ಅರ್ಧ ತಲೆನೋವು ಅತ್ಯಂತ ನೋವಿನಿಂದ ಕೂಡಿರುತ್ತದೆ ಮತ್ತು ತಲೆಯ ಒಂದು ಬದಿಯಲ್ಲಿ ಮಾತ್ರ ನೋವು ಬರುತ್ತದೆ. ಇದು ಸಾಕಷ್ಟು ಕಿರಿಕಿರಿ ಅರ್ಧ ತಲೆನೋವಿನ ಮೂಲ ಕಾರಣ ಹೊಟ್ಟೆ. ಅರ್ಧ ತಲೆನೋವು ಜಾಸ್ತಿ ಬರಲು ಹೊಟ್ಟೆಯಲ್ಲಿರುವ ಆಮ್ಲಗಳೇ ಮೂಲ ಕಾರಣ ಆ್ಯಸಿಡಿಟಿ ಹೆಚ್ಚಿದ್ದಾಗ ತಲೆನೋವು ಜಾಸ್ತಿ ಆಗುತ್ತದೆ ಕಡಿಮೆ ನಿದ್ದೆ ಮಾಡುವುದು ಅಥವಾ ಅತಿಯಾಗಿ ನಿದ್ದೆ ಮಾಡುವುದು ಕೂಡ ಅರ್ಧ ತಲೆನೋವಿಗೆ ಕಾರಣವಾಗಬಹುದು.
ಅತಿಯಾಗಿ ಬಿಸಿಲಿನಲ್ಲಿ ಸುತ್ತಾಟ ಮಾಡಿದರೂ ಅರ್ಧ ತಲೆನೋವು ಕಾಣಿಸಿಕೊಳ್ಳುತ್ತದೆ ಇದರ ಜತೆಗೆ ದೊಡ್ಡ ಪ್ರಮಾಣದ ಶಬ್ದ ಘಾಟು ವಾಸನೆ ಅರ್ಧ ತಲೆನೋವನ್ನು ತರಬಹುದು. ಆದರೆ ಮನೆಯಲ್ಲಿ ಇರುವ ಸಾಮಗ್ರಿ ಗಳಿಂದ ಅರ್ಧ ತಲೆ ನೋವಿಗೆ ಪರಿಹಾರ ಕಂಡುಕೊಳ್ಳಬಹುದು ನಾವು ಈ ಲೇಖನದ ಮೂಲಕ ಅರ್ಧ ತಲೆ ನೋವಿನ ಪರಿಹಾರವನ್ನು ತಿಳಿದುಕೊಳ್ಳೋಣ .
ತಲೆ ನೋವು ಎಲ್ಲರಲ್ಲಿಯು ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಹಾಗೆಯೇ ಅದರಲ್ಲೂ ಕೆಲವರಿಗೆ ಅರ್ಧ ತಲೆ ನೋವು ಕಂಡು ಬರುತ್ತದೆ ಅರ್ಧ ತಲೆ ನೋವು ಹೊಟ್ಟೆ ಶುದ್ದ ಇಲ್ಲದೇ ಇರುವ ಕಾರಣ ಬರುತ್ತದೆ ಹೊಟ್ಟೆ ಶುದ್ಧವಾಗಿ ಇಟ್ಟುಕೊಳ್ಳಲು ಹರಳೆಣ್ಣೆ ಸೇವನೆಯಿಂದ ಶುದ್ಧವಾಗಿ ಇಟ್ಟುಕೊಳ್ಳಬಹುದು ರಾತ್ರಿ ಮಲಗುವ ಸಂದರ್ಭದಲ್ಲಿ ಬಿಸಿ ನೀರಿನಲ್ಲಿ ಸೇವನೆ ಮಾಡಬೇಕು ಜೀರ್ಣಾಂಗ ವ್ಯವಸ್ಥೆಯ ತೊಂದರೆಯಿಂದ ಅರ್ಧ ತಲೆ ನೋವು ಕಂಡು ಬರುತ್ತದೆ
ಇದರ ನಿವಾರಣೆಗಾಗಿ ನೂರು ಗ್ರಾಂ ಸೋಂಪು ಒಮ್ ಕಾಳು ಹಾಗೂ ನೂರು ಗ್ರಾಂ ಒಣ ಶುಂಠಿಯನ್ನು ಹಾಕಿ ಪುಡಿ ಮಾಡಿ ಇಟ್ಟುಕೊಂಡು ಊಟಕ್ಕಿಂತ ಮೊದಲು ಸೇವನೆ ಮಾಡಬೇಕು ಇದರಿಂದ ಜೀರ್ಣಾಗ ವ್ಯವಸ್ಥೆಯ ತೊಂದರೆ ಕಡಿಮೆಯಾಗುತ್ತದೆ ಯಾವಾಗ ಜೀರ್ಣಾಗ ವ್ಯವಸ್ಥೆಯ ತೊಂದರೆ ಕಡಿಮೆಯಾಗುತ್ತದೆಯೋ ಆಗ ಪಿತ್ತ ವೃದ್ಧಿಯಾಗುವುದು ಕಡಿಮೆ ಇರುತ್ತದೆ.
ತಲೆಯ ಒಂದೇ ಭಾಗಕ್ಕೆ ತಲೆ ನೋವು ಕಂಡು ಬಂದರೆ ಹಸಿ ಶುಂಠಿ ಮುಕ್ಕಾಲು ಭಾಗ ಹಾಗೂ ಬೆಲ್ಲ ಕಾಲು ಭಾಗ ಸೇರಿಸಿ ರಸ ತೆಗೆಯಬೇಕು ಆ ರಸವನ್ನು ಎಂಟು ಹನಿಗಳನ್ನು ಯಾವ ಭಾಗದಲ್ಲಿ ತಲೆ ನೋವು ಬರುತ್ತದೆಯೋ ಅದರ ವಿರುದ್ದ ಭಾಗದ ನಾಸಿಕದಲ್ಲಿ ಹಾಕಬೇಕು ಇದರಿಂದ ನಾಡಿ ಶುದ್ದಿಯಾಗುವ ಮೂಲಕ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ ಇದರಿಂದ ತಲೆ ನೋವು ಕಡಿಮೆ ಆಗುತ್ತದೆ ಹಾಗೆಯೇ ಈ ಮಿಶ್ರಣದ ಜೊತೆಗೆ ತುಂಬಾ ಸೊಪ್ಪಿನ ರಸವನ್ನು ಹಾಕಬಹುದು
ನಾವು ಆಹಾರದಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಹಣ್ಣು ತರಕಾರಿ ಮೊಳಕೆ ಕಾಳು ಮಜ್ಜಿಗೆ ಎಳನೀರು ತಾಜಾ ತರಕಾರಿ ರಸ ಹಣ್ಣಿನ ರಸ ಹೆಚ್ಚೆಚ್ಚು ಸೇವಿಸಬೇಕು ಪ್ರತಿದಿನ ಕನಿಷ್ಟ ಎರಡರಿಂದ ಮೂರು ಲೀಟರ್ ನೀರು ಕುಡಿಯಲೇಬೇಕು ತಿಂಗಳ ಮಟ್ಟಿಗೆ ರಾತ್ರಿ ಊಟದ ಬದಲು ಹಸಿ ತರಕಾರಿ ಹಣ್ಣು ಮೊಳಕೆ ಕಾಳುn ಸೂಪ್ ಮಾತ್ರ ಸೇವಿಸಬೇಕು ಖಾರ ಮಸಾಲೆ ಕರಿದ ಆಹಾರ ಬೇಕರಿ ತಿನಿಸು ತಂಪು ಪಾನೀಯ ಐಸ್‌ಕ್ರೀಮ್ ಕಡಿಮೆ ಮಾಡಿದರೆ ಆರೋಗ್ಯ ಚೆನ್ನಾಗಿ ಇರುತ್ತದೆ.