Great good news from the government for home builders: ಜನಿಸಿದ ಪ್ರತಿಯೊಬ್ಬ ಮನುಷ್ಯನು ಕೂಡ ಅದರಲ್ಲೂ ಪ್ರಬುದ್ಧ ಆದ ನಂತರ ಚೆನ್ನಾಗಿ ದುಡಿದು ಹಣವನ್ನು ಉಳಿತಾಯ ಮಾಡಿ ಒಂದೊಳ್ಳೆ ಮನೆಯನ್ನು ಖರೀದಿಸಬೇಕು ಆ ಮನೆಯಲ್ಲಿ ನನ್ನ ಜೀವನವನ್ನು ನನಗೆ ಮೆಚ್ಚುಗೆ ಆಗುವಂತೆ ನಡೆಸಬೇಕು ಎನ್ನುವ ಕನಸನ್ನು ಹೊಂದಿರುತ್ತಾನೆ. ಆದರೆ ಇಂದಿನ ಕಾಲದಲ್ಲಿ ಮನೆಯನ್ನು ಕಟ್ಟುವುದು ಅಷ್ಟೊಂದು ಸುಲಭವಲ್ಲ. ಯಾಕೆಂದರೆ ಸಂಪಾದನೆ ಮಾಡುವ ಹಣಕ್ಕಿಂತ ಹೆಚ್ಚಾಗಿ ಮನೆ ಕಟ್ಟುವ ವೆಚ್ಚವೇ ಜಾಸ್ತಿ ಆಗಿರುತ್ತದೆ. ಹೀಗಾಗಿ ಒಂದು ಮನೆಯನ್ನು ಕಟ್ಟುವಷ್ಟರ ಮಟ್ಟಿಗೆ ಉಳಿತಾಯ ಮಾಡಲು ಯಾರಿಂದಲೂ ಕೂಡ ಸಾಧ್ಯವೇ ಇಲ್ಲ.

ಸಾಮಾನ್ಯವಾಗಿ 20,000 ತಿಂಗಳಿಗೆ ಸಂಬಳ ಬಂದರೂ ಕೂಡ ಅದರಲ್ಲಿ ಖರ್ಚು ವೆಚ್ಚಗಳನ್ನು ಕಳೆದು ಮನೆ ಕಟ್ಟುವುದಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಾ ಹೋದರೆ ಮನೆಯನ್ನು ಕಟ್ಟುವಷ್ಟರಲ್ಲಿ ನೀವು ಮುದುಕರಾಗಿರುತ್ತೀರಿ. ಈ ವಿಚಾರ ಖಂಡಿತವಾಗಿ ಮನೆಯನ್ನು ಕಟ್ಟಬೇಕು ಎಂದು ಕನಸನ್ನು ಹೊಂದಿರುವವರು ಕನಸಿಗೆ ತಣ್ಣೀರನ್ನು ಎರೆಚಿದಂತಾಗುತ್ತದೆ. ಆದರೆ ಇತ್ತೀಚಿಗಷ್ಟೇ ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯ ಸರ್ಕಾರದಿಂದ ಕೇಳಿ ಬಂದಿರುವ ಒಂದು ಯೋಜನೆ ನಿಜಕ್ಕೂ ಎಲ್ಲರ ಜೀವನದಲ್ಲಿ ಒಂದು ಆಸೆಯನ್ನು ಮೂಡಿಸಿದೆ.

ಈ ಮಾತನ್ನು ಹೇಳಿರುವುದು ಬೇರೆ ಯಾರು ಅಲ್ಲ ವಸತಿ ಸಚಿವರಾಗಿರುವ ವಿ ಸೋಮಣ್ಣ ಅವರು. ಈಗಾಗಲೇ ಸರ್ಕಾರ ವಸತಿ ನಿರ್ಮಾಣಕ್ಕಾಗಿ ಒಂದು ಲಕ್ಷದ ಆಸುಪಾಸಿನಲ್ಲಿ ಹಣವನ್ನು ನೀಡುತ್ತಿದೆ ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಳ ಮಾಡುವುದಾಗಿ ಅಧಿಕೃತವಾಗಿ ಸೋಮಣ್ಣ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಸಂಪೂರ್ಣವಾಗಿ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ವಿ ಸೋಮಣ್ಣ ಹೇಳಿದ್ದು ಒಂದು ಸಂತೋಷದ ಸುದ್ದಿಯನ್ನು ಎಲ್ಲರಿಗೆ ತಿಳಿಸಿದ್ದಾರೆ.

ಟಾಟಾ ಕಂಪನಿ, ಟಾಟಾ ಮೋಟರ್ಸ್ ಕಡೆಯಿಂದ ಉದ್ಯೋಗಾವಕಾಶ ಆಸಕ್ತರು ಅರ್ಜಿಹಾಕಿ

ಹೌದು ಮಿತ್ರರೇ ಅದೇನೆಂದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದವರಿಗೆ ಮನೆಯನ್ನು ಕಟ್ಟಲು ಮೂರು ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಹಾಗೂ ನಗರದ ಭಾಗದವರಿಗೆ 5 ಲಕ್ಷ ಹಣವನ್ನು ನೀಡುವುದಾಗಿ ಸೋಮಣ್ಣ ಹೇಳಿದ್ದಾರೆ. ಮನೆಯನು ಕಟ್ಟಿಸಬೇಕು ಎಂದು ಕನಸು ಕಾಣುತ್ತಿರುವ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಖಂಡಿತವಾಗಿ ವಿ ಸೋಮಣ್ಣ ಅವರು ಹೇಳಿರುವ ಈ ಹೇಳಿಕೆ ಸಂತೋಷದ ಸುಧೆಯನ್ನು ಹರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Reply

Your email address will not be published. Required fields are marked *