ಈಗಿನ ಸಂದರ್ಭದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವವಿಲ್ಲದೆ ಇಬ್ಬರು ಸಮಾನರು ಎಂಬುದನ್ನು ನಿರೂಪಿಸಲು ಎಲ್ಲ ಕ್ಷೇತ್ರಗಳಲ್ಲೂ ಇಬ್ಬರು ಸಮಾನವಾಗಿ ಭಾಗವಹಿಸುತ್ತಾರೆ. ಹಾಗೆಯೇ ಇಲ್ಲೊಂದು ಗ್ರಾಮದಲ್ಲಿ ಹೆಣ್ಣು ಮಗಳೊಬ್ಬಳು ಪಂಚಾಯಿತಿ ಚುನಾವಣೆಯಲ್ಲಿ ಭಾಗವಹಿಸಿ ಅದೇ ಪಂಚಾಯಿತಿಯಲ್ಲಿ ತನ್ನ ಗಂಡ ಜವಾನನಾಗಿ ಕೆಲಸ ಮಾಡುತ್ತಿರುವಾಗಲೇ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಹಿನ್ನೆಲೆಯನ್ನು ಈ ಲೇಖನದ ಮೂಲಕ ತಿಳಿದುಕೋಳ್ಳಣ.
ಇಲ್ಲಿ 23ವರ್ಷಗಳಿಂದಲೂ ಅದೇ ಪಂಚಾಯಿತಿಯಲ್ಲಿ ದುಡಿಯುತ್ತಿರುವ ಗಂಡ, ಈಗ ಅದೇ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಹೆಂಡತಿ. ಗಂಡನಾಗಿಯೂ ಅಸೂಯೆ ಪಡೆದೆ ತನ್ನ ಕೆಲಸವನ್ನು ಮುಂದುವರಿಸುತ್ತೀನಿ ಹಾಗೂ ತನ್ನ ಹೆಂಡತಿಯಾದ ಅಧ್ಯಕ್ಷೆಗೂ ಕೂಡ ಸಹಾಯ ಮಾಡುತ್ತಾ ಹೋಗುತ್ತೇನೆ ನನಗೂ ಇದರಿಂದ ಯಾವ ಅವಮಾನವಿಲ್ಲ ಹಾಗೂ ನನ್ನ ಹೆಂಡತಿಗೂ ಯಾವುದೇ ಮುಜುಗರವಿಲ್ಲ, ಏಕೆಂದರೆ ಜನರಿಂದ ಆಯ್ಕೆಯಾದವರು ಎಂದು ಮೇಲೆ ಜನರ ಕೆಲಸದಲ್ಲಿ ಇರಬೇಕೆ ಹೊರತು ಸ್ಥಾನಮಾನವನ್ನು ಅಳೆಯಬಾರದು ಎಂಬುದು ಈ ದಂಪತಿಗಳ ಗುರಿ.
ಇಲ್ಲಿ ಗಂಡ ಹೆಂಡತಿ ನಡುವಿನ ಅನ್ಯೂನ್ಯತೆ ಹಾಗೂ ಅವರ ಯೋಚನಾ ಶಕ್ತಿಯನ್ನು ಮೆಚ್ಚಬೇಕು. ಇಲ್ಲಿ ನಾನು ಮೇಲು ನೀನು ಮೇಲು ಎಂಬ ಮಾತಿಲ್ಲದೆ ನಮ್ಮ ನಮ್ಮ ಪಾಲಿನಲ್ಲಿರುವ ಕೆಲಸ ಕಾರ್ಯಗಳನ್ನು ಮುಗಿಸಿ ಜನರ ಹಿತಾಸಕ್ತಿಯನ್ನು ನೋಡುವುದಾಗಿದೆ.