ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಭಾಗ್ಯ, ಗೃಹ ಜ್ಯೋತಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಯಾಜಮನಿಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡುತ್ತಿದೆ. ಕೆಲವರ ಅಕೌಂಟ್’ಗೆ ಹಣ ಜಮಾ ಆಗಿದೆ. ಆದರೆ, ಇನ್ನೂ ಹಲವರ ಅಕೌಂಟ್’ಗೆ ಇನ್ನೂ ಹಣ ಬಂದು ಸೇರಿಸಲ್ಲ.
ಗೃಹಲಕ್ಷ್ಮಿ ಭಾಗ್ಯದ ಬಗ್ಗೆ ಇನ್ನೊಂದು ಹೊಸ ನಿವಿಕರಣದ ಬಗ್ಗೆ ತಿಳಿಯೋಣ :-
ಗೃಹ ಲಕ್ಷ್ಮಿ ಯೋಜನೆಯ ಹಣ ಯಾವ ಅಕೌಂಟ್’ಗೆ ಜಮಾ ಆಗುತ್ತಿಲ್ಲವೋ ಅವರ ತೊಂದರೆಯನ್ನು ಪರಿಹಾರ ಮಾಡಲು ಅಧಿಕಾರಿಗಳು ಸ್ವತಃ ಜಿಲ್ಲೆಗಳಿಗೆ ಭೇಟಿ ನೀಡುವರು. ಬ್ಯಾಂಕ್ ಅಕೌಂಟ್’ನಲ್ಲಿ ತೊಂದರೆ ಇದ್ದರೆ ಅವರು ಪೋಸ್ಟ್ ಆಫೀಸ್’ನಲ್ಲಿ ಅಕೌಂಟ್ ಓಪನ್ ಮಾಡಬೇಕು. ಅದರ ಮೂಲಕ ಅವರ ಅಕೌಂಟ್’ಗೆ ಹಣ ಜಮಾ ಮಾಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಇದರ ಜೊತೆಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು ಕೂಡ ಸ್ತ್ರೀಯರ ತೊಂದರೆಗಳಿಗೆ ಕೈ ಜೋಡಿಸುವರು, ಅವರ ಜೊತೆ ನಿಂತು ಗೃಹಲಕ್ಷ್ಮಿ ತೊಂದರೆ ನಿವಾರಿಸಿ ಹಣ ಜಮಾ ಮಾಡಿಸಿ ಕೊಡುವಂತೆ ಸರ್ಕಾರ ಸೂಚನೆ ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಕೆಳಗೆ ನೋಂದಣಿ ಮಾಡಿಕೊಂಡು ಇನ್ನು ಹಣ ಬಾರದ ಫಲಾನುಭವಿಗಳು ತಕ್ಷಣವೇ, ಅರ್ಜಿಯ ಜೊತೆಗೆ E-KYC ಸಂಬಂಧಿತ ತೊಂದರೆಗಳಿಗೆ ಬ್ಯಾಂಕ್’ಗಳಲ್ಲಿ ಪರಿಹಾರ ಮಾಡಿಸಿ ಕೊಳ್ಳಬೇಕು.
ನೀವು ಕೊಟ್ಟಿರುವ ಬ್ಯಾಂಕ್ ಅಕೌಂಟ್’ಗೆ ಮತ್ತೊಮ್ಮೆ KYC ಮಾಡಿಸಬೇಕು. ಅಂದರೆ, ಬ್ಯಾಂಕ್ ಅಕೌಂಟ್’ಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಅನ್ನು ಮಾಡಿಸಬೇಕು ಆಗ ಹಣ ಜಮೆ ಆಗುತ್ತದೆ. ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯ ಮಾಡಲಾಗಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC , ಆಧಾರ್ ಸೀಡಿಂಗ್ ಮಾಡಿಸಬೇಕು.
ಕೆಲವೊಂದು ಬಾರಿ ಅಕೌಂಟ್’ಗೆ ಹಣ ಜಮೆ ಆಗದೆ ಇದ್ದರೆ, ಅದರ ಬಗ್ಗೆ ಮೊಬೈಲ್ ನಂಬರ್’ಗೆ ಮೆಸ್ಸೇಜ್ ಬರುವುದು. ಕೆಲವು ಸಾರಿ ಮೆಸ್ಸೇಜ್ ಬರುವುದಿಲ್ಲ. ಈ ರೀತಿಯ ಸಮಯದಲ್ಲಿ ಇದ್ದಲ್ಲಿ ನೀವು ಬ್ಯಾಂಕ್’ಗೆ ಹೋಗಿ ನಿಮ್ಮ ಪಾಸ್ ಬುಕ್ ಪರಿಶೀಲನೆ ಮಾಡಿಸಬೇಕು. ಇದು ಗೃಹಲಕ್ಷ್ಮಿ ಯೋಜನೆಯ ಹೊಸ ನವೀಕರಣ. ಆದ್ದರಿಂದ ,ನಿಮ್ಮ ಬ್ಯಾಂಕ್ ಖಾತೆ ಸರಿ ಇಲ್ಲದೆ ಇದ್ದಲ್ಲಿ ಪೋಸ್ಟ್ ಆಫೀಸ್ ಖಾತೆಯ ಮೂಲಕ ಹಣ ಪಡೆಯಬಹುದು.