ಕರ್ನಾಟಕದಲ್ಲಿ ಒಬ್ಬ ವ್ಯಕ್ತಿ ತಾನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಬೇಕು ಅಥವಾ ಸ್ಪರ್ಧಿಸಬೇಕು ಎಂದಿದ್ದರೆ ಆ ವ್ಯಕ್ತಿ ಯಾವ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು? ಹಾಗೂ ಚುನಾವಣೆಗೆ ಸ್ಪರ್ಧಿಸುವ ಮುನ್ನ ಯಾವೆಲ್ಲ ದಾಖಲೆಗಳನ್ನು ನೀಡಬೇಕು ಎನ್ನುವ ವಿವರವನ್ನು ಈ ಲೇಖನದಲ್ಲಿ ನೋಡೋಣ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸುವ ವ್ಯಕ್ತಿಗೆ ಇರಬೇಕಾದಂತಹ ಕೆಲವು ಪ್ರಮುಖವಾದ ಅರ್ಹತೆಗಳು ಈ ರೀತಿಯಾಗಿವೆ. ಮತದಾರರ ಪಟ್ಟಿಯಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಯ ಹೆಸರು ನೋಂದಾಯಿತವಾಗಿರಬೇಕು. ಮತದಾರರ ಪಟ್ಟಿಯಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಹೆಸರು ಇದ್ದರೆ ಆತ ಚುನಾವಣೆಗೆ ನಿಲ್ಲಲು ಅರ್ಹನಾಗಿರುತ್ತಾನೆ. ಒಂದು ವೇಳೆ ಅಭ್ಯರ್ಥಿಯ ಜಾತಿ ಆಧಾರದ ಮೇಲೆ ಚುನಾವಣೆಗೆ ನಿಲ್ಲಲು ಅಥವಾ ಸ್ಪರ್ಧಿಸಲು ಇಚ್ಛಿಸಿದ್ದರೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಇನ್ನು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 21 ವರ್ಷ ಆಗಿರಲೇಬೇಕು. 21 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಿಗೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರುವುದಿಲ್ಲ. ಇಷ್ಟೇ ಅಲ್ಲದೆ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಲು ಬಯಸುವ ಅಭ್ಯರ್ಥಿಯನ್ನು ಸ್ತಿರ ಮತ್ತು ಚರ ಆಸ್ತಿಯ ಪಟ್ಟಿಯನ್ನು ಸಹ ವಿವರಣೆಯೊಂದಿಗೆ ದಾಖಲೆ ಸಮೇತ ನೀಡಬೇಕಾಗುತ್ತದೆ. ಸ್ಥಿರ ಆಸ್ತಿ ಎಂದರೆ ಮನೆ, ಸೈಟು ಹಾಗೂ ಜಮೀನು ಇವೆಲ್ಲಾ ಸ್ಥಿರ ಆಸ್ತಿಗಳು ಆಗಿರುತ್ತವೆ. ಹಾಗೆ ಚರಾಸ್ತಿಗಳು ಯಾವುದು ಅಂತ ನೋಡುವುದಾದರೆ ಕಾರು ಬೈಕು ಮುಂತಾದವುಗಳ ಆಗಿರುತ್ತದೆ. ಈ ಎಲ್ಲ ವಿವರಗಳನ್ನು ಸರಿಯಾಗಿ ಪಟ್ಟಿಮಾಡಿ ಚುನಾವಣಾ ಅಪ್ಲಿಕೇಶನ್ ಜೊತೆಗೆ ಸಲ್ಲಿಸಬೇಕಾಗಿರುತ್ತದೆ.
ಚುನಾವಣೆಗೆ ನೀಡಲು ಬಯಸುವ ಅಭ್ಯರ್ಥಿಯ ಹೆಸರಿನಲ್ಲಿ ಯಾವುದೇ ರೀತಿಯ ಕಾನೂನನ್ನು ರೀತಿಯ ಅಪರಾಧಗಳು ದಾಖಲಾ ಗಿರಬಾರದು ಹಾಗೆ ಯಾವುದೇ ರೀತಿಯ ಕೇಸುಗಳು ದಾಖಲಾಗಿರಬಾರದು. ಒಂದು ವೇಳೆ ಯಾವುದಾದರೂ ಕೇಸುಗಳನ್ನು ಹೊಂದಿದ್ದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ ಆದಲ್ಲಿ ಅಂಥವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು. ಚುನಾವಣೆಗೆ ನಿಲ್ಲುವ ವ್ಯಕ್ತಿ ಆಧಾರ್ ಕಾರ್ಡ್ ಹೊಂದಿರಬೇಕು. ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇರಬಾರದು ಚುನಾವಣೆಗೆ ನಿಲ್ಲಲು ಬಯಸುವುದರಲ್ಲಿ ಸರ್ಕಾರಿ ಹುದ್ದೆಯಲ್ಲಿದ್ದರು ರಾಜೀನಾಮೆ ನೀಡಿದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇನ್ನು ಇವುಗಳ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಯ ಮನೆಯಲ್ಲಿ ಶೌಚಾಲಯ ಇರಬೇಕು ಶೌಚಾಲಯ ಹೊಂದಿರುವ ಅಭ್ಯರ್ಥಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಒಂದು ವೇಳೆ ಶೌಚಾಲಯ ಇಲ್ಲದೆ ಇದ್ದಲ್ಲಿ ಸರ್ಕಾರಕ್ಕೆ ಹೇಳಿಕೆ ಪತ್ರವನ್ನು ಸಲ್ಲಿಸಬೇಕು ಹೇಳಿಕೆ ಪತ್ರದಲ್ಲಿ ಒಂದು ವರ್ಷದೊಳಗಾಗಿ ಶೌಚಾಲಯ ಕಟ್ಟುವುದಾಗಿ ಹೇಳಿರಬೇಕು.
ಮೇಲೆ ಹೇಳಿರುವಂತಹ ಎಲ್ಲಾ ಅರ್ಹತೆಗಳನ್ನು ಹೊಂದಿರುವಂತಹ ವ್ಯಕ್ತಿಯು ಯಾವುದೇ ಅಭ್ಯಂತರವಿಲ್ಲದೇ ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಬಹುದು.