ಯಾರಿಗೆ ಯಾವುದರಲ್ಲಿ ಪ್ರತಿಭೆ ಇರುತ್ತದೆ ಎಂದು ತಿಳಿಯುವುದಿಲ್ಲ. ಹಳ್ಳಿ ಇರಲಿ, ಪಟ್ಟಣವಿರಲಿ ಪ್ರತಿಭೆಗೆ ಅದಾವುದರ ಗಡಿ ಇರುವುದಿಲ್ಲ. ಇದಕ್ಕೆ ಸಾಕ್ಷಿಯಾದ ಹನುಮಂತ ಅವರ ಮತ್ತು ಸರಿಗಮಪ ನಂಟು ಹಾಗೂ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ರತಿಭೆಗೆ ಯಾವುದೇ ಗಡಿ ಇಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆಯಾದ‌ ಹನುಮಂತ ಅವರು ಸರಿಗಮಪ ಕಾರ್ಯಕ್ರಮದಲ್ಲಿ ತಮ್ಮ ಹಾಡು ಮತ್ತು ಮುಗ್ಧತೆಯ ಕಾರಣದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ, ಕರ್ನಾಟಕದಾದ್ಯಂತ ಹೆಸರು ಗಳಿಸುತ್ತಾರೆ. ಸರಿಗಮಪ ಕಾರ್ಯಕ್ರಮದ ಎಲ್ಲಾ ಜಡ್ಜಸ್, ಅನು ಶ್ರೀ ಹೀಗೆ ಎಲ್ಲರೂ ಹನುಮಂತ ಅವರನ್ನು ಪ್ರೀತಿಯಿಂದ ನೋಡುತ್ತಿದ್ದರು. ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದ ಮುಗ್ಧ ಹುಡುಗ ಕೇವಲ ತನ್ನ ಹಾಡಿನಿಂದ ಕರ್ನಾಟಕದ ಮನೆ ಮಾತಾದ ಸರಿಗಮಪ ಕಾರ್ಯಕ್ರಮದ ಹನುಮಂತನು ಕಳೆದ ಮೂರು ವರ್ಷದಿಂದ ಒಂದಲ್ಲ ಒಂದು ವಿಷಯದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇದ್ದರು. ಆದರೆ ಕೆಲವು ತಿಂಗಳುಗಳಿಂದ ಹನುಮಂತ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ ಅವರ ಅಭಿಮಾನಿಗಳಿಗೆ ಇದು ನಿರಾಸೆಯಾಗಿತ್ತು.

ಇದೀಗ ಸಿಹಿ ಸುದ್ದಿಯ ಮೂಲಕ ಮತ್ತೆ ಅಭಿಮಾನಿಗಳ ಮನೆ ಮಾತಾಗಿದ್ದಾರೆ. ಸರಿಗಮಪ ಕಾರ್ಯಕ್ರಮದ ಹನುಮಂತ ಅವರು ಮದುವೆಯಾಗುತ್ತಿದ್ದಾರೆ. ಸರಿಗಮಪ ಕಾರ್ಯಕ್ರಮದ ಮೂಲಕ ಹನುಮಂತ ಅವರು ಒಳ್ಳೆಯ ಹೆಸರಿನೊಂದಿಗೆ ಒಳ್ಳೆಯ ಮನೆಯನ್ನು ಕೂಡ ಕೊಂಡುಕೊಂಡಿದ್ದಾರೆ. ಅವರಿಗೆ ಸಿನಿಮಾಗಳಲ್ಲಿ ಹಾಡಲು ಅವಕಾಶಗಳು ಸಿಕ್ಕಿ ಈಗಾಗಲೇ ಮೂರು ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ ಆದರೆ ಇನ್ನು ಬಿಡುಗಡೆಯಾಗಿಲ್ಲ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಜೊತೆಗೆ ಹನುಮಂತ ಅವರ ಕುಟುಂಬದವರು ಅವನಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ಹನುಮಂತ ಅವರು ಲಂಬಾಣಿ ಕುಟುಂಬದವರಾಗಿರುವುದರಿಂದ ಅವರ ಸಂಪ್ರದಾಯದ ಪ್ರಕಾರ ಹುಡುಗರಿಗೆ 21 ವರ್ಷ ಆಗುತ್ತಿದ್ದಂತೆ ಮದುವೆ ಮಾಡಲಾಗುತ್ತದೆ. ಹನುಮಂತ ಅವರು ಮದುವೆ ವಯಸ್ಸಿಗೆ ಬಂದಿದ್ದು ಮದುವೆಯಾಗಲು ಒಪ್ಪಿದ್ದಾರೆ. ಕುಟುಂಬದವರು ನೋಡಿದ ಹಾವೇರಿ ಜಿಲ್ಲೆಯ ಪಿಯುಸಿ ಓದಿಕೊಂಡ ಹುಡುಗಿಯನ್ನು ಹನುಮಂತ ಅವರು ಸರಳವಾಗಿ ಲಂಬಾಣಿ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಹುಡುಗಿ ಯಾರು, ಮದುವೆ ಯಾವಾಗ, ಎಲ್ಲಿ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಒಟ್ಟಿನಲ್ಲಿ 2021ನೇ ಇಸವಿಯಲ್ಲಿ ಹನುಮಂತ ಅವರು ಮದುವೆಯಾಗಿ ಸಂಸಾರಿ ಆಗಲಿದ್ದಾರೆ. ಹನುಮಂತ ಅವರು ಮದುವೆಯಾಗಿ ಸಂತೋಷದಿಂದ ಜೀವನ ನಡೆಸಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!