ಸಾಮಾನ್ಯವಾಗಿ ವೀಳ್ಯದ ಎಲೆಯನ್ನು ಎಲ್ಲರೂ ನೋಡಿರುತ್ತಾರೆ ಯಾಕಂದ್ರೆ ಭಾರತದಲ್ಲಿ ಅಲ್ಲದೇ ನಮ್ಮ ಹಿಂದೂ ಧರ್ಮದಲ್ಲಿ ವೀಳ್ಯದ ಎಲೆಗೆ ಅದರದ್ದೇ ಆದ ಮಹತ್ವವಿದೆ ಆದ ಕಾರಣ ವೀಳ್ಯದ ಎಲೆಯನ್ನು ಯಾರೂ ತಿರಸ್ಕರಿಸಲಾರರು ವೀಳ್ಯದ ಎಲೆ ಮತ್ತು ಅಡಿಕೆ ಇಲ್ಲದ ಪೂಜೆ ಕೂಡ ಅಪೂರ್ಣವಾದದ್ದು ಅಷ್ಟೇ ಅಲ್ಲದೇ ವೀಳ್ಯದ ಎಲೆ ಮತ್ತು ಅಡಿಕೆಯನ್ನು ಕುರಿತು ಹಾಡು ಕಟ್ಟಿದ ಸಾಹಿತಿಗಳೂ ಸಹ ನಮ್ಮಲ್ಲಿಯೇ ಇದ್ದಾರೆ ದೇವರ ಪೂಜೆಯಲ್ಲಿ ಮಧುವೆ ನಾಮಕರಣ ಆರಾಧನೆ ಸೇರಿದಂತೆ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ವೀಳ್ಯದ ಎಲೆಯ ಪಾತ್ರ ಬಹು ಮುಖ್ಯವಾದದ್ದು, ಇನ್ನೂ ಊಟದ ನಂತರ ವೀಳ್ಯದ ಎಲೆಯ ತಾಂಬೂಲವನ್ನು ಹಾಕಿಕೊಳ್ಳುವುದು ಕೆಲವು ಮನೆಗಳಲ್ಲಂತೂ ಮೊದಲಿನಿಂದಲೂ ನಡೆದುಕೊಂಡು ಬಂದಂತಹ ರೂಡಿಯೂ ಹೌದು ವೀಳ್ಯದ ಎಲೆಯ ಮಹತ್ವ ತಿಳಿದೋ ತಿಳಿಯದೆಯೋ ನಾವು ವೀಳ್ಯದ ಎಲೆಯನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದೇವೆ.
ವೀಳ್ಯದ ಎಲೆಗೆ ನಮ್ಮ ಸಮಾಜದಲ್ಲಿ ಧಾರ್ಮಿಕವಾಗಿ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಕೂಡ ಆಯುರ್ವೇಧದಲ್ಲಿ ಜೀರ್ಣಶಕ್ತಿ ಹೆಚ್ಚಾಗಲು ಲೈಂ-ಗಿಕ ತೊಂದರೆಗಳನ್ನು ನಿವಾರಿಸಲು ಮತ್ತು ತಲೆ ಹೊಟ್ಟಿನ ಸಮಸ್ಯೆಗಳು ಸೇರಿದಂತೆ ಇನ್ನೂ ಹತ್ತು ಹಲವಾರು ಸಮಸ್ಯೆಗಳಿಗೆ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ಹಲವಾರು ಆಯುರ್ವೇದ ತಜ್ಞರು ಹೇಳಿದ್ದಾರೆ ಮತ್ತು ಅದನ್ನು ಉದಾಹರಣೆಯಾಗಿ ನಮ್ಮ ಮುಂದಿಟ್ಟಿದ್ದಾರೆ ಹಾಗಾದರೆ ವೀಳ್ಯದ ಎಲೆಯ ಮಹತ್ವದ ಜೊತೆಗೆ ಇನ್ನೂ ಹತ್ತು ಹಲವು ಪ್ರಯೋಜನಕಾರಿ ಅಂಶಗಳನ್ನು ಆರೋಗ್ಯದ ದೃಷ್ಟಿಯಿಂದ ಗಮಣಿಸೊಣ ಬನ್ನಿ
ಪ್ರತಿನಿತ್ಯ ರಾತ್ರಿ ವೇಳೆ ಊಟ ಮಾಡಿದ ನಂತರ ವೀಳ್ಯದ ಎಲೆಯ ತಾಂಬೂಲವನ್ನು ಹಾಕಿಕೊಳ್ಳುವುದರಿಂದ ಶೀತದಲ್ಲಿನ ಶರೀರವು ಬಿಸಿಯಾಗುವುದಷ್ಟೇ ಅಲ್ಲದೇ ಊಟದ ನಂತರದಲ್ಲಿ ತಾಂಬೂಲ ಹಾಕಿಕೊಳ್ಳುವುದು ಬಾಯಿಯಲ್ಲಿ ಹೆಚ್ಚಿನ ಜೊಲ್ಲು ರಸವನ್ನು ಸ್ರವಿಸುವುದರಿಂದ ಹೆಚ್ಚಿನ ಜೊಲ್ಲು ರಸ ಉತ್ಪತ್ತಿಯಾಗುವ ಕಾರಣ ನಿಮ್ಮ ದೇಹದಲ್ಲಿನ ಜೀರ್ಣ ಶಕ್ತಿಯೂ ಕೂಡಾ ಹೆಚ್ಚಾಗುತ್ತದೆ ಅಲ್ಲದೆ ಲೈಂಗಿಕ ಆಸಕ್ತಿ ನಿಯಂತ್ರಣಕ್ಕೆ ಬರುವುದಲ್ಲದೆ ದುರ್ವಾಸನೆ ಬೀರುವ ಬಾಯಿಯಿಂದ ಮುಕ್ತಿ ಪಡೆಯಬಹುದು
ಒಂದು ವೀಳ್ಯದ ಎಲೆಯ ಜೊತೆಗೆ ಐದಾರು ತುಳಸಿ ಎಲೆಗಳನ್ನು ಸೇರಿಸಿ ಜೊತೆಗೆ ಒಂದು ಲವಂಗ ಸ್ವಲ್ಪವೇ ಪಚ್ಚ ಕರ್ಪುರವನ್ನು ಕೂಡ ಅದಕ್ಕೆ ಸೇರಿಸಿ ಪ್ರತಿನಿತ್ಯ ಕನಿಷ್ಠ ಎರೆಡರಿಂದ ಮೂರು ಬಾರಿಯಾದರೂ ಸೇವಿಸುವುದರಿಂದ ಕಫ ನಿವಾರಣೆಯಾಗುವುದರ ಜೊತೆಗೆ ಒಣ ಕೆಮ್ಮೂ ಕೂಡ ಶಮನವಾಗುತ್ತದೆ ಅಲ್ಲದೆ ವೀಳ್ಯದ ಎಲೆಯನ್ನು ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ
ಒಂದು ವೀಳ್ಯದ ಎಳೆಯ ಜೊತೆಗೆ ನಾಲ್ಕು ಕಾಳು ಮೆಣಸು ಮತ್ತು ಒಂದು ಹರಳು ಉಪ್ಪನ್ನು ಸೇರಿಸಿ ಸೇವಿಸುವುದರಿಂದ ಕಫ ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ ಅಷ್ಟೇ ಅಲ್ಲದೇ ಎಲ್ಲಕ್ಕೂ ಮೇಲಾಗಿ ವೀಳ್ಯದ ಎಲೆಯನ್ನು ನುಣ್ಣಗೆ ಅರೆದು ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ತಲೆ ಹೊಟ್ಟು ಕಡಿಮೆಯಾಗುವುದರ ಜೊತೆಗೆ ತಲೆ ಕೂದಲು ಉದುರುವುದು ಸಂಪೂರ್ಣ ನಿಂತು ಹೋಗುತ್ತದೆ.
ಆದರೆ ಯಾವುದೇ ಕಾರಣಕ್ಕೂ ಅಧಿಕ ರಕ್ತದ ಒತ್ತಡ ಇರುವವರು ಹೃದ್ರೋಗ ಇರುವವರು ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ರೋಗಗಳಿಂದ ಬಳಲುತ್ತಿರುವವರು ತಾಂಬೂಲವನ್ನು ಹಾಕಿಕೊಳ್ಳುವುದು ಸೂಕ್ತವಲ್ಲ ಅಷ್ಟೇ ಅಲ್ಲದೇ ಅಪ್ಪಿ ತಪ್ಪಿಯೂ ಕೂಡ ಮತ್ತು ಬರುವ ಪದಾರ್ಥಗಳೊಂದಿಗೆ ತಾಂಬೂಲವನ್ನು ಸೇವಿಸಬಾರದು, ಹೀಗೆ ಮಾಡುವುದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವುದಲ್ಲದೇ ಕ್ಯಾನ್ಸರ್ ನಂತಹ ಮಹಾಮಾರಿ ರೋಗಗಳು ತಲೆದೂರುವ ಸಾಧ್ಯತೆ ಹೆಚ್ಚಾಗಿರುತ್ತದೆ.