ವಾಹನ ಚಲಾಯಿಸಲು ಪ್ರತಿಯೊಬ್ಬರಿಗೂ ಸರ್ಕಾರದಿಂದ ಪರವಾನಗಿ ಪಡೆಯಲೇ ಬೇಕಾಗುತ್ತದೆ. ಅದಕ್ಕೆ ಆರ್ ಟಿ ಒ ಎಂಬ ಇಲಾಖೆಯಿಂದ ವಾಹನ ಚಲಾಯಿಸಲು ಪರವಾನಾಗಿ ನೀಡಲಾಗುತ್ತದೆ. ಪರವಾನಾಗಿ ನೀಡುವ ಮೊದಲು ಆರ್ ಟಿ ಓ ಆಫೀಸರ್ ಗಳು ವಾಹನ ಚಲಾವಣೆ ಮಾಡುವುದನ್ನು ಪರಿಚಿಲಿಸಿ ಪರವಾನಗಿಯನ್ನು ನೀಡುತ್ತಾರೆ. ಆದರೆ ಈಗಿನ ಹೊಸ ನಿಯಮದ ಪ್ರಕಾರ ಆರ್ ಟಿ ಓ ದಲ್ಲಿ ಪರೀಕ್ಷೆಯಿಲ್ಲದೆ ವಾಹನ ಪರವಾನಗಿಯನ್ನು ಪಡೆಯ ಬಹುದಾಗಿದೆ. ಆದ್ದರಿಂದ ನಾವಿಲ್ಲಿ ಅದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವಾಹನ ಚಲಾವಣೆ ಮಾಡಲು ಇಚ್ಚಿಸುವ ಪ್ರತಿಯೊಬ್ಬರಿಗೂ ವಾಹನ ಲೈಸೆನ್ಸ್ ಬೇಕಾಗುತ್ತದೆ. ಇದಕ್ಕಾಗಿ ಆರ್ ಟಿ ಓ ಗೆ ಹೋಗಿ ವಾಹನ ಚಾಲನೆಯ ಪರವಾನಗಿಯನ್ನು ಪಡೆಯಲು ಪರೀಕ್ಷೆ ಇಲ್ಲದೆ ಪಡೆಯಬಹುದಾಗಿದೆ. ಇದಕ್ಕಾಗಿ ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿಯನ್ನು ಪಡೆಯಬೇಕಾಗುತ್ತದೆ. ಅದಾದ ನಂತರ ಕೇಂದ್ರ ಸರ್ಕಾರದಿಂದ ಪ್ರಮಾಣ ಪತ್ರ ದೊರಕುತ್ತದೆ. ಈ ಪ್ರಮಾಣ ಪತ್ರವನ್ನು ಚಾಲನಾ ಪರವಾನಗಿಯನ್ನು ಪಡೆದುಕೊಳ್ಳುವಾಗ ತೋರಿಸಿದರೆ ಆರ್ ಟಿ ಓ ದಲ್ಲಿ ಪರೀಕ್ಷೆ ಇಲ್ಲದೆ ಚಲಾವಣಾ ಪರವಾನಗಿ ದೊರಕುತ್ತದೆ.
1 ಜುಲೈ 2021 ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ರಸ್ತೆ ಸಾರಿಗೆ ಸಚಿವಾಲಯದಿಂದ ಚಾಲನ ಪರೀಕ್ಷಾ ಕೇಂದ್ರಗಳು ಜುಲೈ 1 ನೇ ತಾರೀಕಿನಿಂದ ಆರಂಭವಾವಾಗಿದೆ. ರಸ್ತೆ ಸಾರಿಗೆ ಸಚಿವಾಲಯ ಈ ಬಗ್ಗೆ ಆದೇಶವನ್ನು ಸಹ ಹೊರಡಿಸಿದೆ. ಪ್ರತಿ ವರ್ಷ ದೇಶದಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿರುತ್ತವೆ. ಆದರೆ ಇದಕ್ಕೆಲ್ಲ ಕಾರಣ ಅನುಭವಿತ ಡ್ರೈವಿಂಗ್ ಕೊರತೆಯಾಗಿದೆ. ಸುಮಾರು 22 ಲಕ್ಷ ಚಾಲಕರ ಕೊರತೆ ಕಾಣಿಸುತ್ತಿದ್ದೂ ಅದನ್ನು ನಿವಾರಿಸಲು ಮತ್ತು ರಸ್ತೆ ಅಪಘಾತವನ್ನು ಕಡಿಮೆ ಮಾಡಲು ಚಾಲನ ಪರೀಕ್ಷಾ ಕೇಂದ್ರವನ್ನು ತೆರೆಯಲು ಅನುಮತಿ ನೀಡಿದೆ.
ಸಚಿವಾಲಯದ ಮಾನದಂಡಕ್ಕೆ ಅನುಗುಣವಾಗಿ ಯಾರು ಬೇಕಾದರೂ ಹೊಸದಾಗಿ ಚಾಲನಾ ಪರೀಕ್ಷಾ ಕೇಂದ್ರವನ್ನು ತೆರೆಯಬಹುದಾಗಿದೆ. ಜೊತೆಗೆ ಜನರಿಗೆ ತರಬೇತಿಯನ್ನು ಸಹ ನೀಡಬಹುದಾಗಿದೆ. ನಂತರ ಪರೀಕ್ಷೆ ನೆಡೆಸಿ ಅದರಲ್ಲಿ ಪಾಸ್ ಆದವರಿಗೆ ಕೇಂದ್ರದಿಂದ ಪ್ರಮಾಣ ಪತ್ರ ಸಿಗುತ್ತದೆ. ಅದರ ಆದರದ ಮೇಲೆ ಚಾಲನ ಪರವಾನಗಿಯನ್ನು ನೀಡಲಾಗುತ್ತದೆ. ಹೊಸದಾಗಿ ಚಾಲನ ತರಬೇತಿಯನ್ನು ಆರಂಭಿಸಲು ಕೆಲವು ಸರ್ಕಾರದ ನಿಯಮ ಗಳನ್ನು ಅನುಸರಿಸಿ ಆರಂಭಿಸಬೇಕು. ಸರ್ಕಾರದ ಈ ಹೊಸ ನಿಯಮದ ಪ್ರಕಾರ ಆರ್ ಟಿ ಓ ಅವರಿಂದ ಚಾಲನಾ ಪರೀಕ್ಷೆಯಿಲ್ಲದೆ ಪರವಾನಾಗಿಯನ್ನು ಪಡೆಯಬಹುದಾಗಿದೆ.