ಮೇಕೆ, ಕುರಿ, ಕೋಳಿ ಸಾಕಾಣಿಕೆ ಮಾಡುವುದು ಹೇಗೆ ಅವುಗಳಿಗೆ ಆಹಾರ, ಮಾರ್ಕೆಟಿಂಗ್ ಮೊದಲಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಾರಾಯಣ್ ರಾವ್ ಎನ್ನುವವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬರುವ ಮೇವನ್ನು ಬಳಸಿ ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಒಂದು ಹೈಟೆಕ್ ಶೆಡ್ ಕಟ್ಟಿ ಮೇಲ್ಭಾಗದಲ್ಲಿ 200 ಕುರಿ, ಮೇಕೆ ಹಾಗೂ ಕೆಳಭಾಗದಲ್ಲಿ 200 ನಾಟಿ ಕೋಳಿ ಸಾಕಿದ್ದಾರೆ. ಶೆಡ್ ಮಾಡಿ 3 ವರ್ಷವಾಯಿತು. ಇವರು ವರ್ಷಕ್ಕೆ 400-450 ಕುರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ತಿಂಗಳ ಕೋಳಿ ಮರಿಯನ್ನು ತಂದು ಸಾಕಲಾಗುತ್ತದೆ ಒಂದು ತಿಂಗಳಾದರೆ ಸಾಯುವ ಪ್ರಮಾಣ ಕಡಿಮೆಯಾಗಿರುತ್ತದೆ, ಒಂದು ತಿಂಗಳ ಮರಿ 150 ಗ್ರಾಂ ತೂಕ ಇರುತ್ತದೆ.
ಕೋಳಿಗಳಿಗೆ ರಾಗಿ, ಗೋಧಿ, ಜೋಳವನ್ನು ಆಹಾರವಾಗಿ ಕೊಡಲಾಗುತ್ತದೆ. ಕುರಿ ಮರಿಗಳನ್ನು ಮಾರುವುದರ ಜೊತೆಗೆ ಇವರು ರೈತರಿಗೆ ಕುರಿ ಸಾಕಾಣಿಕೆ ಬಗ್ಗೆ ಟ್ರೇನಿಂಗ್ ಕೊಡುತ್ತಾರೆ. ಇವರು ಕಾರ್ಮಿಕರನ್ನು ಇಟ್ಟುಕೊಂಡಿಲ್ಲ. ಇವರು ಬಿಜಾಪುರದ ಮೌಳಿ ಎನ್ನುವ ತಳಿಯ ಹಾಗೂ ಬಾಗಲಕೋಟೆಯ ಏಳಗ ಎನ್ನುವ ತಳಿಯ ಕುರಿಗಳನ್ನು ಸಾಕುತ್ತಿದ್ದಾರೆ. ಸಣ್ಣ ಮರಿಯನ್ನು 2 ವರ್ಷ ಸಾಕಿದರೆ 120 ಕೆ.ಜಿ ತೂಕ ಬರುತ್ತದೆ. ಇವರು ನಾಟಿ ಮೇಕೆಗಳನ್ನು ಸಾಕುತ್ತಿದ್ದು ತಮಿಳುನಾಡಿನ ಸೇಲಂ ಬ್ಲಾಕ್ ಎಂಬ ತಳಿಯಾಗಿದ್ದು ಗಿಡ್ಡವಿರುತ್ತದೆ. ನಾಟಿ ಕೋಳಿ 8 ತಿಂಗಳು ಸಾಕುತ್ತಾರೆ 2-2 ವರೆ ಕೆ.ಜಿ ತೂಕ ಬರುತ್ತದೆ. 6 ತಿಂಗಳವರೆಗೆ ಸಾಕುತ್ತಾರೆ ಕೆಲವೊಮ್ಮೆ ಮಾರುತ್ತಾರೆ, ಕೆಲವೊಂದನ್ನು ಹೆಚ್ಚು ದಿನಗಳವರೆಗೆ ಸಾಕುತ್ತಾರೆ ಮೊಟ್ಟೆ ಹಾಕುತ್ತಿರುತ್ತದೆ. ಇವರು ನಾಟಿ ಕೋಳಿಗೆ ಫೀಡ್ ಹಾಕುವುದಿಲ್ಲ ರಾಗಿ, ಜೋಳ ಇವುಗಳನ್ನು ಹಾಕುತ್ತಾರೆ. ಮಾರ್ಕೆಟಿಂಗ್ ಲೋಕಲ್ ಮಾಡುತ್ತಾರೆ ಇವರ ಬಳಿಯೇ ಬಂದು ವ್ಯವಹಾರ ಮಾಡುತ್ತಾರೆ. ಒಟ್ಟಿನಲ್ಲಿ ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡುವುದರಿಂದ ಜೀವನ ಸುಗಮವಾಗಿ ಸಾಗುವಂತೆ ಮಾಡಿಕೊಳ್ಳಲಾಗುತ್ತದೆ.