ಸ್ವಲ್ಪ ಹೊತ್ತು ಸುಮ್ಮನೆ ಕೂತಾಗ ಅಥವಾ ಸ್ನೇಹಿತರ ಜೊತೆ ಪೇಟೆ ತಿರುಗಾಡುವಾಗ ಏನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಈ ರೀತಿ ಅನಿಸಿದಾಗ ಕುರುಕುರೆ, ಚಿಪ್ಸ್ ಅಂತ ತಿನ್ನುವ ಬದಲು ಕಡಲೆಯನ್ನು ಕೊಂಡು ತಿನ್ನುವುದು ಒಳ್ಳೆಯದು. ಏಕೆಂದರೆ ಚಿಪ್ಸ್ ನಂತಹ ಕರಿದ ಪದಾರ್ಥಗಳು ಬಾಯಿಗೆ ರುಚಿ ಕೊಟ್ಟರೂ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಆದರೆ ಕಡಲೆ ತಿಂದರೆ ಬಾಯಿಗೆ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಕಡಲೆ ತಿಂದರೆ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು.
ಬಾಡಿ ಬಿಲ್ಡರ್ ಗೆ ಹಾಗೂ ದೇಹದ ತೂಕ ಹೆಚ್ಚಿಸಿಕೊಳ್ಳುವವರಿಗೆ ಬೆಸ್ಟ್ ಸ್ನ್ಯಾಕ್ಸ್:ಕಡಲೆಯಲ್ಲಿ ಪ್ರೊಟೀನ್, ಖನಿಜಾಂಶಗಳು, ವಿಟಮಿನ್ ಗಳು ಅಧಿಕವಾಗಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅಮೈನೋ ಆಸಿಡ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ಕರುಳಿನ ಕ್ಯಾನ್ಸರ್ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಇದರಲ್ಲಿರುವ ಪಾಲಿ ಫಿನೋಲಿಕ್ ಆಸಿಡ್ ಕ್ಯಾನ್ಸರ್, ಹೃದಯದ ತೊಂದರೆ, ಸೋಂಕು, ಅಲ್ಜೈಮರ್ಸ್ ಈ ರೀತಿಯ ತೊಂದರೆಗಳು ಬರದಂತೆ ತಡೆಯುತ್ತದೆ.ದೇಹದ ಹಾಗೂ ತ್ವಚೆಯೆ ಆರೋಗ್ಯಕ್ಕೆ ವಿಟಮಿನ್ ಇ ತುಂಬಾ ಒಳ್ಳೆಯದು ಹಾಗೂ ಅವಶ್ಯಕ ಕೂಡ. ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಲು ಕಡಲೆಯಲ್ಲಿರುವ ವಿಟಮಿನ್ ಇ ಪ್ರಮುಖ ಕಾರಣವಾಗಿದೆ.ಕಡಲೆಯಲ್ಲಿ ಪೋಷಕಾಂಶಗಳಾದ ರೈಬೋಫ್ಲೇವಿನ್, ಥೈಯಾಮಿನ್,ಪಾನ್ಥೋಥೆನಿಕ್ ಆಸಿಡ್ ವಿಟಮಿನ್ ಬಿ, ಫೋಲೆಟ್ ಇವುಗಳು ಹೆಚ್ಚಾಗಿ ಇರುವುದರಿಂದ ಕಡಲೆ ತಿಂದರೆ ಈ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು.
ಸಂಶೋಧಕರ ಪ್ರಕಾರ, ನೆಲಗಡಲೆಗಳನ್ನು ನಿಯಮಿತವಾಗಿ ತಿನ್ನುವ ಜನರು ಹೃದಯಾಘಾತ ಅಥವಾ ಕಾಯಿಲೆಯಿಂದ ಸಾಯುವ ಸಾಧ್ಯತೆ ತೀರಾ ಕಡಿಮೆ. ಕಡಲೆಕಾಯಿ ಮತ್ತು ಇತರ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ (ಎಲ್ಡಿಎಲ್) ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಪ್ಲೇಕ್ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ಕಡಲೆಕಾಯಿ ಇದನ್ನು ತಡೆಯಬಹುದು.
ನೆಲಗಡಲೆ ಹೃದ್ರೋಗಕ್ಕೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ನೆಲಗಡಲೆಗಳಲ್ಲಿನ ರೆಸ್ವೆರಾಟ್ರೊಲ್ ಹೃದಯದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ. 100 ಗ್ರಾಂ ಕಡಲೆ ಬೀಜವನ್ನು ನೀರಿನಲ್ಲಿ ನೆನೆಸಿ ಅದನ್ನು ತೆಗೆದು ಜಾರಿನಲ್ಲಿ ಹಾಕಿ ಬೇಕಾದರೆ ಒಂದು ಬಾಳೆಹಣ್ಣು ಹಾಕಿ ಜೊತೆಗೆ ಎರಡು ಚಮಚ ಜೇನನ್ನು ಸೇರಿಸಿ ಚೆನ್ನಾಗಿ ರುಬ್ಬಿದರೆ. ಶೇಂಗಾ ಗಂಜಿ ತಯಾರಾಗುವುದು.