Gruhalakshmi Scheme DBT status Check: ನಮ್ಮ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. 3 ತಿಂಗಳ ಹಣವನ್ನು ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗಿದೆ, 4ನೇ ಕಂತಿನ ಹಣವು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ 4ನೇ ಕಂತಿನ ಹಣ ಸುಮಾರು 15 ಜಿಲ್ಲೆಗಳಲ್ಲಿ ಬಿಡುಗಡೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ..

ಉತ್ತರ ಕನ್ನಡ, ಬೆಳಗಾವಿ, ದಾವಣಗೆರೆ, ಹಾಸನ, ಚಿತ್ರದುರ್ಗ, ಗದಗ, ಕೋಲಾರ,‌ಮಂಡ್ಯ, ಬಾಗಲಕೋಟೆ, ಬೆಂಗಳೂರು, ಮೈಸೂರು, ಬಿಜಾಪುರ, ಧಾರವಾಡ, ಕಲಬುರ್ಗಿ, ರಾಯಚೂರು ಈಗ ಈ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಆಗಿದ್ದು, ಬೇರೆ ಎಲ್ಲಾ ಜಿಲ್ಲೆಗಳಿಗೆ ಕೂಡ ಶೀಘ್ರದಲ್ಲೇ ಹಣ ಬಿಡುಗಡೆ ಆಗಲಿದೆ. ಆದರೆ ಕೆಲವು ಮಹಿಳೆಯರಿಗೆ ಮೊದಲ ಕಂತಿನ ಹಣ ಕೂಡ ಬಂದಿಲ್ಲ.

ಇನ್ನು ಕೆಲವು ಮಹಿಳೆಯರಿಗೆ , ಎರಡನೇ ಮತ್ತು ಮೂರನೇ ಕಂತಿನ ಹಣ ಬಿಡುಗಡೆಯಾಗಿ ಒಟ್ಟಿಗೆ ಅಕೌಂಟ್ ಗೆ ಬಂದಿದೆ ಆದರೆ ಇನ್ನೂ ಕೆಲವರಿಗೆ ಬಂದಿಲ್ಲ. ಆ ರೀತಿ ಹಣ ಬಂದಿಲ್ಲದೇ ಇರುವವರಿಗೆ ಅವರು ನೀಡಿರುವ ಮಾಹಿತಿಗಳಲ್ಲಿ ಸಮಸ್ಯೆ ಇರಬಹುದು. ನೀವು ಅರ್ಜಿಯಲ್ಲಿ ನೀಡಿರುವ ಮಾಹಿತಿ, ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ, ಬ್ಯಾಂಕ್ ಅಕೌಂಟ್ ನಲ್ಲಿ ನೀಡಿರುವ ಮಾಹಿತಿ ಇದೆಲ್ಲವೂ ಒಂದೇ ರೀತಿ ಇರಬೇಕು..

ಅಕಸ್ಮಾತ್ ಯಾವುದಾದರೂ ಒಂದು ಮಾಹಿತಿ ತಪ್ಪಿದ್ದರು, ಹೆಸರಿನ ಇನಿಷಿಯಲ್ ನಲ್ಲಿ ತಪ್ಪಿದ್ದರು ಸಹ, ನಿಮ್ಮ ಅಕೌಂಟ್ ಗೆ ಹಣ ಬರುವುದಿಲ್ಲ. ಹಾಗಾಗಿ ಒಂದು ವೇಳೆ ನೀವು ನೀಡಿರುವ ಯಾವುದೇ ಮಾಹಿತಿ ತಪ್ಪಿದ್ಯಾ ಎಂದು ಖಚಿತ ಪಡಿಸಿಕೊಳ್ಳಿ. ಹಾಗೆಯೇ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದ್ಯಾ ಎಂದು ಚೆಕ್ ಮಾಡುವುದರ ಜೊತೆಗೆ, ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದ್ಯಾ, ekyc ಆಗಿದ್ಯಾ, ಆಧಾರ್ ಸೀಡಿಂಗ್ ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಿ ಸರಿ ಇದೆಯಾ ಎಂದು ನೋಡಿಕೊಳ್ಳಬೇಕು.

ಈ ಎಲ್ಲಾ ಮಾಹಿತಿಗಳು ಸರಿ ಇದ್ದು ಹಣ ಬಂದಿಲ್ಲ ಎಂದರೆ, ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಸಮಸ್ಯೆ ಇರಬಹುದು, 8 ರಿಂದ 9 ಲಕ್ಷ ಮಹಿಳೆಯರಿಗೆ ಇಂಥದ್ದೊಂದು ಸಮಸ್ಯೆ ಇಂದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಅಂಥವರು ರಾಷ್ಟ್ರೀಕೃತ ಬ್ಯಾಂಕ್ ಗಳಾದ ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಸ್.ಬಿ.ಐ ಇಂಥ ಬ್ಯಾಂಕ್ ಗಳಲ್ಲಿ ಅಥವಾ ಪೋಸ್ಟ್ ಆಫೀಸ್ ನಲ್ಲಿ ಅಕೌಂಟ್ ಓಪನ್ ಮಾಡಿಸಿ.

ಹೊಸ ಅಕೌಂಟ್ ಮಾಡಿಸಿದ ಎರಡೇ ದಿನಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ. ಹಾಗಾಗಿ ನೀವು ಈ ರೀತಿ ಮಾಡಬಹುದು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಹೊಂದಿರುವವರು ಯಾವ ಬ್ಯಾಂಕ್ ಖಾತೆಗೆ ಹಣ ಬಂದಿದೆ ಎಂದು ತಿಳಿಯಲು DBT ಸ್ಟೇಟಸ್ ಚೆಕ್ ಮಾಡಬಹುದು. ಇದೆಲ್ಲವನ್ನು ಸರಿಯಾಗಿ ಮಾಡಿಕೊಂಡರೆ, ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮನ್ನು ತಲುಪುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!