Govt peon jobs in karnataka 2023: ಒಂದು ವೇಳೆ ನೀವು SSLC ಪಾಸ್ ಆಗಿದ್ದು ಒಳ್ಳೆಯ ಕೆಲಸ ಸಿಕ್ಕಿಲ್ಲ, ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ನೀವು ಬೇಸರ ಪಟ್ಟುಕೊಂಡಿದ್ದರೆ, ನಿಮಗಾಗಿ ಒಂದು ಒಳ್ಳೆಯ ಅವಕಾಶ ಇದೆ. SSLC ಪಾಸ್ ಆಗಿದ್ರೆ ಸಾಕು ನೀವು ಈ ಕೆಲಸಕ್ಕೆ ಅರ್ಹತೆ ಪಡೆಯುತ್ತೀರಿ. ಹಾಗಾಗಿ ನೀವು ಕೂಡ ಈ ಕೆಲಸಕ್ಕೆ ಸುಲಭವಾಗಿ ಅಪ್ಲೈ ಮಾಡಿ, ಕೆಲಸ ಪಡೆದುಕೊಳ್ಳಬಹುದು. ಕೆಲಸದ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
ಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ನೀಡಲು ಅವಕಾಶ ಕೊಡಲಾಗಿದೆ. ಒಟ್ಟು 43 ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಇರುವವರು ಕೆಲಸಕ್ಕೆ ಅಪ್ಲೈ ಮಾಡಬಹುದು. ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ, ವಯೋಮಿತಿ, ಕೆಲಸದ ಮಾನದಂಡಗಳು ಈ ಎಲ್ಲವನ್ನೂ ತಿಳಿಸಿಕೊಡುತ್ತೇವೆ, ಕೊನೆಯ ದಿನಾಂಕ ಮುಗಿಯುವ ಮೊದಲು ಕೆಲಸಕ್ಕೆ ಅಪ್ಲೈ ಮಾಡಿ..
Govt peon jobs in karnataka 2023
ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ವಿದ್ಯಾರ್ಹತೆ ಬಗ್ಗೆ ನೋಡುವುದಾದರೆ, ಕೆಲಸಕ್ಕೆ ಅಪ್ಲೈ ಮಾಡಲು 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸೇವಕ ಹುದ್ದೆಗಳಿಗೂ ಸಹ SSLC ಆಗಿದ್ದರೆ ಸಾಕು, ಕನ್ನಡ ಭಾಷೆ ಓದಲು ಬರೆಯಲು ಚೆನ್ನಾಗಿ ಬರಬೇಕು. ಇನ್ನು ವಯೋಮಿತಿ ಬಗ್ಗೆ ಹೇಳುವುದಾದರೆ, ಕೆಲಸಕ್ಕೆ ಅಪ್ಲೈ ಮಾಡುವವರಿಗೆ ಕನಿಷ್ಠ 18 ವರ್ಷ ಆಗಿರಬೇಕು. ಹಾಗೆಯೇ 35 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ ಇದ್ದು, ಹಿಂದುಳಿದ ವರ್ಗದವರಿಗೆ 38 ವರ್ಷಗಳ ವರೆಗು ವಯೋಮಿತಿ ಇದೆ, SC/ST ಮತ್ತು ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷದವರೆಗು ವಯೋಮಿತಿ ನಿಗದಿ ಪಡಿಸಲಾಗಿದೆ.
ಈ ಕೆಲಸಕ್ಕೆ ಕೊಡಬಹುದಾದ ತಿಂಹಳ ವೇತನದ ಬಗ್ಗೆ ಹೇಳುವುದಾದರೆ, ಆದೇಶ ಜಾರಿಕರಿಗೆ 19,950 ಇಂದ 37,900 ವರೆಗು ಇರುತ್ತದೆ..ಸೇವಕರಿಗೆ 17,000 ಇಂದ 28,950 ರೂಪಾಯಿವರೆಗು ಇರುತ್ತದೆ. ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಇದ್ದು, ಜೆನೆರಲ್ ಕ್ಯಾಟಗರಿ ಅಭ್ಯರ್ಥಿಗಳು 200 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. SC/ST/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಕೆಲಸದ ಆಯ್ಕೆ ವಿಧಾನದ ಬಗ್ಗೆ ಹೇಳುವುದಾದರೆ, ಆದೇಶ ಜಾರಿಕರ ಹುದ್ದೆಗೆ ಅರ್ಹತಾ ಪರೀಕ್ಷೆ ಇರಲಿದ್ದು, ಅದರಲ್ಲಿ ಆಯ್ಕೆಯಾದರೆ 1:25 ಅನುಪಾತದಲ್ಲಿ ಇಂಟರ್ವ್ಯೂಗೆ ಕರೆಯಲಾಗುತ್ತದೆ..ಅರ್ಹತೆ ಪರೀಕ್ಷೆಯಲ್ಲಿ ಗಳಿಸಿದ ಮಾರ್ಕ್ಸ್, ವಿದ್ಯಾರ್ಹತೆ ಎರಡರ ಆಧಾರದ ಮೇಲೆ ಮತ್ತು ಇಂಟರ್ವ್ಯೂನಲ್ಲಿ ಗಳಿಸಿದ ಅಂಕದ ಮೇಲೆ ಆಯ್ಕೆ ಮಾಡಲಾಗುತ್ತಿದೆ.
ಸೇವಕ ಹುದ್ದೆಯ ಬಗ್ಗೆ ಹೇಳುವುದಾದರೆ, 10ನೇ ತರಗತಿ ಪಾಸ್ ಆದವರನ್ನು 1:10 ಅನುಪಾತದಲ್ಲಿ ಇಂಟರ್ವ್ಯೂಗೆ ಕರೆಯಲಾಗುತ್ತದೆ..ಇವರನ್ನು ಕೂಡ ಶೈಕ್ಷಣಿಕ ಅರ್ಹತೆ, ಅರ್ಹತೆ ಪರೀಕ್ಷೆಯಲ್ಲಿ ಗಳಿಸಿದ ಅಂಕ ಮತ್ತು ಇಂಟರ್ವ್ಯ ಎಲ್ಲದರ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇಂಟರ್ವ್ಯೂ 10 ಮಾರ್ಕ್ಸ್ ಗೆ ನಡೆಯುತ್ತದೆ. ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಮೊಬೈಲ್ ನಲ್ಲೇ ಸುಲಭವಾಗಿ ಚೆಕ್ ಮಾಡಿ ತಿಳಿದುಕೊಳ್ಳಿ