೊಳ್ಳಲು ಸರಳವಾದ ಒಂದು ಸಲಾಡ್ ಕೂಡಾ ಮಾಡಿಕೊಳ್ಳಬಹುದು. ಅದೂ ಹೇಗೆ ಅನ್ನೋದನ್ನ ನೋಡೋಣ.

ಈ ಸಲಾಡ್ ಮಾಡಲು ನಮಗೆ ಬೇಕಿರುವುದು ಬಾಳೆಹಣ್ಣು, ಸೇಬು ಹಣ್ಣು, ಕ್ಯಾರೆಟ್ ಹಾಗೂ ಅರ್ಧ ಚಮಚ ಬಾದಾಮಿ ಪುಡಿ, ಬೆಲ್ಲ. ಮೊದಲು ಹಣ್ಣುಗಳನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಅದಕ್ಕೆ ತುರಿದ ಕ್ಯಾರೆಟ್ ಹಾಗೂ ಬಾದಾಮಿ ಪುಡಿ ಬೆಲ್ಲ ಸೇರಿಸಿ ಮಿಕ್ಸ್ ಮಾಡಿಕೊಂಡು ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಆಹಾರದ ನಂತರ ಸೇವಿಸುವುದರಿಂದ ಸುಸ್ತು ನಿಶ್ಯಕ್ತಿ ಕಡಿಮೆ ಆಗುತ್ತದೆ. ಇನ್ನು ಕೆಲವರಿಗೆ ಅನ್ನ ತಿನ್ನುವುದಕ್ಕೇ ಸೇರುವುದಿಲ್ಲ ಅಂತವರು ಓಟ್ಸ್ ಬೇಯಿಸಿಕೊಂಡು ಅದಕ್ಕೆ ಸ್ವಲ್ಪ ಹಾಲು ಸೇರಿಸಿ ತೆಗೆದುಕೊಳ್ಳುವುದರಿಂದ ಓಟ್ಸ್ ನಲ್ಲಿ ಇರುವಂತಹ ಕರಗುವ ನಾರಿನ ಅಂಶ ನಮಗೆ ತುಂಬಾ ಸಹಾಯಕಾರಿ ಆಗುತ್ತದೆ. ಹಾಗೆ ಖರ್ಜೂರ ಕೂಡಾ ನಮ್ಮ ನಿಶ್ಯಕ್ತಿ ಕಡಿಮೆ ಮಾಡಲು ಸಹಾಯಕಾರಿ ಎನ್ನಬಹುದು. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಇರುವುದು.ಇದು ನಮ್ಮ ರಕ್ತದಲ್ಲಿ HB ಪ್ರಮಾಣವನ್ನೂ ಹೆಚ್ಚಿಸಲು ಸಹಾಯಕಾರಿ ಆಗಿದೆ. ಆದರೆ ಡಯಾಬಿಟಿಸ್ ಇರುವವರು ಒಂದು ಅಥವಾ ಎರಡು ಖರ್ಜೂರ ಮಾತ್ರ ಸೇವಿಸುವುದು ಉತ್ತಮ. ನಿಶ್ಯಕ್ತಿ ಕಡಿಮೆ ಆಗಲು ಇನ್ನೊಂದು ಉಪಾಯ ಎಂದರೆ ನಿದ್ದೆ ಮಾಡುವುದು. ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಟ ಎಂದರೂ ಆರರಿಂದ ಏಳು ತಾಸು ನಿದ್ದೆ ಮಾಡಬೇಕು. ನಮಗೆ ನಿದ್ದೆ ಸರಿಯಾಗಿ ಆಗದೇ ಇದ್ದಾಗ ನಿಶ್ಯಕ್ತಿ, ಸುಸ್ತು ಸಹಜ. ನಿದ್ದೆ ಸರಿಯಾಗಿ ಆಗದೇ ಇರಲು ಕಾರಣ ಅತಿಯಾದ ಚಿಂತೆ , ರಾತ್ರಿ ಬಹಳ ಹೊತ್ತು ಮೊಬೈಲ್, ಕಂಪ್ಯೂಟರ್ ನೋಡುತ್ತಾ ಇರುವುದು. ಇದರ ಬದಲು ರಾತ್ರಿ ಮಲಗುವಾಗ ದೇವರ ಧ್ಯಾನ ಮಾಡುವುದು ಉತ್ತಮ.

ನಿಶ್ಯಕ್ತಿಯನ್ನ ಕಡಿಮೆ ಮಾಡಿಕೊಳ್ಳಲು ಇನ್ನೊಂದು ಸ್ವೀಟ್ ಮಾಡಿಕೊಂಡು ಸೇವಿಸಬಹುದು. ಕುಂಬಳ ಕಾಯಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ತುಪ್ಪದಲ್ಲಿ ಇದರ ನೀರಿನ ಅಂಶ ಹೋಗುವವರೆಗೂ ಹೊರಿದುಕೊಂಡು ನಂತರ ಇದಕ್ಕೆ ದ್ರಾಕ್ಷಿ , ಬಾದಾಮಿ ಅಥವಾ ಶೇಂಗಾ ಹಾಗೂ ಏಲಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿಕೊಂಡು ಚೆನ್ನಾಗಿ ಬೇಯಿಸಿ ಅದಕ್ಕೆ ಕಟ್ ಮಾಡಿದ ಡ್ರೈ ಫ್ರೂಟ್ಸ್ ಸೇರಿಸಿ ಬೆಲ್ಲ ಹಾಕಿ ಮಿಕ್ಸ್ ಮಾಡಿಕೊಂಡು ಸ್ವೀಟ್ ತಯಾರಿಸಿಕೊಳ್ಳಬೇಕು. ಇದನ್ನು ಸೇವಿಸುವುದರಿಂದ ಬಹಳ ಬೇಗನೆ ನಾವು ನಿಶ್ಯಕ್ತಿಯನ್ನು ದೂರ ಮಾಡಿಕೊಳ್ಳಬಹುದು. ಕಬ್ಬಿನ ಹಾಲು ಕುಡಿಯುವುದರಿಂದ ಸಹ ಇದರಲ್ಲಿರುವ ಕಬ್ಬಿಣದ ಅಂಶ ನಮಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯಕಾರಿ. ಸಕ್ಕರೆ ಸೇವನೆಯಿಂದ HB ಲೆವೆಲ್ ಪೂರ್ಣ ಕಡಿಮೆ ಆಗುವುದು. ಅದರ ಬದಲು ಬೆಲ್ಲವನ್ನು ಬಳಸುವುದು ಉತ್ತಮ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!