Gruhalakshmi Scheme Campign: ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಜಾರಿಗೆ 4 ತಿಂಗಳು ಕಲೆಯುತ್ತಿದೆ. ಸುಮಾರು ಮಹಿಳೆಯರಿಗೆ 3 ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಮೊದಲ 2 ಕಂತುಗಳ ಹಣ ಬಿಟ್ಟು ಇನ್ನೇನು ಬಂದಿಲ್ಲ ಎನ್ನುತ್ತಿದ್ದಾರೆ. ಇತ್ತ ಸರ್ಕಾರ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ಸಮಸ್ಯೆ ಇರೋದಕ್ಕೆ ಹಣ ಬಂದಿಲ್ಲ ಎಂದು ಹೇಳುತ್ತಿದೆ.
ವಿಚಾರಿಸಲು ಆಹಾರ ಇಲಾಖೆಗೆ ಹೋದರೆ ಅವರಲ್ಲಿ ಮಾಹಿರಿ ಇಲ್ಲ, ಬ್ಯಾಂಕ್ ನಲ್ಲಿ ವಿಚಾರಿಸಿ ಎನ್ನುತ್ತಾರೆ, ಬ್ಯಾಂಕ್ ಗ್3 ಹೋದರೆ ನಮಗೆ ಗೊತ್ತಿಲ್ಲ ಆಹಾರ ಇಲಾಖೆಗೆ ಹೋಗಿ ಅಂತ ಹೇಳುತ್ತಾರ್3 ಎಂದು ಮಹಿಳೆಯರು ತಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಇಲ್ವಾ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಮಹಿಳೆಯರು ಹೇಳುವ ಪ್ರಕಾರ ಅವರ ಬ್ಯಾಂಕ್ ಅಕೌಂಟ್ ಸರಿಯಾಗಿಯೇ ಇದೆ, ಸರ್ಕಾರದ ಸಮಸ್ಯೆ ಇಂದಲೇ ಹಣ ಬಂದಿಲ್ಲ. ಹೀಗಾಗಿ ಇದು ಸರ್ಕಾರದ ತೊಂದರೆಯೇ ಎಂದು ಗೊತ್ತಾಗುತ್ತಿದೆ.
Gruhalakshmi Scheme Campign
ಹಲವು ಮಹಿಳೆಯರಿಗೆ ಒಂದು ಕಂತಿನ ಹಣವು ಬಂದಿಲ್ಲದೇ ಇರುವುದು ಅವರ ಆತಂಕ ಹೆಚ್ಚಿಸಿದೆ. ಒಂದು ವೇಳೆ ನಿಮಗೂ ಈ ರೀತಿ ಆಗಿದ್ರೆ ಗೃಹಲಕ್ಷ್ಮಿ ಶಿಬಿರದಲ್ಲಿ ಪಾಲ್ಗೊಳ್ಳಿ. ಡಿಸೆಂಬರ್ ನಲ್ಲಿ 27 ರಿಂದ 29ರವರೆಗು ಗೃಹಲಕ್ಷ್ಮಿ ಶಿಬಿರ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್, ಹೊಸ ಬ್ಯಾಂಕ್ ಅಕೌಂಟ್ ಓಪನ್ ಮಾಡುವುದು ಕೆವೈಸಿ ಮಾಡಿಸುವುದು ಇದೆಲ್ಲವೂ ಕೂಡ ನಡೆಯಲಿದೆ.
ಹಾಗಾಗಿ ತಡ ಮಾಡದೆ ಗೃಹಲಕ್ಷ್ಮಿ ಶಿಬಿರದಲ್ಲಿ ಪಾಲ್ಗೊಳ್ಳಿ, ಇಲ್ಲಿಗೆ ಹೋಗಲು ನಿಮ್ಮ ಆಧಾರ್ ಕಾರ್ಡ್, ನಿಮ್ಮ ಪತಿಯ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಇದಿಷ್ಟು ಮಾಹಿತಿಯನ್ನು ತೆಗೆದುಕೊಂಡು ಹೋಗಿ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಊರುಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಶಿಬಿರ ನಡೆಯುತ್ತಿದೆ.