ಉಡುಪಿ ಕಡೆ ಮಾಡುವ ಹಾಗಲಕಾಯಿ ಬಿಸಿ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
2 ಹಾಗಲಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು ಅದಕ್ಕೆ ಕಾಲು ಸ್ಪೂನ್ ಅರಿಶಿಣ, ಅರ್ಧ ಸ್ಪೂನ್ ಉಪ್ಪು ಹಾಕಿ ಮಿಕ್ಸ್ ಮಾಡಿ ಕೈಯಲ್ಲಿ ಗಿವುಚಬೇಕು. ಈ ರೀತಿ ಮಾಡುವುದರಿಂದ ಹಾಗಲಕಾಯಿಯಲ್ಲಿರುವ ಕಹಿ ಅಂಶ ಹೋಗುತ್ತದೆ. ಕಾಲು ಗಂಟೆ ಹಾಗೆಯೇ ಬಿಡಬೇಕು. 6 ಬ್ಯಾಡಗಿ ಮೆಣಸಿನಕಾಯಿ, ಕಾಲು ಸ್ಪೂನ್ ಸಾಸಿವೆ ಹಾಕಿ ಸ್ವಲ್ಪ ಪುಡಿ ಮಾಡಬೇಕು ಅದಕ್ಕೆ ಮುಕ್ಕಾಲು ಕಪ್ ಕಾಯಿತುರಿ ಹಾಕಿ ನೀರನ್ನು ಹಾಕದೆ ಮಿಕ್ಸಿಯಲ್ಲಿ ಪುಡಿ ಮಾಡಬೇಕು. ನಿಂಬೆ ಹಣ್ಣಿನ ಗಾತ್ರದ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಡಬೇಕು. ಪಾತ್ರೆಯಲ್ಲಿ ಎರಡು ಸ್ಪೂನ್ ಎಣ್ಣೆ ಹಾಕಬೇಕು ಎಣ್ಣೆ ಬಿಸಿಯಾದ ನಂತರ ಒಂದು ಸ್ಪೂನ್ ಸಾಸಿವೆ, ಒಂದು ಸ್ಪೂನ್ ಉದ್ದಿನಬೇಳೆ, ಒಂದು ಸ್ಪೂನ್ ಕಡಲೆಬೇಳೆ, ಸ್ವಲ್ಪ ಕರಿಬೇವು ಹಾಕಿ ಇದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಪ್ರೈ ಮಾಡಿ ನಂತರ ಅದನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು.
ನಂತರ ಅದೇ ಪಾತ್ರೆಯಲ್ಲಿ ಎರಡು ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ನೆನೆಸಿಟ್ಟ ಹಾಗಲಕಾಯಿಯನ್ನು ಹಿಂಡಿ ರಸ ತೆಗೆದು ಹಾಕಿ ಪ್ರೈ ಮಾಡಬೇಕು. ನಂತರ ನೆನೆಸಿಟ್ಟ ಹುಣಸೆ ಹಣ್ಣಿನ ನೀರನ್ನು ಹಾಕಬೇಕು, ರುಚಿಗೆ ತಕ್ಕಷ್ಟು ಬೆಲ್ಲ ಹಾಕಬೇಕು, ಒಂದು ಸ್ಪೂನ್ ಉಪ್ಪು ಹಾಕಿ ಕುದಿಸಬೇಕು ಕುದಿ ಬಂದು ನೀರೆಲ್ಲ ಇಂಗಿದ ನಂತರ ಪ್ರೈ ಮಾಡಿಕೊಂಡ ಕಾಯಿತುರಿಯನ್ನು ಹಾಕಿ ಮಿಕ್ಸ್ ಮಾಡಬೇಕು ಈ ಪಲ್ಯವನ್ನು ಅನ್ನದೊಂದಿಗೆ ತಿನ್ನಬಹುದು. ಈ ರೀತಿ ಪಲ್ಯ ಮಾಡುವುದರಿಂದ ಹಾಗಲಕಾಯಿ ಕಹಿಯಾಗುವುದಿಲ್ಲ.