Gram Panchayat Jobs 2023: ಒಂದು ವೇಳೆ ನೀವು ಸರ್ಕಾರಿ ಕೆಲಸ ಪಡೆಯಬೇಕು ಎಂದುಕೊಂಡಿದ್ದರೆ ನಿಮಗಾಗಿ ಒಂದು ಸದವಕಾಶ ಕಾದಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಕೆಲಸಕ್ಕೆ ಹೋಗುತ್ತಿರುವವರಿಗೆ ಒತ್ತಡ ಹೆಚ್ಚಾಗಿರುವ ಕಾರಣ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ..
ಪ್ರಸ್ತುತ 733 ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಅನುಮತಿ ಸಿಕ್ಕಿದೆ, ರಾಜ್ಯ ಲೋಕಸೇವಾ ಆಯೋಗದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಕೆ.ಪಿ.ಎಸ್.ಸಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಆರ್.ಡಿ.ಪಿ.ಆರ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಖಾಲಿ ಇರುವ ಈ ಹುದ್ದೆಗಳು ಭರ್ತಿ ಆದರೆ, ಹೊಸ ಅವಕಾಶ ಪಡೆಯುವವರಿಗೆ ಮತ್ತು ಈಗಿರುವ ಸಿಬ್ಬಂದಿಗಳಿಗೆ ಒಳಿತು ಆಗಲಿದೆ. ಒಂದು ಪಿಡಿಒ ಗೆ 3 ಗ್ರಾಮ ಪಂಚಾಯ್ತಿಯ ಕೆಲಸಗಳನ್ನು ನೀಡಲಾಗುತ್ತಿದ್ದು, ಒತ್ತಡ ಜಾಸ್ತಿ ಇದೆ.
ಹಾಗೆಯೇ ಕೆಲಸಕ್ಕಾಗಿ ಕಾಯುತ್ತಿರುವವರ ವಯಸ್ಸು ಕೂಡ ಹೆಚ್ಚಾಗುತ್ತಿದೆ, ಹಾಗಾಗಿ ಖಾಲಿ ಇರುವ ಹುದ್ದೆಗಳು ಭರ್ತಿ ಆದರೆ ಈ ಸಮಸ್ಯೆಗೆ ಪರಿಹಾರವೂ ಸಿಗುತ್ತದೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳು ಯಾವುವು ಮತ್ತು ಎಷ್ಟು ಎಂದು ನೋಡುವುದಾದರೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 660 ಪಿಡಿಒ, ಗ್ರೇಡ್ 1 ಕಾರ್ಯದರ್ಶಿ 350 ಹುದ್ದೆಗಳು, ಗ್ರೇಡ್ 2 ಕಾರ್ಯದರ್ಶಿ 415 ಹುದ್ದೆಗಳು, ಒಟ್ಟು 1425 ಹುದ್ದೆಗಳು ಖಾಲಿ ಇದೆ.
Gram Panchayat Jobs 2023
ಇಷ್ಟರ ಪೈಕಿ 733 ಹುದ್ದೆಗಳಿಗೆ ಈಗ ನೇಮಕಾತಿ ನಡೆಯಲಿದೆ. ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಈಗ ನಿಮಗೆ ತಿಳಿಸುತ್ತೇವೆ.. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) :- ಪ್ರಸ್ತುತ 150 ಪಿಡಿಒ ಪೋಸ್ಟ್ ಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ, ಈ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ, ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಅಥವಾ ಪದವಿಗೆ ಸಮವಾದ ಪರೀಕ್ಷೆ ಕ್ಲಿಯರ್ ಮಾಡಿರಬೇಕು.
ಗ್ರೇಡ್ 1 ಕಾರ್ಯದರ್ಶಿ :- 135 ಗ್ರೇಡ್ 1 ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ ದ್ವಿತೀಯ ಪಿಯುಸಿ, ಪಾಸ್ ಆಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಗ್ರೇಡ್ 2 ಕಾರ್ಯದರ್ಶಿ :- 343 ಗ್ರೇಡ್ 2 ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗೂ ಸಹ ದ್ವಿತೀಯ ಪಿಯುಸಿ ಪಾಸ್ ಆಗಿರುವವರು ಅಪ್ಲೈ ಮಾಡಬಹುದು.
ದ್ವಿತೀಯ ದರ್ಜೆ ಲೆಕ್ಕ ಸಹಾಯಕ :- ಪ್ರಸ್ತುತ 105 ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗೂ ಸಹ ದ್ವಿತೀಯ ಪಿಯುಸಿ ಪಾಸ್ ಆಗಿರುವವರು ಅಪ್ಲೈ ಮಾಡಬಹುದು.
ಈ ಹುದ್ದೆಗಳು ಕೆ.ಪಿ.ಎಸ್.ಸಿ ಗೆ ಸೇರಿರುವ ಕಾರಣ, ಆನ್ಲೈನ್ ಮೂಲಕ ನೀವು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು. ಪ್ರಸ್ತುತ ಲೆವೆಲ್ 1 ಮತ್ತು ಲೆವೆಲ್ 2 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.