ಸಪೋಟ ಹಣ್ಣು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಚಿರಪರಿಚಿತವಾಗಿರುವಂತ ಹಣ್ಣಾಗಿದೆ, ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಅಂಶಗಳು ಇದ್ದು, ಇದರ ಸೇವನೆಯಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಈ ಹಣ್ಣು ರುಚಿಗೆ ಅಷ್ಟೇ ಅಲ್ಲದೆ ದೇಹಕ್ಕೆ ಔಷಧಿ ಗುಣವಾಗಿ ಕೆಲಸ ಮಾಡುತ್ತದೆ. ಈ ಹಣ್ಣಿನಲ್ಲಿ ಕ್ಯಾಲ್ಶಿಯಂ, ಸಸಾರಜನಕ, ನಾರು, ಕೆರೋಟಿನ್, ಕೊಬ್ಬು ಹೀಗೆ ಹಲವು ಆರೋಗ್ಯಕಾರಿ ಅಂಶಗಳನ್ನು ಸಪೋಟ ಹಣ್ಣು ಹೊಂದಿದೆ.
ಈ ಹಣ್ಣು ಬಾಣಂತಿಯರಿಗೆ ಉತ್ತಮ ಪ್ರಯೋಜನಕಾರಿಯಾಗಿದೆ ಈ ಹಣ್ಣಿನಲ್ಲಿ ಕಬ್ಬಿಣ, ಸತ್ವ ಕ್ಯಾಲ್ಶಿಯಂ ಇರೋದ್ರಿಂದ ಬಾಣಂತಿಯರಿಗೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ. ಮಕ್ಕಳಿಗೆ ಕೂಡ ಈ ಹಣ್ಣು ಬೆಳವಣಿಗೆ ಹಾರ್ಮೋನ್ ದೊರಕಿಸುವ ಪ್ರಯತ್ನ ಮಾಡುವುದು. ಸಪೋಟ ಹಣ್ಣು ಅಥವಾ ಜ್ಯುಸ್ ಮಾಡಿ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅತಿ ಉಪಯುಕ್ತವಾಗಿದೆ.
ಸಪೋಟ ಹಣ್ಣು ಅಷ್ಟೇ ಅಲ್ದೆ ಇದರ ಬೀಜ ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣವನ್ನು ಹೊಂದಿದೆ. ಹೌದು ಕಜ್ಜಿ ತುರಿಕೆ ಸಮಸ್ಯೆ ಇದ್ರೆ ಸಪೋಟ ಹಣ್ಣಿನ ಬೀಜದ ಪೊಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿದರೆ ನಿವಾರಣೆ ಕಾಣಬಹುದಾಗದೆ. ಇನ್ನು ಅಷ್ಟೇ ಅಲ್ದೆ ಇದರ ಬೀಜದಿಂದ ತಯಾರಿಸಿದ ಕಷಾಯವನ್ನು ಕಣ್ಣಿನ ನಾವೇ ಉರಿ ಇರುವಂತ ಸಂದರ್ಭದಲ್ಲಿ ಈ ಕಷಾಯವನ್ನು ತಗೆದುಕೊಂಡು ಕಣ್ಣು ತೊಳೆದರೆ ಸಮಸ್ಯೆಗೆ ಪರಿಹಾರ ದೊರಕುವುದು. ಹೊಟ್ಟೆ ಉರಿ ಸಮಸ್ಯೆ ಇದ್ರೆ ಸಪೋಟ ಹಣ್ಣಿನ ಜ್ಯುಸ್ ನಲ್ಲಿ ಸ್ವಲ್ಪ ಹಾಲು ಬೆರಸಿ ಸೇವನೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರಕುವುದು.
ಪ್ರತಿದಿನ ಈ ಹಣ್ಣಿನ ಸೇವನೆ ಮಾಡುವುದರಿಂದ ಪುರುಷರಲ್ಲಿ ಪಲವತ್ತತೆ ಹೆಚ್ಚುವುದು ಹಾಗೂ ದೇಹಕ್ಕೆ ರಕ್ತ ಸಂಚಲನ ವೃದ್ಧಿಯಾಗಲು ಸಹಕಾರಿಯಾಗುವುದು. ಹೀಗೆ ಅನೇಕ ಆರೋಗ್ಯಕಾರಿ ಅಂಶಗಳನ್ನು ಸಪೋಟ ಹಣ್ಣು ಹೊಂದಿದೆ. ಪ್ರತಿದಿನ ಜಂಕ್ ಫುಡ್ ಸೇವನೆ ಮಾಡಿ ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು ಇಂತಹ ನೈಸರ್ಗಿಕ ಹಣ್ಣುಗಳನ್ನು ತಿಂದು ಅರೋಗ್ಯ ವೃದ್ಧಿಸಿಕೊಳ್ಳುವುದು ಉತ್ತಮವಾಗಿದೆ.