Gruhalakshmi Scheme: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಎಲ್ಲರ ಮನೆ ಮನಗಳಲ್ಲಿ ಗೃಹಲಕ್ಷ್ಮಿ ಮನೆ ಮಾತಾಗಿದ್ದಾಳೆ. ಎಲ್ಲರೂ ಗ್ರಹಲಕ್ಷ್ಮಿ (Gruhalakshmi) ಗ್ರಹಲಕ್ಷ್ಮಿ ಎಂದು ಬಾಯಿ ತುಂಬಾ ಕರೆಯುತ್ತಿದ್ದಾರೆ. ಆದರೆ ಈ ಗ್ರಹಲಕ್ಷ್ಮಿಯೂ ಎಲ್ಲರ ಖಾತೆಗೆ ಇನ್ನೂ ಬಂದಿಲ್ಲ. ಇದರಿಂದ ಕೆಲವೊಂದು ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಎರಡನೆಯ ಕಂತು ಕೂಡ ಬಿಡುಗಡೆಯಾಗಿದ್ದು ಇನ್ನೂ ಮೊದಲಿನ ಕಂತನ್ನೇ ಪಡೆಯದವರು ಹಲವು ಮಂದಿ. ಯಾವಾಗ ಗ್ರಹಲಕ್ಷ್ಮಿ ನಮ್ಮನ್ನು ಬಂದು ಸೇರುತ್ತಾಳೋ ಅಂತ ಮಹಿಳೆಯರು ಕಾತುರದಲ್ಲಿ ಕಾಯ್ತಾ ಇದ್ದಾರೆ. ಎರಡನೇ ಕಂತಿನ ಜೊತೆಗೆ ಮೊದಲನೇ ಕಂತು ಕೂಡ ಬಂದು ಸೇರುತ್ತದೆ ಅಂತ ಲಕ್ಷ್ಮಿ ಹೆಬ್ಬಾಳಕರ್ ಅವರು ಹೇಳಿಕೆಯನ್ನ ಕೊಟ್ಟಿದ್ದರು. ಅದನ್ನು ಕಾದು ಕುಳಿತ ಮನೆಯ ಯಜಮಾನಿಯರಿಗೆ ಬಿಗ್ ಶಾಕ್ ಒಂದು ಕಾದಿದೆ.
ಇನ್ನು ಕೆಲವು ಕಡೆ ಮಾನ್ಯ ಯಜಮಾನಿಯರು ಕೋಪದಲ್ಲಿ ಸರ್ಕಾರವನ್ನು ದೂರತ್ತಿದ್ದಾರೆ ಅರ್ಜಿ ಸಲ್ಲಿಸಿದರು ಕೂಡ ಹಣ ಬಂದಿಲ್ಲ ಸುಳ್ಳು ಆಶ್ವಾಸನೆ ಕೊಟ್ಟ ಸರ್ಕಾರ ಎಂತೆಲ್ಲಾ ಬೈಯುತ್ತಿದ್ದಾರೆ. ಈಗಾಗಲೇ ಸುಮಾರು 70 ಪ್ರತಿಶತ ಮಹಿಳೆಯ ಖಾತೆಗೆ 200 ರೂಪಾಯಿ ವರ್ಗಾವಣೆ ಆಗಿದೆ. ಆದರೆ ಇನ್ನೂ 30% ಮಹಿಳೆಯರ ಖಾತೆಗೆ ಹಣ ಇನ್ನು ಬಂದಿಲ್ಲ. ಎರಡನೇ ಕಂತಿನಲ್ಲಿ ಬರಬಹುದು ಎಂದು ಕಾದು ಕೂತ ಮಹಿಳೆಯರಿಗೆ ಬಿಗ್ ಶಾಕ್ ಕಾದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದಂತೆ ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿದ್ದರೆ ಮಾತ್ರ ಹಣವು ನಿಮ್ಮ ಕೈ ಸೇರುತ್ತದೆ ಎಂದು ಆಗಲೇ ಸ್ಪಷ್ಟಪಡಿಸಿದ್ದರು. ನಂತರ ಅದನ್ನು ಮನೆಯ ಯಜಮಾನಿಯರು ತಿದ್ದುಪಡಿ ಮಾಡಿಕೊಂಡಿದ್ದರು ಕೂಡ ಅಂತವರ ಖಾತೆಗೆ ಹಣ ಬಂದಿಲ್ಲ ಯಾಕೆಂದರೆ ಇನ್ನೂ ಅದು ಅಪ್ಡೇಟ್ ಆಗಿಲ್ಲದ ಕಾರಣ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಹಾಗೆಯೇ ಮೂರು ಸಾವಿರಕ್ಕೂ ಹೆಚ್ಚಿನ ಅರ್ಜಿದಾರರು ಮರಣ ಹೊಂದಿರುವುದರಿಂದ ಅಂತಹ ಅವರ ಖಾತೆಗೂ ಕೂಡ ಹಣ ಹೋಗುವುದಿಲ್ಲ. ಇನ್ನು ಈ ಕೆ ವೈ ಸಿ ಮಾಡಿಸಿಕೊಂಡಿಲ್ಲ ಆದ್ದರಿಂದ ಅವರ ಖಾತೆಗೂ ಕೂಡ ಹಣ ಹೋಗುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಮಹಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇನ್ನು ನಿಗದಿಯಾಗಿಲ್ಲದೆ ಇರುವುದರಿಂದ ಅರ್ಜಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳೆಯರ ಖಾತೆಯ ಸಮಸ್ಯೆಗಳು ಸರಿ ಹೋಗಿದ್ದಲ್ಲಿ ಅವರಿಗೆ ಯಾವುದೇ ತೊಂದರೆ ಇಲ್ಲದೆ ಎರಡು ಕಂತಿನ ಹಣಗಳು ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.
ಇದನ್ನೂ ಓದಿ: ಅಕ್ರಮ ಸಕ್ರಮ ಅರ್ಜಿ ಮತ್ತೆ ಪ್ರಾರಂಭ, ಆಸಕ್ತರು ಅರ್ಜಿಹಾಕಿ