Govt New rules For Govt jobs: ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಆಸೆ ಇರುತ್ತದೆ. ಆದರೆ ಸರ್ಕಾರಿ ಕೆಲಸ ಸಿಗುವುದು ಅಷ್ಟು ಸುಲಭದ ವಿಷಯವಲ್ಲ. ಸರ್ಕಾರಿ ಕೆಲಸ ಸಿಗಬೇಕು ಎಂದರೆ, ಪರೀಕ್ಷೆಗಳನ್ನು ಬರೆಯಬೇಕು, ಉತ್ತಮ ಅಂಕ ಗಳಿಸಬೇಕು ಹೀಗೆ ದೊಡ್ಡ ಪ್ರಕ್ರಿಯೆ ಇರುತ್ತದೆ. ಬಹಳಷ್ಟು ಜನ ಪರೀಕ್ಷೆ ಬರೆಯಲು ಅಪ್ಲೈ ಕೂಡ ಮಾಡುತ್ತಾರೆ. ಆದರೆ ಇನ್ನುಮುಂದೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುವವಸರಿಗೆ ಇದೀಗ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ.
ಈ ಒಂದು ವಿದ್ಯಾರ್ಹತೆ ಇಲ್ಲದೆ ಹೋದರೆ, ಯಾರು ಕೂಡ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ ಆಗುವುದಿಲ್ಲ. ಸರ್ಕಾರದ ಪ್ರತಿ ಹುದ್ದೆಗೆ ಅದರದ್ದೇ ಆದ ಅರ್ಹತೆ, ಮಾನದಂಡ ಇರುತ್ತದೆ. ಅವುಗಳನ್ನು ಪಾಲಿಸಿಲ್ಲ ಎಂದರೆ, ನಿಯಮಗಳನ್ನು ಅನುಸರಿಸದೆ ಅಪ್ಲೈ ಮಾಡಿದರೆ ಅಂಥ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಅದಕ್ಕೆ ತಕ್ಕ ಹಾಗೆ ಈಗ ಸರ್ಕಾರವು ಹೊಸ ನಿಯಮವನ್ನ ಜಾರಿಗೆ ತಂದಿದೆ.
Govt New rules For Govt jobs
ಒಂದು ವೇಳೆ ನೀವು ಕೂಡ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಪಡುತ್ತಿದ್ದರೆ ಇದು ನಿಮಗೆ ಉಪಯೋಗ ನೀಡುವಂಥ ಮಾಹಿತಿ ಆಗಿದೆ. ಹೊಸ ನಿಯಮದ ಅನುಸಾರ ಈ ಒಂದು ದಾಖಲೆ ನಿಮ್ಮ ಬಳಿ ಇರಬೇಕು. ಇಲ್ಲದಿದ್ದರೆ ನಿಮ್ಮ ಅರ್ಜಿಯನ್ನು ರಿಜೆಕ್ಟ್ ಮಾಡುವುದು ಖಂಡಿತ ಆಗಿರುತ್ತದೆ. ಅದು ಯಾವ ದಾಖಲೆ ಎಂದರೆ 10ನೇ ತರಗತಿ ಮಾರ್ಕ್ಸ್ ಕಾರ್ಡ್. ಹೌದು, ಇನ್ನುಮುಂದೆ ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡಲು 10ನೇ ತರಗತಿ ಮಾರ್ಕ್ಸ್ ಕಾರ್ಡ್ ಇರಲೇಬೇಕು.
ಕನಿಷ್ಠ 10ನೇ ತರಗತಿ ಪಾಸ್ ಮಾಡಿರುವವರಿಗೆ ಮಾತ್ರ ಸರ್ಕಾರಿ ಉದ್ಯೋಗ ಪಡೆಯುವ ಅರ್ಹತೆ ಇರುತ್ತದೆ, ಇದು ಸರ್ಕಾರದ ಹೊಸ ನಿಯಮ ಆಗಿದೆ. ಇನ್ನುಮುಂದೆ ಜವಾನ್ ಸೇರಿದಂತೆ ಇನ್ನಿತರ ಗ್ರೂಪ್ ಡಿ ಹುದ್ದೆಗಳಿಗೆ ಕೂಡ 10ನೇ ತರಗತಿ ಪಾಸ್ ಆಗಿರುವುದನ್ನು ಕಡ್ಡಾಯಗೊಳಿಸಿದೆ. 1978ರ ಸಿವಿಲ್ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದ್ದು, ಜುಲೈ 1ರಿಂದ ಈ ನಿಯಮ ಜಾರಿಗೆ ಬಂದಿದೆ. ಇನ್ನುಮುಂದೆ 10ನೇ ತರಗತಿ ಮಾರ್ಕ್ಸ್ ಕಾರ್ಡ್ ಕಡ್ಡಾಯ ಆಗಿರುತ್ತದೆ.