ಇತ್ತಿಚಿನ ದಿನಗಳಲ್ಲಿ ಸ್ವಯಂ ಉದ್ಯೋಗ ಯುವಕರಿಗೆ ಜೀವನ ನಡೆಸಲು ಅತ್ಯುತ್ತಮ ಮಾರ್ಗವಾಗಿದೆ. ಇಂದಿನ ದಿನಗಳಲ್ಲಿ ಸುಮಾರು ಯುವಕರು ನಿರುದ್ಯೋಗದಿಂದ ಜಿಗುಪ್ಸೆಗೊಳ್ಳುತ್ತಿದ್ದಾರೆ ಹಾಗೂ ಯಾವುದೇ ತಾತ್ಕಾಲಿಕ ಕೆಲಸ ದೊರಕಿದರು ಸಮರ್ಪಕವಾದ ಜೀವನ ನಡೆಸಲು ಸಾಧ್ಯವಾಗದೇ ಬಳಲುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಇಬ್ಬರು ಸಹೋದರರು ತಮ್ಮದೇ ಬ್ಯಾಂಕಿನ ಉದ್ಯೋಗವಿದ್ದರು ಅದನ್ನು ತ್ಯಜಿಸಿ ಸ್ವಂತ ಬಂಡವಾಳದೊಂದಿಗೆ ಹಿಂದಿ ಸಾಕಾಣಿಕೆ ಮಾಡಿ ತಮ್ಮ ಜೀವನವನ್ನು ವೃದ್ಧಿಸುವ ಮೂಲಕ ಇತರ ಯುವಕರಿಗೆ ಮಾರ್ಗದರ್ಶನ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಇಬ್ಬರು ಸಹೋದರರು ಪ್ರದೀಪ್ ಮತ್ತು ಪ್ರತಾಪ್ ಮುದುಗೆರೆ ಗ್ರಾಮದವರು ತಮಗೆ ಬ್ಯಾಂಕಿನಿಂದ ಬರುತ್ತಿದ್ದ ಸಂಬಳದಲ್ಲಿ ಯಾವುದೇ ಸುಧಾರಣೆ ಕಾಣದೇ ತಮ್ಮದೇ ಆಲೋಚನೆಯಿಂದ ಹಿಂದಿ ಸಾಕಾಣಿಕೆಯನ್ನು ಪ್ರಾರಂಭಿಸುವ ಮೂಲಕ ವಾರ್ಷಿಕ ಎರಡುವರೆ ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಇವರು ತಮ್ಮ ಹಂದಿ ಘಟಕದಲ್ಲಿ ಮೂರು ವಿಧದ ಹಂದಿಗಳನ್ನು ಸಾಕುತ್ತಿದ್ದಾರೆ. ಮಾಂಸ ಪ್ರಿಯರು ಕುರಿ, ಕೋಳಿ, ಮೇಕೆ, ಮೀನು ಜೊತೆಗೆ ಹಂದಿ ಮಾಂಸ ಕೂಡ ಹೆಚ್ಚಾಗಿ ಇಷ್ಟ ಪಡ್ತಾರೆ. ಹಂದಿ ಮಾಂಸ ಬಹಳ ರುಚಿಕರ ಮತ್ತು ಸ್ವಾದಿಷ್ಟಕರ ಕೂಡ. ಹಿಂದೆಲ್ಲ ಹಂದಿ ಮಾಂಸಕ್ಕೆ ಅಷ್ಟೇನೂ ಬೇಡಿಕೆ ಇಲ್ಲದ ಕಾರಣ ಬೆಲೆಯೂ ಜಾಸ್ತಿ ಇರ್ಲಿಲ್ಲ.
ಆದರೆ, ಈಗ ಹಂದಿ ಮಾಂಸದ ಅನುಕೂಲಗಳನ್ನು ಜನರು ಅರಿತ ಕಾರಣ ಬೇಡಿಕೆ ಜೊತೆ ಬೆಲೆ ಹೆಚ್ಚಾಗಿದೆ. ಕೆಲವರು ಇದನ್ನು ಕೃಷಿಯ ಜತೆ ಉಪ ಕಸುಬಾಗಿ ಕೈಗೆತ್ತಿಕೊಂಡಿದ್ದಾರೆ. ಹಂದಿ ಸಾಕಣೆಯನ್ನು ದೊಡ್ಡ ಪ್ರಮಾಣ ಅಥವಾ ಸಣ್ಣ ಪ್ರಮಾಣದಲ್ಲಿ ಮಾಡಿದರೂ ಲಾಭವೇ. ಹಂದಿ ಸಾಕಣೆಗೆ ಹೆಚ್ಚು ಖರ್ಚಿಲ್ಲ, ಆದರೆ ಹಂದಿ ಮಾಂಸಕ್ಕೆ ಬೇಡಿಕೆ ಇದೆ. ಇದನ್ನು ಅರಿತಿರುವ ರೈತರು, ಉದ್ಯಮಿಗಳು ಹಂದಿ ಸಾಕಣೆಯಲ್ಲಿ ತೊಡಗಿ ವರ್ಷಕ್ಕೆ ಕೆಲ ಲಕ್ಷಗಳಿಂದ ಕೋಟಿಗಳವರೆಗೆ ಆದಾಯ ಗಳಿಸುತ್ತಿದ್ದಾರೆ.
ಹಂದಿ ಸಾಕಾಣಿಕೆ ಪಶುಸಂಗೋಪನೆಯ ಒಂದು ಶಾಖೆಯಾಗಿದ್ದು ಕೃಷಿಯ ಒಂದು ಭಾಗವಾಗಿದೆ. ಹಂದಿಗಳನ್ನು ಮುಖ್ಯವಾಗಿ ಆಹಾರ ಮತ್ತು ಚರ್ಮಕ್ಕಾಗಿ ಸಾಕಲಾಗುತ್ತದೆ. ಭಾರತದಲ್ಲಿ ಹಲವಾರು ಜನರು ಹಂದಿ ಸಾಕಾಣಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಹಂದಿ ಸಾಕಾಣಿಕೆಯಲ್ಲಿ ಏರಿಕೆ ಕಂಡುಬಂದಿದೆ ಎಂಬುದನ್ನು ಇತ್ತೀಚಿನ ವರದಿಗಳು ತಿಳಿಸುತ್ತವೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಕೂಡಾ ಹಂದಿ ಸಾಕಣಿಕೆ ಗಮನಾರ್ಹವಾಗಿ ಹೆಚ್ಚಳವಾಗುತ್ತಿದ್ದು ಹೆಚ್ಚು ರೈತರು ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. Video Credit For ಕೃಷಿ ಬೆಳಕು
ಹಂದಿ ಮಾಂಸವು ಅತಿ ಹೆಚ್ಚು ಪ್ರೋಟೀನ್ ಒಳಗೊಂಡಿದ್ದು ಮಾನವನ ದೇಹಕ್ಕೆ ಬೇಕಾಗುವ ಪ್ರಮುಖ ಜೀವ ಸತ್ವಗಳನ್ನು ಮತ್ತು ಖನಿಜಗಳನ್ನು ಒದಗಿಸುತ್ತದೆ. ಹಂದಿ ಮಾಂಸವು ಥಯಾಮಿನ್, ಸೆಲೆನಿಯಮ್ ಪ್ರೊಟೀನ್, ನಿಯಾಸಿನ್, ವಿಟಮಿನ್ ಬಿ -6 ಮತ್ತು ರಂಜಕ, ಸತು, ರಿಬೋಫ್ಲಾವಿನ್ ಮತ್ತು ಪೊಟ್ಯಾಸಿಯಮ್ಂತಹ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಹೀಗಾಗಿಯೇ ಹಂದಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ.