Gruhalakshmi Scheme Pink Card: ಕರ್ನಾಟಕ ಸರ್ಕಾರದ 5 ಮಹತ್ವಕಾಂಕ್ಷೆಯ ಯೋಜತೆಯಲ್ಲಿ ಒಂದಾಗ ಗೃಹಲಕ್ಷ್ಮಿ ಯೋಜನೆಯ ಮೂಲಕ ಇದೀಗ ಮಹಿಳೆಯರಿಗೆ ಪಿಂಕ್ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿದ ಕಾರಣ ಪ್ರತಿಯೊಬ್ಬರ ಮಹಿಳೆಯ ಖಾತೆಗೆ ಹಣ ಜಮಾ ಮಾಡುವ ದಿನಾಂಕವನ್ನು ಸಹ ಮುಂದೂಡಿದೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳು ಸಹಾಯಧನ ನೀಡುವಂತಹ ಯೋಜನೆಯು ಮೊದಲಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15ನೇ ತಾರೀಕಿನಂದು ಲಾಂಚ್ ಮಾಡಲು ನಿರ್ಧರಿಸಿದ್ದರು ಈಗ ಇದನ್ನ ಆಗಸ್ಟ್ 27ಕ್ಕೆ ಮುಂದೂಡಲಾಗಿದೆ.
ಈ ಯೋಜನೆಯ ಬಿಡುಗಡೆಗಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಆಮಂತ್ರಿಸಲಾಗಿದೆ ಬೆಳಗಾವಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಿ ಕಾಂಗ್ರೆಸ್ ಪಕ್ಷ ಅಗಸ್ಟ್ 27ರಂದು ಇದನ್ನು ಬಿಡುಗಡೆ ಮಾಡುವ ಹಂಬಲವನ್ನ ಹೊಂದಿದೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇದರೊಂದಿಗೆ ಅದೇ ದಿನ ಈಗಾಗಲೇ ಅರ್ಜಿ ಸಲ್ಲಿಸಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ಅನ್ನು ವಿತರಣೆ ಮಾಡುವ ಬಗ್ಗೆ ಸಹ ಸರ್ಕಾರ ನಿರ್ಧಾರ ಮಾಡಿದೆ.
ಹಾಗಾದರೆ ಈ ಸ್ಮಾರ್ಟ್ ಕಾರ್ಡ್ ಏನನ್ನ ಹೊಂದಿರುತ್ತದೆ?
ಈ ಪಿಂಕ್ ಕಾರ್ಡಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭಾವಚಿತ್ರ ಇರುತ್ತದೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಎರಡು ಸಾವಿರ ರೂಪಾಯಿಗಳನ್ನು ಅದರಲ್ಲಿ ನಮೂದಿಸಲಾಗುತ್ತದೆ. ಈ ಕಾರ್ಡ್ಗಳನ್ನು ಆಗಸ್ಟ್ 27ರಂದು ಬಿಡುಗಡೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಇನ್ನು ಕೆಲವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅವಶ್ಯಕತೆಯಿಂದ ಈ ಕೆಲಸ ವಿಫಲಗೊಂಡಿದೆ ಎಂದು ಹೇಳುವವರು ಚಿಂತಿಸಬೇಕಾಗಿಲ್ಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶ ಇದ್ದು ರೇಷನ್ ಕಾರ್ಡ್ ಇಲ್ಲದ ಮಹಿಳೆಯರು ಸಹ ಮುಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಮಾಡಿಸಿ ಕೊಂಡು ಅರ್ಜಿಯನ್ನು ಸಲ್ಲಿಸಬಹುದು ಇದರ ಜೊತೆಗೆ ರೇಷನ್ ಕಾರ್ಡ್ ಹೊಂದಿಲ್ಲದೆ ಇದ್ದವರು ತಮ್ಮ ಮೊಬೈಲ್ ನ ಮೂಲಕ ಕೇವಲ ಐದೇ ನಿಮಿಷದಲ್ಲಿ ಕಲರ್ ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.
Gruhalakshmi Scheme Pink Card:
https://ahara.kar.nic.in/Home/EServices ಈ ಲಿಂಕ್ ನ ಮುಖಾಂತರ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮುಖಪುಟದ ಎಡ ಭಾಗದಲ್ಲಿ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿದ ನಂತರ ಕೆಳಗಡೆ ಶೋ ವಿಲೇಜ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಪೇಜ್ ಮೇಲ್ಗಡೆ ಒಂದು ಫಾರಂ ಕಾಣಿಸುತ್ತದೆ ಅದರಲ್ಲಿ ನಿಮ್ಮ ಮಾಹಿತಿಯನ್ನು ತುಂಬಿ Go ಎಂದು ಕ್ಲಿಕ್ ಮಾಡಬೇಕು ನೀವು ಸೆಲೆಕ್ಟ್ ಮಾಡಿದ ಗ್ರಾಮದಲ್ಲಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಯಜಮಾನಿಯ ಕಂಪ್ಲೀಟ್ ಡೀಟೇಲ್ಸ್ ಕಾಣಿಸುತ್ತದೆ ಅಂದರೆ ಈ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದಾರೆ ಎಂದು ಅರ್ಥ. ಗ್ರಹಲಕ್ಷ್ಮಿ ಯೋಚನೆಗಳಿಗೆ ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಗಳು ಮತ್ತು ಆದಾಯ ತೆರಿಗೆಯನ್ನು ಸಲ್ಲಿಸುವ ಕುಟುಂಬಗಳು ಒಳಗೊಂಡಿರುವುದಿಲ್ಲ.
ನಿಮ್ಮ ರೇಷನ್ ಕಾರ್ಡ್ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ನೀವು ಉಪಯೋಗಿಸಬಹುದಾದ ಇನ್ನೊಂದು ವಿಧಾನ ಎಂದರೆ ಅದು ಸರ್ಕಾರದ ಸಹಾಯವಾಣಿ ಸಂಖ್ಯೆಯಾದ 8147500500 ಈ ಸಂಖ್ಯೆಗೆ ಕುಟುಂಬದ ಯಜಮಾನಿಯ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನ ಸುಲಭವಾಗಿ ತಿಳಿದುಕೊಳ್ಳಬಹುದು. ಇದನ್ನೂ ಓದಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ರದ್ದಾಯ್ತಾ? ಇಲ್ಲಿದೆ ನೋಡಿ ಅಸಲಿ ಸತ್ಯ