ಕರ್ನಾಟಕ ಸರ್ಕಾರವು ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಜನಸಾಮಾನ್ಯರಿಗೆ ಮನೆ ನಿರ್ಮಿಸಿಕೊಳ್ಳಲು ಸೂಕ್ತವಾದ ನಿವೇಶನಗಳನ್ನು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ನಿರ್ಮಿಸಿಕೊಡಲಿದೆ ಜನಸಾಮಾನ್ಯರ ಸೂರಿನ ಆಸೆಯನ್ನು ಈಡೇರಿಸುವ ಉದ್ದೇಶದಿಂದ ವಸತಿ ಬಡಾವಣೆ ನಿರ್ಮಾಣ ಯೋಜನೆಗೆ ತೀರ್ಮಾನ ಮಾಡಿದೆ. ಸಿದ್ದರಾಮಯ್ಯ ಸರ್ಕಾರವು ಈ ರೀತಿಯ ಹೊಸ ಯೋಜನೆಗೆ ಸಿದ್ಧತೆ ಮಾಡಿಕೊಂಡಿದ್ದು ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂಬುದಾಗಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಈ ಕುರಿತು ಇನ್ನಷ್ಟು ಮಾಹಿತಿಯನ್ನ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.

ಇಂದಿನ ದಿನಗಳಲ್ಲಿ ಜಾಗದ ಖರೀದಿ ಸುಲಭವಲ್ಲ ಈ ಕಾಲಮಾನದಲ್ಲಿ ಜಾಗದ ಬೆಲೆ ಜನಸಾಮಾನ್ಯರ ಕೈಗೆ ಎಟುಕದ್ದು. ಅಂದರೆ ಆಗಿನ ಕಾಲಗಳಿಗೆ ಹೋಲಿಸಿದರೆ ಈಗ ಜಾಗ ಅಥವಾ ಸೈಟ್ಗಳ ಬೆಲೆ ಗಗನಕ್ಕೇರಿದೆ ಅದರಲ್ಲಿಯೂ ನಗರ ಪ್ರದೇಶಗಳಲ್ಲಿನ ನಿವೇಶನಗಳು ಎಷ್ಟು ಹಣ ಕೊಟ್ಟರೂ ದೊರಕುವುದಿಲ್ಲ ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಸೈಟ್ ಖರೀದಿ ಮಾಡುವುದು ಕನಸಾಗಿಯೇ ಉಳಿದುಬಿಡುತ್ತದೆ ಆದರೆ ಇದೀಗ ಏಳು ಜಿಲ್ಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನ ಒದಗಿಸಲು ಮುಂದಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದ ನಗರ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಾರ್ವಜನಿಕರಿಗೆ ಸುಸಜ್ಜಿತವಾದ ಬಡಾವಣೆಯಲ್ಲಿ ಕೈಗೆಟುಕುವ ದರದಲ್ಲಿ ನಿವೇಶನಗಳನ್ನ ಒದಗಿಸಲು ವಸತಿ ಬಡಾವಣೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ ಎಂದು ಈ ಮೂಲಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಯೋಜನೆಯ ಮೂಲಕ ಸರ್ಕಾರವು ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದವರ ಮನೆ ನಿರ್ಮಾಣದ ಕನಸಿಗೆ ಆಸರೆಯಾಗಿ ನಿಲ್ಲಲಿದೆ. ಯೋಜನೆ ಜಾರಿಗೆ ತರಲು ನಿರ್ಧರಿಸಿರುವ ಏಳು ಜಿಲ್ಲೆಗಳು ಯಾವುವು ಎಂದು ನೋಡುವುದಾದರೆ ಹಾಸನ, ಚಾಮರಾಜನಗರ, ಚಿಕ್ಕಮಂಗಳೂರು, ಬಳ್ಳಾರಿ, ಕಲಬುರ್ಗಿ, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ಈ ವಸತಿ ಬಡಾವಣೆ ಯೋಜನೆಯನ್ನು ನಿರ್ಮಿಸಲಾಗುತ್ತಿದ್ದು ಜಿಲ್ಲೆಯ ಮಧ್ಯಮ ವರ್ಗ ಹಾಗೂ ಬಡವರ ಸೂರ್ಯನ ಕನಸಿಗೆ ರಾಜ್ಯ ಸರ್ಕಾರ ಆಸರೆಯಾಗಿ ನಿಲ್ಲುತ್ತದೆ ಎಂದು ಭರವಸೆಯನ್ನ ನೀಡಿದ್ದಾರೆ ಇಂತಹ ಒಂದು ಉತ್ತಮವಾದ ಮಾಹಿತಿಯನ್ನ ಸಿದ್ದರಾಮಯ್ಯನವರು ತಮ್ಮ ಟ್ವೀಟ್ ನ ಮುಖಾಂತರ ಕರ್ನಾಟಕದ ಜನತೆಗೆ ತಿಳಿಸಿದ್ದಾರೆ

ಇದನ್ನೂ ಓದಿ ನಿಮ್ಮ ಮನೆಯ ಸಾಕು ಪ್ರಾಣಿಗಳಿಗೆ ಏನೇ ತೊಂದ್ರೆ ಆದ್ರೂ ಜಸ್ಟ್ ಕಾಲ್ ಮಾಡಿ ಸಾಕು, ನಿಮ್ಮ ಮನೆಗೆ ಬಂದು ಉಚಿತ ಚಿಕಿತ್ಸೆ ನೀಡ್ತಾರೆ ವೈದ್ಯರು

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!