Govt Jobs Karnataka 2023: 10ನೇ ತರಗತಿ ಓದಿ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿರುವವರಿಗೆ ಇದೀಗ ಕೇಂದ್ರ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕಿದೆ. 10ನೇ ತರಗತಿ ಪಾಸ್ ಆಗಿರುವವರಿಗೆ ಹುದ್ದೆಗಳು ಖಾಲಿ ಇದ್ದು, ಕೇಂದ್ರ ಸರ್ಕಾರದ ಕೆಲಸ ಸಿಕ್ಕಿದೆ ಎಂದರೆ ಜೀವನವೇ ಸೆಟ್ಲ್ ಆದ ಹಾಗೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಇಂದು ಕೊನೆಯ ದಿನಾಂಕ ಆಗಿದ್ದು, ತಕ್ಷಣವೇ ಅರ್ಜಿ ಸಲ್ಲಿಸಿ ನೀವು ಕೆಲಸ ಪಡೆದುಕೊಳ್ಳಬಹುದು.

ಹುದ್ದೆಯ ಬಗ್ಗೆ ಹೇಳುವುದಾದರೆ, ಇಂಡೋ ಟಿಬೆಟಿಯನ್ ಪೊಲೀಸ್ ಪಡೆಯಲ್ಲಿ ಈಗ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. 2048 ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲಾಗುತ್ತದೆ. ಈ ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ , ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಇಂದ 10ನೇ ತರಗತಿ ಪಾಸ್ ಮಾಡಿದ್ದರೆ ಸಾಕು, ಈ ಕೆಲಸಕ್ಕೆ ನೀವು ಅರ್ಜಿ ಸಲ್ಲಿಸಬಹುದು.

ಇನ್ನು ಕೆಲಸಕ್ಕೆ ಅಗತ್ಯ ಇರುವ ವಯೋಮಿತಿ ಬಗ್ಗೆ ಹೇಳುವುದಾದರೆ, 18 ರಿಂದ 23 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ವಿಭಾಗೀಯ ವಿದ್ಯಾರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸುವುದಕ್ಕೆ ಶುಲ್ಕ ಪಾವತಿ ಮಾಡಬೇಕಿದ್ದ, ಎಸ್ಸಿ ಎಸ್ಟಿ ಮತ್ತು ಮಹಿಳೆಹರಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಇನ್ನುಳಿದ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.

ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ 21,700 ಇಂದ 69,100 ರೂಪಾಯಿಗಳವರೆಗು ತಿಂಗಳ ವೇತನ ಸಿಗುತ್ತದೆ. ದೇಶದ ಯಾವುದೇ ಊರಿನಲ್ಲಿ ಪೋಸ್ಟಿಂಗ್ ಸಿಗಬಹುದು. ಆಯ್ಕೆ ಪ್ರಕ್ರಿಯೆ ನೋಡುವುದಾದರೆ, ಮೊದಲಿಗೆ ಫಿಸಿಕಲ್ ಟೆಸ್ಟ್ ಇರುತ್ತದೆ. ನಂತರ ದಾಖಲಾತಿ ಪರೀಕ್ಷೆ ಇರುತ್ತದೆ. ಬಳಿಕ ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಕೂಡ ಇರುತ್ತದೆ. ಆಸಕ್ತಿ ಇರುವವರು ಇಂದೇ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿ ಪಡೆಯಲು 011-24369482 ಅಥವಾ 24369483 ಈ ನಂಬರ್ ಗೆ ಕರೆಮಾಡಿ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!