ಪ್ರತಿಯೊಬ್ಬ ಮನುಷ್ಯನ ಜೀವನಕ್ಕೂ ಮನೆ ಎನ್ನುವುದು ಒಂದು ವಾಸಸ್ಥಳದ ರೂಪವಾಗಿ ಬೇಕೇ ಬೇಕು. ಅನುಕೂಲ ಇರುವವರು ತಮಗೆ ಬೇಕಾದಂತೆ ಹೊಸ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಹಾಗೆಯೇ ಅನುಕೂಲ ಇಲ್ಲದವರು ತಮ್ಮ ಕೈಯಲ್ಲಿ ಆದ ಮಟ್ಟಿಗೆ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಹಾಗೆಯೇ ಸಾಲಗಳನ್ನು ಮಾಡಿ ಹಲವಾರು ವರ್ಷಗಳ ನಂತರ ತೀರಿಸುತ್ತಾರೆ. ಆದ್ದರಿಂದ ಇಂತಹವರಿಗೆ ಸೌಲಭ್ಯ ಒದಗಿಸಲು ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಬೆಂಗಳೂರು ನಿವಾಸಿಗಳಿಗೆ ರಾಜ್ಯ ಸರ್ಕಾರ ಒಂದು ಸಿಹಿಸುದ್ದಿಯನ್ನು ನೀಡಿದೆ. ರಾಜ್ಯಸರ್ಕಾರ ಬೆಂಗಳೂರು ವಸತಿಯೋಜನೆಯನ್ನು ಆರಂಭಿಸಿದೆ. ಬೆಂಗಳೂರು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಮಾಡಬೇಕು ಎಂದು ಕನಸು ಇರುತ್ತದೆ. ಹಾಗಾಗಿ ಇದಕ್ಕೆ ಒಂದು ಸದಾವಕಾಶವನ್ನು ಬೆಂಗಳೂರಿನ ಜನರಿಗೆ ನೀಡಲಾಗುತ್ತಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಗೆ ಸ್ವಂತ ಮನೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹಾಗೆಯೇ ಅರ್ಜಿ ಸಲ್ಲಿಸುವವರ ಆದಾಯ 3ಲಕ್ಷ ಹಣವನ್ನು ಮೀರಿರಬಾರದು. 5ವರ್ಷಗಳ ಕಾಲ ಬೆಂಗಳೂರು ನಗರ ಅಥವಾ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸ ಮಾಡಿರಬೇಕಾಗುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಎಲ್ಲಿಯೂ ಸ್ವಂತ ಮನೆಯನ್ನು ಹೊಂದಿರಬಾರದು. ಇದಕ್ಕೆ ಕೆಲವು ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಇದಕ್ಕೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಬಿ.ಪಿ.ಎಲ್. ರೇಷನ್ ಕಾರ್ಡ್ ಅಥವಾ ಎ. ಪಿ.ಎಲ್. ರೇಷನ್ ಕಾರ್ಡ್ ನ್ನು ಹೊಂದಿರಬೇಕು.
ಹಾಗೆಯೇ ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಚಲಾವಣೆಯಲ್ಲಿ ಇರುವ ಬ್ಯಾಂಕ್ ಪಾಸ್ಬುಕ್ ಇರಬೇಕು. 100ರೂಪಾಯಿ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ತುಂಬಬೇಕು. ಬೆಂಗಳೂರು ಒನ್ ಕೇಂದ್ರಗಳು ಮತ್ತು ಬೆಂಗಳೂರು ಬೃಹತ್ ನಗರ ಪಾಲಿಕೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ಸೈಬರ್ ನಲ್ಲಿ ಅಥವಾ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದೇ ತಿಂಗಳು ಏಪ್ರಿಲ್31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸುಮಾರು 10ಲಕ್ಷ ಮನೆಗೆ ಬಿದ್ದರೆ 2ಲಕ್ಷ ಹಣವನ್ನು ಸರ್ಕಾರ ಭರಿಸುತ್ತದೆ. WWW. Ashtraya.Karnataka.gov.in ಈ ವೆಬ್ಸೈಟ್ ನಲ್ಲಿ ಮಾಹಿತಿ ತಿಳಿಯುತ್ತದೆ.