ರಾಜ್ಯ ಸರ್ಕಾರ ಈಗಾಗಲೇ ಎಷ್ಟೋ ಯೋಜನೆಗಳನ್ನು ಜಾರಿ ಮಾಡಿದೆ. ಎಲ್ಲಾ ಅನುಕೂಲ ಇದ್ದರೆ ಅವರು ಸ್ವಂತ ಮನೆ ನಿರ್ಮಾಣ ಮಾಡಿಕೊಂಡು ಇರುವರು. ಆದ್ರೆ ನಿರಾಶ್ರಿತ ಕುಟುಂಬಗಳಿಗೆ ಮನೆ ಮಂಜೂರು ಮಾಡುವ ಕೆಲಸ ಆರಂಭವಾಗಿದೆ. ಉಚಿತ ಮನೆಗೆ ಅರ್ಜಿ ಸಲ್ಲಿಸಲು ಆಸಕ್ತರಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಮನೆ ಇಲ್ಲದ ನಿರಾಶ್ರಿತ ಜನರಿಗೆ ರಾಜ್ಯ ಸರ್ಕಾರ ಶುಭಸುದ್ದಿ ಕೊಟ್ಟಿದೆ. ರಾಜ್ಯದಲ್ಲಿ ವಸತಿ ರಹಿತ ಕುಟುಂಬಗಳು ಹೆಚ್ಚಾಗಿ ಇವೆ. ಅವರು ಆರ್ಥಿಕವಾಗಿ ಹಿಂದುಳಿದ ವರ್ಗಗಳಳಾಗಿ ಇರುತ್ತಾರೆ. ಇಂತಹ, ಕುಟುಂಬಗಳಿಗೆ ರಾಜ್ಯ ಸರ್ಕಾರ ಉಚಿತ ವಸತಿ ಸೇವೆಯನ್ನು ಕಲ್ಪಿಸಿಕೊಡಲು ಮುಂದಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆಯ ಕೆಳಗೆ ವಸತಿ ರಹಿತ ಸಂಸಾರಗಳಿಗೆ ಉಚಿತವಾಗಿ ಮನೆ ನಿರ್ಮಾಣ ಮಾಡಲು ಸಹಾಯಧನವನ್ನು ಸರ್ಕಾರ ನೀಡಲಿದ್ದು, ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನ ಇದರ ಲಾಭವನ್ನು ಪಡೆಯಬಹುದಾಗಿದೆ.
ರಾಜೀವ್ ಗಾಂಧಿ ವಸತಿ ಯೋಜನೆಯ ಅರ್ಹತೆಗಳು :– ಈ ಯೋಜನೆಯ ಕೆಳಗೆ ಯಾವ ಕುಟುಂಬದ ಆದಾಯ ₹32,000 ಕ್ಕಿಂತ ಕಡಿಮೆ ಇದ್ದು, ಯಾರಿಗೆ ಮನೆ ಇರುವುದಿಲ್ಲವೋ ಅಂದರೆ ವಸತಿ ರಹಿತ ಮತ್ತು ಕುಟುಂಬದಲ್ಲಿ ಬಡತನ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ರಾಜ್ಯ ಸರ್ಕಾರ ಅವರ ಮನೆಯನ್ನು ನಿರ್ಮಾಣ ಮಾಡಿಕೊಡಲು ಸಹಾಯಧನವನ್ನು ವಿತರಣೆ ಮಾಡುತ್ತದೆ.
ಈ ಯೋಜನೆಯ ಮುಖಾಂತರ ಯಾರಿಗೆ ಮನೆಯನ್ನು ಪಡೆದುಕೊಳ್ಳಬೇಕು ಎನ್ನುವ ಆಸಕ್ತಿ ಇರುತ್ತದೋ ಅಂತವರು ಇಂದೇ ಅರ್ಜಿ ಸಲ್ಲಿಸಬಹುದು. ರಾಜೀವ್ ಗಾಂಧಿ ವಸತಿ ಯೋಜನೆಯ ಕೆಳಗೆ ಯಾವ ರೀತಿ ಮನೆಯನ್ನು ಹೇಗೆ ಪಡೆಯಬೇಕು ಎನ್ನುವುದನ್ನು ಕೆಳಗಡೆ ವಿವರಿಸಲಾಗಿದೆ;
ಅರ್ಜಿ ಸಲ್ಲಿಕೆ ಮಾಡುವ ವಿಧಾನ :ಕೆಳಗೆ ನೀಡಿರುವ ಅಧಿಕ್ಕೃತ ಪೋರ್ಟಲ್’ಗೆ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಭೇಟಿ ನೀಡಿ https://ashraya.karnataka.gov.in/index.ಅಸ್ಪ್ಸ್ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿಯ ಆಯ್ಕೆಯನ್ನು ಮಾಡಿದ ನಂತರ, ಆರ್‌ಡಿ ಸಂಖ್ಯೆ ( RD Number ) ಮತ್ತು ಇನ್ನು ಇತರೆ ಅಲ್ಲಿ, ಕೇಳುವ ದಾಖಲೆಗಳನ್ನು ಮತ್ತು ಅವುಗಳ ವಿವರವನ್ನು ನಮೂದಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಈ ಮೇಲೆ ಕೊಟ್ಟಿರುವ ಪೋರ್ಟಲ್’ಗೆ ಭೇಟಿ ನೀಡುವುದರ ಮೂಲಕ ನೀವು ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು, ನೀವು ಅರ್ಜಿ ಸಲ್ಲಿಕೆ ಮಾಡಿದ್ದರೆ ಮತ್ತು ನಿಮ್ಮ ದಾಖಲೆಗಳು ಪರಿಶೀಲನೆಗೆ ಸೂಕ್ತವಾಗಿ ಇದ್ದರೆ ನಿಮಗೆ ಮನೆಯನ್ನು ಮಂಜೂರು ಮಾಡಲಾಗುತ್ತದೆ. ವಸತಿ ರಹಿತ ಕುಟುಂಬದವರು ಅರ್ಹ ಫಲಾನುಭವಿಗಳಾಗಿದ್ದು, ಸೂರು ಪಡೆದುಕೊಳ್ಳಲು ಇಂದೇ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಬಹುದು.