Gruhalakshmi Scheme Money New Updates: ರಾಜ್ಯ ಸರ್ಕಾರವು ಮನೆಯನ್ನು ನಡೆಸುವ ಎಲ್ಲಾ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಬೆಂಬಲ ನೀಡಬೇಕು ಎಂದು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ನಮ್ಮ ರಾಜ್ಯದ ಮಹಿಳೆಯರ ಜಾತಿ ಮತ, ಇದ್ಯಾವುದನ್ನು ಕೂಡ ನೋಡದೆ ಎಲ್ಲಾ ಮಹಿಳೆಯರಿಗೂ ಸಮಾನವಾಗಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗಬೇಕು ಎಂದು ಸರ್ಕಾರ ಹೊರತಂದಿರುವ ಯೋಜನೆ ಇದಾಗಿದ್ದು, ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ ಮಾಹಿತಿ ಪ್ರಕಾರ ಜುಲೈ 19ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಯಿತು. ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಕೂಡ ಅರ್ಜಿ ಸಲ್ಲಿಸುವುದಕ್ಕೆ ಶುರು ಮಾಡಿದರು. ರಾಜ್ಯದಲ್ಲಿ ಒಟ್ಟು 1.220 ಕೋಟಿ ಮಹಿಳೆಯರಲ್ಲಿ ಸುಮಾರು 1.08 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಒನ್, ಬೆಂಗಳೂರು ಒನ್, ಬಾಪೂಜಿ ಕೇಂದ್ರ ಇಲ್ಲಿ ಗೃಹಲಕ್ಷ್ಮಿ ಯೋಜನೆಹಗೆ ಅರ್ಜಿ ಸಲ್ಲಿಸಬಹುದಿತ್ತು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೆಚ್ಚಿನ ದಾಖಲೆಗೆಳ ಅವಶ್ಯಕತೆ ಕೂಡ ಇರಲಿಲ್ಲ. ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆಯ ಸ್ಥಾನದಲ್ಲಿ ಮನೆಯ ಗೃಹಲಕ್ಷ್ಮಿಯ ಹೆಸರು ಇರಬೇಕು, ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿರಬೇಕು. ಹಾಗೆಯೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನ ekyc ಆಗಿರಬೇಕು. ಆಧಾರ್ ಕಾರ್ಡ್ ನ NCPY ಮ್ಯಾಪಿಂಗ್ ಮಾಡಿಸಿರಬೇಕು ಎನ್ನುವುದು ಮಾತ್ರ ಸರ್ಕಾರದ ನಿಯಮ ಆಗಿತ್ತು.
Gruhalakshmi Scheme Money New Updates
ಇದಿಷ್ಟು ಆಗಿರುವವರು ಯೋಜನೆಗೆ ಸುಲಭವಾಗಿ ಅಪ್ಲೈ ಮಾಡಬಹುದಿತ್ತು. ಅಂತೆಯೇ 1.08 ಕೋಟಿ ಹೆಣ್ಣುಮಕ್ಕಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಸರ್ಕಾರ ಸಹ ಗೃಹಲಕ್ಷ್ಮಿ ಯೋಜನೆಗೆ ಅದ್ಧೂರಿಯಾಗಿ ಚಾಲನೆ ನೀಡಿತು.. ಆಗಸ್ಟ್ 30ರಂದು ಮ್ಹಸೋರಿನಲ್ಲಿ ಎಲ್ಲಾ ರಾಜಕೀಯ ನಾಯಕರ ಸಮ್ಮುಖದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಅದೇ ದಿನದಿಂದಲೇ ಎಲ್ಲಾ ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ DBT ಮೂಲಕ ವರ್ಗಾವಣೆ ಆಗುತ್ತದೆ ಎಂದು ಕೂಡ ಹೇಳಲಾಯಿತು..
ಅದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಹಲವು ಹೆಣ್ಣುಮಕ್ಕಳ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗಿದೆ. ಆದರೆ ಇನ್ನೂ ಹಲವರ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದು ಅವರಲ್ಲಿ ಚಿಂತೆ ಕೂಡ ಶುರುವಾಗಿದೆ. ಇದರಿಂದ ಮಹಿಳೆಯರಿಗೆ ಚಿಂತೆ ಶುರುವಾಗಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾತನಾಡಿ, ಆದಷ್ಟು ಬೇಗ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಅಕೌಂಟ್ ಗೆ ಬರುತ್ತದೆ ಎಂದು ತಿಳಿಸಿದರು.
ಹಾಗೆಯೇ ಅಕೌಂಟ್ ಗೆ ಹಣ ಇನ್ನು ಬಂದಿಲ್ಲ ಎಂದರೆ ಅಂಥ ಮಹಿಳೆಯರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಎಲ್ಲದರ ಮಾಹಿತಿ ಸರಿ ಇದೆಯಾ ಎಂದು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು, ಒಂದು ವೇಳೆ ಮಾಹಿತಿ ಸರಿಯಾಗಿ ನೀಡಿಲ್ಲ ಎಂದರೆ, ಅಪ್ಡೇಟ್ ಮಾಡಿಸಿದರೆ ಗೃಹಲಕ್ಷ್ಮಿ ಯೋಜನೆಯ ಹಣ ಅಕೌಂಟ್ ಗೆ ಬರುತ್ತದೆ ಎಂದು ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಏನೋ ಬಂದಿದೆ, ಎರಡನೇ ಕಂತಿನ ಹಣ ಬರುವುದು ಯಾವಾಗ ಎನ್ನುವ ಪ್ರಶ್ನೆ ಕೂಡ ಜನರಲ್ಲಿ ಶುರುವಾಗಿದೆ.
ಅದಕ್ಕೀಗ ಉತ್ತರ ಸಿಕ್ಕಿದ್ದು, ಎರಡನೇ ಕಂತಿನ ಹಣ ಶೀಘ್ರದಲ್ಲೇ ಅಂದರೆ ಸೆಪ್ಟೆಂಬರ್ 15ರ ಒಳಗೆ ಎಲ್ಲಾ ಮಹಿಳೆಯರ ಖಾತೆಗೆ ತಲುಪುತ್ತದೆ ಎಂದು ಸರ್ಕಾರ ಮಾಹಿತಿ ಸಿಕ್ಕಿದೆ. ಮೊದಲ ಕಂತಿನ ಹಣ ಬರದೆ ಇದ್ದರೆ ಎರಡನೇ ಕಂತಿನ ಸಮಯಕ್ಕೆ ಮಹಿಳೆಯರು ನೀಡಿರುವ ದಾಖಲೆಗಳಲ್ಲಿ ಯಾವುದೇ ತಪ್ಪು ಇಲ್ಲ ಎಂದರೆ ಎರಡು ಕಂತಿನ ಹಣ ಬರುತ್ತದೆ ಎಂದು ಮಾಹಿತಿ ಸಿಕ್ಕಿದೆ.