Gruhalakshmi Scheme: ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಮುಖ್ಯವಾದ ಯೋಜನೆಗಳಾಗಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಜನರಿಗೆ ಅಕ್ಕಿ ಮತ್ತು ಇನ್ನಿತರ ಸೌಲಭ್ಯ ಸಿಗುತ್ತಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯನ್ನು ಮನೆಯನ್ನು ನಡೆಸಿಕೊಂಡು ಹೋಗುವ ಮಹಿಳಾಮಣಿಯರಿಗಾಗಿ ಜಾರಿಗೆ ತರಲಾಗಿದೆ. 2023ರ ಆಗಸ್ಟ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಲಾಯಿತು. ರಾಹುಲ್ ಗಾಂಧಿ ಅವರು ಮೈಸೂರಿಗೆ ಬಂದು ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು.

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿ ಎರಡು ತಿಂಗಳ ಸಮಯ ಕಳೆದಿದೆ, ಹಲವು ಮಹಿಳೆಯರಿಗೆ ಮೊದಲ ಕಂತಿನ ಹಣ ಬಂದಿದ್ದರೂ ಸಹ ಇನ್ನು ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ, ಅಂಥ ಮಹಿಳೆಯರಲ್ಲಿ ಈಗ ಆತಂಕ ಶುರುವಾಗಿದೆ. ಮೊದಲ ಕಂತಿನ ಹಣ ಯಾವಾಗ ಬರುತ್ತೆ? ಎರಡನೇ ಕಂತಿನ ಹಣ ಬರೋದು ಯಾವಾಗ? ಎರಡು ಒಟ್ಟಿಗೆ ಬರುತ್ತಾ? ಹೀಗೆ ಸಾಕಷ್ಟು ಪ್ರಶ್ನೆಗಳು ಗೊಂದಲಗಳು ಇದೆ. ಅವುಗಳಿಗೆ ಇಂದು ಉತ್ತರ ತಿಳಿಸುತ್ತೇವೆ ನೋಡಿ..

ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ 1.20 ಕೋಟಿ ಮಹಿಳೆಯರು ಅರ್ಹತೆ ಹೊಂದುತ್ತಾರೆ ಎಂದು ಸರ್ಕಾರ ಮಾಹಿತಿ ನೀಡಿತ್ತು, ಯೋಜನೆ ಜಾರಿಗೆ ಬರುವ ವೇಳೆಗೆ 1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಈಗಿನವರೆಗು ಸುಮಾರು 1.15 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಅವರುಗಳ ಪೈಕಿ ಸುಮಾರು 92 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಬಂದಿದೆ.

ಇನ್ನು 18 ಲಕ್ಷ ಮಹಿಳೆಯರಿಗೆ ಯೋಜನೆಯ ಹಣ ಇನ್ನು ಸಿಕ್ಕಿಲ್ಲ. ಹಣ ಬರದೆ ಇರಲು ನೀವು ನೀಡಿರುವ ಮಾಹಿತಿ, ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ, ಬ್ಯಾಂಕ್ ಪಾಸ್ ಬುಕ್ ನಲ್ಲಿರುವ ಮಾಹಿತಿ ಈ ಮೂರರಲ್ಲಿ ಏನಾದರೂ ತಪ್ಪಾಗಿದ್ದರೆ, ನಿಮ್ಮ ಹೆಸರು, ಮನೆ ಅಡ್ರೆಸ್, ಹೆಸರಿನಲ್ಲಿ ಇನಿಷಿಯಲ್ ಇದೆಲ್ಲವೂ ಸರಿಯಾಗಿರಬೇಕು, ಒಂದು ವೇಳೆ ಇದರಲ್ಲಿ ಮಿಸ್ಟೇಕ್ ಆಗಿದ್ದರು ಕೂಡ ಹಣ ಬರುವುದಕ್ಕೆ ಸಮಸ್ಯೆ ಆಗುತ್ತದೆ ಎಂದು ತಿಳಿಸಿದ್ದಾರೆ.

Gruhalakshmi Scheme

ಇದೇ ಸಮಸ್ಯೆ ಇಂದಲೇ 8 ರಿಂದ 9 ಲಕ್ಷ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ ಎಂದು ಸರ್ಕಾರ ತಿಳಿಸಿದೆ. ಇಷ್ಟರಲ್ಲಿ ಸುಮಾರು 6 ಲಕ್ಷ ಮಹಿಳೆಯರ ವಿಚಾರದಲ್ಲಿ ಅವರು ನೀಡಿರುವ ಮಾಹಿತಿ ಮತ್ತು ಬ್ಯಾಂಕ್ ಅಕೌಂಟ್ ಗೆ ಎರಡು ಮ್ಯಾಚ್ ಆಗದೆ ಹಣ ಬರದೆ ಇರುವ ಸಾಧ್ಯತೆ ಇದೆ. ಕೆಲವೊಮ್ಮೆ ಮನೆಯ ಒಡತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇರುತ್ತದೆ. ಆಗ ಆಧಾರ್ ಕಾರ್ಡ್ ಗೆ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಎಂದು ಚೆಕ್ ಮಾಡಿ. ಅದೇ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗುತ್ತದೆ.

ಈ ಮಾಹಿತಿ ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಸಿಗುತ್ತದೆ, ಅಲ್ಲಿ ಸಿಗದೆ ಹೋದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ CDPO ಅಧಿಕಾರಿಗಳಿಂದ ಪಡೆಯಬಹುದು. Kyc ಮಾಡಿಸದೆ ಇರುವ 60 ಸಾವಿರ ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ. ಹಾಗಾಗಿ ಇದನ್ನು ಕೂಡ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಇದಿಷ್ಟು ಕಾರಣಗಳಿಂದ ಸುಮಾರು 9 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನು ಹಣ ವರ್ಗಾವಣೆ ಆಗಿಲ್ಲ ಎಂದು ಮಾಹಿತಿ ಸಿಕ್ಕಿದೆ.

ನಿಮಗೆ ಇನ್ನು ಹಣ ಬಂದಿಲ್ಲ ಎಂದರೆ ಅದಕ್ಕೆ ಕಾರಣ ಏನು ಎಂದು ತಿಳಿಯಲು, CDPO ಅಧಿಕಾರಿಗಳನ್ನು ಭೇಟಿ ಮಾಡುವುದು ಒಳ್ಳೆಯದು, ಆಗ ಅವರು ಚೆಕ್ ಮಾಡಿ ಕಾರಣ ತಿಳಿಸುತ್ತಾರೆ. ಆ ತಪ್ಪನ್ನು ಸರಿಪಡಿಸಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ. ಇನ್ನು ಎರಡನೇ ಕಂತಿನ ಹಣ ಬರೋದು ಯಾವಾಗ ಎನ್ನುವ ಪ್ರಶ್ನೆ ಸಹ ಜನರಲ್ಲಿದೆ. ಇಲ್ಲಿ ಮಹಿಳೆಯರು ಯಾವ ತಿಂಗಳಿನಿಂದ ಅರ್ಜಿ ಸಲ್ಲಿಸಿದ್ದಾರೋ ಅದೇ ತಿಂಗಳಿನಿಂದ ಹಣ ಅವರ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ.

ಆಗಸ್ಟ್ ಇಂದ ಅರ್ಜಿ ಸಲ್ಲಿಸಿದ್ದರೆ ಆಗಸ್ಟ್ ಇಂದ, ಸೆಪ್ಟೆಂಬರ್ ಇಂದ ಅರ್ಜಿ ಸಲ್ಲಿಸಿದ್ದರೆ ಸೆಪ್ಟೆಂಬರ್ ಇಂದ ಹಣ ನಿಮ್ಮ ಖಾತೆಗೆ ಬರುತ್ತದೆ. ಒಂದು ವೇಳೆ ಆಗಸ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಇನ್ನು ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದರೆ, ಎರಡು ಕಂತಿನ ಹಣ ಒಟ್ಟಿಗೆ ಬರುತ್ತದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರಿಗೆ ಹಣ ಬರುವುದು 2 ಅಥವಾ 3 ತಿಂಗಳು ತಡ ಆಗಬಹುದು ಎಂದು ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ. ಎರಡನೇ ಕಂತಿನ ಹಣ ವರ್ಗಾವಣೆ ಆಗುವ ಕೆಲಸ, ಅಕ್ಟೋಬರ್ 10ರಿಂದ ಶುರುವಾಗಬಹುದು ಎಂದು ಮಾಹಿತಿ ಸಿಕ್ಕಿದೆ. ಇದನ್ನೂ ಓದಿ Gruhalakshmi Scheme: 1 ಲಕ್ಷ ಅರ್ಜಿಗಳನ್ನು ತಿರಸ್ಕರಿಸಿದ ಸರ್ಕಾರ, ಇವರಿಗೆಲ್ಲಾ ಗೃಹಲಕ್ಷ್ಮಿ ಯೋಜನೆ ಹಣ ಸಿಗಲ್ಲ..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!