2020 ನೇ ಸಾಲಿನ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಈಗಾಗಲೇ ಘೋಷಣೆ ಆಗಿತ್ತು ಹಾಗೂ ಕೊರೋನ ಸೋಂಕಿನ ನಡುವೆಯೂ ಸಹ ಚುನಾವಣೆ ಮುಗಿದು ಇದರ ಫಲಿತಾಂಶ ಕೂಡಾ ಪ್ರಕಟ ಆಗಿದೆ. ಇದರ ಬೆನ್ನಲ್ಲೇ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಸದಸ್ಯನಿಗೆ ಬುಲೆಟ್ ಬೈಕ್‍ನ್ನು ಉಡುಗೊರೆಯಾಗಿ ನೀಡುವ ಮೂಲಕವಾಗಿ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಬೆಂಬಲಿಗರು ಸುದ್ದಿಯಾಗಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಚಾಮರಾಜ ನಗರ ಜಿಲ್ಲೆಯ ತಾವರಕಟ್ಟೆಮೊಳೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಆಗಿರುವ ಮಹೇಶ್ ಎಂಬ ವ್ಯಕ್ತಿ ಅಲ್ಲಿನ ಜನರ ಕಷ್ಟ ಸುಖಕ್ಕೆ ಸ್ಪಂದನೆ ನೀಡಿದ್ದು , ಈ ಬಾರಿ ಇವರ ಬೆಂಬಲಿಗರು ಹಾಗೂ ಅಭಿಮಾನಿಗಳು ಮಹೇಶ್ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ಇವರಿಗೆ ಎಂದು ಚಂದಾ ಹಣವನ್ನು ಸಂಗ್ರಹಿಸಿ ಬುಲೆಟ್ ಬೈಕನ್ನು ಖರೀದಿಸಿ ಕೊಟ್ಟಿದ್ದಾರೆ. ಮಹೇಶ್ ಅವರು ಈಗಾಗಲೇ ಕಳೆದ ಎರಡೂ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು ಮಾತ್ರವಲ್ಲದೆ ಎರಡೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಸಹ ಗೆಲವು ಸಾಧಿಸಿದ್ದರು . ಹಳ್ಳಿಗೆ ಅಗತ್ಯ ಇರುವ ಕೆಲಸಗಳನ್ನು ಮಾಡಿದ್ದಾರೆ ಮಾತ್ರವಲ್ಲದೆ ಜನರ ಕಷ್ಟಗಳಿಗೆ ಸ್ಪಂದನೆ ನೀಡಿ , ಜನರ ಕಷ್ಟ ಸುಖಗಳಲ್ಲಿ ಭಾಗಿ ಆಗಿದ್ದಾರೆ.
ಹೀಗಾಗಿ ಮಹೇಶ್ ಅವರ ಕಾರ್ಯ ವೈಖರಿಯನ್ನು ಮೆಚ್ಚಿದ ಊರಿನ ನಾಗರೀಕರು ಇವರನ್ನು ಈ ಬಾರಿಯ ಚುನಾವಣೆಯಲ್ಲಿಯೂ ಸಹ, ಅಂದರೆ ಮೂರನೇ ಬಾರಿಯೂ ಸಹ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಮತಗಳನ್ನು ನೀಡಿ ಮಹೇಶ್ ಅವರನ್ನು ಗೆಲ್ಲಿಸಿದ್ದಾರೆ. ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು ಬಂದು ತಮ್ಮ ಉರಿಗಾಗಿ, ಜನರಿಗಾಗಿ ಮತ್ತಷ್ಟು ಸೇವೆ ಮಾಡಲು ಗೆದ್ದು ಬಂದ ಮಹೇಶ್ ಅವರಿಗೆ ತಾವು ಮಾಡಿದ ವಾಗ್ದಾನದ ಪ್ರಕಾರ ಬುಲೆಟ್ ಬೈಕನ್ನು ನೀಡಿದ್ದಾರೆ. ಮಹೇಶ್ ಅವರು ತಾವರೇಕಟ್ಟೆಮೊಳೆ ಗ್ರಾಮದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ ಬುಲೆಟ್ ಉಡುಗೊರೆ ನೀಡುವುದಾಗಿ ಇವರ ಅಭಿಮಾನಿಗಳು ಹಾಗೂ ಬೆಂಬಲಿಗರು ವಾಗ್ದಾನ ಮಾಡಿದ್ದರಂತೆ. ಬಹುತೇಕವಾಗಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹೆಚ್ಚಾಗಿ ಇರುವ ಗ್ರಾಮ ತಾವರೇಕಟ್ಟೆಮೊಳೆ ಗ್ರಾಮ. ಹಾಗಿದ್ದರೂ ಸಹ ತಮ್ಮ ಮಾತಿನಂತೆ ಗ್ರಾಮದ ಪ್ರತಿಯೊಬ್ಬರೂ ಸಹ ಹಣವನ್ನು ಹಾಕಿ ಸಂಗ್ರಹಿಸಿದ ಒಟ್ಟೂ ಮೊತ್ತದಿಂದ ತಮ್ಮ ನೆಚ್ಚಿನ ಜನನಾಯಕನಿಗೆ ಬುಲೆಟ್ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ.