Gruha Jyoti Scheme New Link: ಕಾಂಗ್ರೆಸ್ ಪಕ್ಷ ನೀಡಿರುವ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಈ ಯೋಜನೆಗೆ ಅರ್ಹರು ಈ ಕೂಡಲೇ ಅರ್ಜಿ ಸಲ್ಲಿಸಿ ಅದರ ಉಪಯೋಗಗಳನ್ನು ಪಡೆದುಕೊಳ್ಳಿ. ಗೃಹಜೋತಿ ಯೋಜನೆಯಿಂದಾಗಿ 200 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಸೇವಾ ಸಿಂಧು ವೆಬ್ಸೈಟ್ ಮೂಲಕ ಮೊಬೈಲ್ ಲ್ಯಾಪ್ಟಾಪ್ ಕಂಪ್ಯೂಟರ್ ಯಾವುದರಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ಅರ್ಜಿ ಸಲ್ಲಿಸಲು ಗೊತ್ತಾಗದೆ ಇದ್ದರೆ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಯಾವುದೇ ಕೇಂದ್ರಗಳಲ್ಲೂ ಕೂಡ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ವಿದ್ಯುತ್ ಕಚೇರಿ ಇಲಾಖೆಗೆ ಅಥವಾ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
ಆಧಾರ್ ಕಾರ್ಡ್
ಮೊಬೈಲ್ ನಂಬರ್
ವಿದ್ಯುತ್ ಇಲಾಖೆಯ ರಸೀದಿಯ ಮಾಹಿತಿ
ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಮೊದಲಿಗೆ ಗೂಗಲ್ ಗೆ ಹೋಗಿ sevasindhugs.karnataka.gov.in ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಗೃಹ ಜ್ಯೋತಿ ಯೋಜನೆಯ ಬಗ್ಗೆ ಸರ್ಚ್ ಮಾಡಿ ಕ್ಲಿಕ್ ಮಾಡಿ ಆಗ ಹೋಂ ಪೇಜ್ ಗೆ ತಲುಪುತ್ತೀರಾ. ಮೊದಲಿಗೆ ನಿಮಗೆ ಯಾವ ಭಾಷೆಯಲ್ಲಿ ಅರ್ಜಿ ನಮೂನೆ ಸಲ್ಲಿಸಬೇಕು ಎಂದು ಕೇಳುತ್ತಾರೆ ನಿಮಗೆ ಸರಿಹೊಂದುವ ಭಾಷೆಯನ್ನು ಆಯ್ಕೆ ಮಾಡಿ. ನಂತರ ಅಲ್ಲಿ ಕೇಳಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ಕರೆಂಟ್ ಬಿಲ್ಲ್ ನಲ್ಲಿ ಇರುವ ಹಾಗೆ ನಿಮ್ಮ ಹೆಸರನ್ನು ನಮೂದಿಸಿ.
ಖಾತೆ ಸಂಖ್ಯೆ ಅಥವಾ ಸಂಪರ್ಕ ಸಂಖ್ಯೆ ಎಂದು ಹೇಳಲಾಗುತ್ತದೆ ಈ ಸಂಖ್ಯೆಯು ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇರುತ್ತದೆ ಅಲ್ಲಿ ನೋಡಿ ಸರಿಯಾಗಿ ಭರ್ತಿ ಮಾಡಿ. ಹೆಸರು ಹಾಗೂ ಖಾತೆ ನಂಬರ್ ಎರಡು ಮಾಹಿತಿಗಳು ಸರಿಯಾಗಿದ್ದರೆ ಮೂರನೇ ಆಪ್ಷನ್ ನಲ್ಲಿ ವಿಳಾಸ ಇರುತ್ತದೆ ಅದು ಆಟೋಮೆಟಿಕ್ ಆಗಿ ವಿದ್ಯುತ್ ಬಿಲ್ ನಲ್ಲಿ ಇರುವ ಹಾಗೆ ಬರ್ತಿಯಾಗುತ್ತದೆ. ನಂತರ ನಿವಾಸಿಯ ವಿಧ ಎಂದು ಕೇಳಲಾಗುತ್ತದೆ ಅದರಲ್ಲಿ ಮಾಲಿಕ ಅಥವಾ ಬಾಡಿಗೆದಾರ ಎನ್ನುವ ಎರಡು ಆಪ್ಷನ್ ಇರುತ್ತದೆ ನೀವು ಯಾವ ಆಪ್ಷನ್ಗೆ ಸರಿಹೊಂದುತ್ತಿರೋ ಅದನ್ನು ಕ್ಲಿಕ್ ಮಾಡಿ.
ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಒಮ್ಮೆ ಪರಿಶೀಲಿಸಿ ಸಬ್ಮಿಟ್ ಅನ್ನು ಪ್ರೆಸ್ ಮಾಡಿ ಆಗ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ಎಂಟ್ರಿ ಮಾಡಿ.ಕೊನೆಯದಾಗಿ ಅರ್ಜಿ ಸಲ್ಲಿಕೆ ಆಗಿರುವುದರ ಬಗ್ಗೆ ಕೊನೆಯದಾಗಿ ಒಂದು ಪ್ರಿಂಟ್ ಬರುತ್ತಿದೆ ತೆಗೆದುಕೊಳ್ಳಿ ಏಕೆಂದರೆ ನೀವು ಅರ್ಜಿ ಸಲ್ಲಿಸಿದ್ದೀರಾ ಎನ್ನುವುದಕ್ಕೆ ಅದು ಒಂದು ದಾಖಲೆಯಾಗಿರುತ್ತದೆ. ಇಷ್ಟು ಮಾಡಿದರೆ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ Father Property: ಮಕ್ಕಳ ಪರ್ಮಿಷನ್ ಇಲ್ಲದೆ ತಂದೆ ಅಸ್ತಿ ಮಾರಾಟ ಬಹುದಾ? ಕೋರ್ಟ್ ಕೊಟ್ಟ ತೀರ್ಪು ಏನು ಗೊತ್ತಾ