Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆಯಾಗಿ, ಇದೀಗ 4ನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ. ಆದರೆ ಇನ್ನೂ ಕೂಡ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) 4ನೇ ಕಂತಿನ ಹಣ ಸಿಕ್ಕಿಲ್ಲ. ಅದಕ್ಕೆ ಕಾರಣ ತಾಂತ್ರಿಕ ದೋಷಗಳು ಇರಬಹುದು ಅಥವಾ ಬೇರೆ ಯಾವುದಾದರೂ ಕಾರಣಗಳು ಕೂಡ ಇರಬಹುದು. ಒಂದು ವೇಳೆ ನಿಮಗೆ ಇನ್ನು ಹಣ ಬಂದಿಲ್ಲ ಅಂದರೆ ಜನವರಿ ತಿಂಗಳ ಮೊದಲ ವಾರದ ಒಳಗೆ ಹಣ ಬಂದೆ ಬರುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರ ಪೈಕಿ 80% ಮಹಿಳೆಯರಿಗೆ 3 ಕಂತಿನ ಹಣ ಬಂದಿದೆ. ಇನ್ನು 20% ಮಹಿಳೆಯರಿಗೆ ಬಂದಿಲ್ಲ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ದು, ಎಲ್ಲಾ ಮಹಿಳೆಯರಿಗೂ ಒಂದೇ ದಿನ ಹಣ ಕ್ರೆಡಿಟ್ ಆಗಿರುವುದಿಲ್ಲ. ಒಂದೊಂದು ದಿನಕ್ಕೆ ಒಂದೊಂದು ಕಡೆ ಜಿಲ್ಲೆಗಳಲ್ಲಿ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಜಮೆ ಆಗುತ್ತದೆ.

ಸರ್ಕಾರದಿಂದ ತಿಳಿಸಿರುವ ಹಾಗೆ, ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಇನ್ನು ಹಣ ಬಂದಿಲ್ಲ ಎಂದರೆ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಬಹುದು. ಡಿಸೆಂಬರ್ 27, 28 ಹಾಗೂ 29ರಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ನಡೆಯುತ್ತಿದ್ದು, ಮಹಿಳೆಯರು ಆ ಕ್ಯಾಂಪ್ ಅಟೆಂಡ್ ಮಾಡಿ, ತಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು.

ಒಂದು ವೇಳೆ ಬ್ಯಾಂಕ್ ಅಕೌಂಟ್ ಸಮಸ್ಯೆ ಇದ್ದರೆ, ಒಂದು ಸಾರಿ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್ ಬ್ರಾಂಚ್ ಗೆ ಹೋಗಿ ಕೆವೈಸಿ ಎಲ್ಲವು ಸರಿಯಾಗಿ ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಿ. ಬ್ಯಾಂಕ್ ಅಕೌಂಟ್ ನಲ್ಲಿರುವ ಎಲ್ಲಾ ಮಾಹಿತಿ, ರೇಷನ್ ಕಾರ್ಡ್ ಮಾಹಿತಿ ಹಾಗೂ ಅಪ್ಲಿಕೇಶನ್ ನಲ್ಲಿ ಹಾಕಿರುವ ಮಾಹಿತಿ ಎಲ್ಲವೂ ಸರಿ ಇದೆಯಾ ಎಂದು ಚೆಕ್ ಮಾಡಿ. ಬ್ಯಾಂಕ್ ಅಕೌಂಟ್ ನಲಿ ಸಮಸ್ಯೆ ಇದ್ದರೆ, ಹೊಸ ಅಕೌಂಟ್ ಓಪನ್ ಮಾಡಿಸಿ, ಆಗ ನಿಮ್ಮ ಎಲ್ಲಾ ಸಮಸ್ಯೆಗಳು ಸರಿ ಹೋಗಿ, ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಅಕೌಂಟ್ ಗೆ ಬರುತ್ತದೆ.

By AS Naik

Leave a Reply

Your email address will not be published. Required fields are marked *