Government of Karnataka ಕರ್ನಾಟಕ ಸರ್ಕಾರದಿಂದ ಅನೇಕ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ನೇಮಕಾತಿ (recruitment) ಅಧಿಸೂಚನೆಗಳನ್ನು ಹೊರಡಿಸಿದೆ. (Municipal Commissioner) ಮುನ್ಸಿಪಲ್ ಕಮಿಷನರ್-11, ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ- 59, ನಾಯಬ್ ತಹಶೀಲ್ದಾರ್ -98, ಸಬ್ ರಿಜಿಸ್ಟರ್ ಗ್ರೇಡ್ 2 -14, ಸಹಾಯಕ ರಿಜಿಸ್ಟರ್- 63, ಸಹಾಯಕ ಕಾರ್ಮಿಕ ಅಧಿಕಾರಿ -9, ಮಂಡಲ ಪಂಚಾಯತ್ ಅಧಿಕಾರಿ -120, ನಿಷೇಧ ಮತ್ತು ಅಬಕಾರಿ ಉಪನಿರೀಕ್ಷಕರು- 97, ಸಹಾಯಕ ಅಭಿವೃದ್ಧಿ ಅಧಿಕಾರಿ -38, ಸಾಮಾನ್ಯ ಆಡಳಿತ ಇಲಾಖೆಯ ಸಹಾಯಕ ಅಧಿಕಾರಿ -165 ಇವುಗಳಲ್ಲಿ ಬೇಕಾದ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Government of Karnataka

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ಆಗಿರಬೇಕು ಹಾಗೆ ಗರಿಷ್ಠ ವಯಸ್ಸು 44 ಆಗಿರುತ್ತದೆ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳವರೆಗೆ ಸಡಿಲಿಕೆ ಇರಲಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನದ ಶ್ರೇಣಿ ಹೇಗಿರುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ ಮುನ್ಸಿಪಲ್ ಕಮಿಷನರ್ ಗ್ರೇಡ್ 3 ಹುದ್ದೆಗಳಿಗೆ ೪೩ ಸಾವಿರದಿಂದ ಪ್ರಾರಂಭವಾಗಿ ಒಂದು ಲಕ್ಷದ 18230 ನೀಡಲಾಗುತ್ತದೆ ಇನ್ನೂ ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ನಾಯಬ್ ಬತಹಶೀಲ್ದಾರ್ ಸಹಾಯಕ ರಿಜಿಸ್ಟರ್ (Assistant Register) ಸಬ್ ರಿಜಿಸ್ಟರ್ ಗ್ರೇಡ್ 2 ಇತ್ಯಾದಿ ಹುದ್ದೆಗಳಿಗೆ ಆರಂಭಿಕ ವೇತನ 42,000 ದಿಂದ 1,15, ವರೆಗಿನ ಮಾಸಿಕ ವೇತನ ಸಿಗಲಿದೆ ಇನ್ನು ಉಳಿದ ಹುದ್ದೆಗಳಿಗೆ 38 ಸಾವಿರದಿಂದ ಪ್ರಾರಂಭವಾಗಿ 1,12,000 ವರೆಗಿನ ಮಾಸಿಕ ವೇತನ ಸಿಗಲಿದೆ ಆಯ್ಕೆಯ ಪ್ರಕ್ರಿಯೆ ಲಿಖಿತ ಪರೀಕ್ಷೆಯ ಮೂಲಕ ನಡೆಯುತ್ತದೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ದಾಖಲಾತಿಗಳ ಪರಿಶೀಲನೆಯನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಪ್ರಕ್ರಿಯೆಯ ಮೂಲಕ ಅರ್ಜಿ ಶುಲ್ಕವು 200 ರೂಪಾಯಿ ಹಾಗೆ ಪರೀಕ್ಷಾ ಶುಲ್ಕ 120, Online ಆನ್ಲೈನ್ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ. www.tspsc.gov.in ಈ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸಲು ಆರಂಭದ ದಿನಾಂಕ ಇದೇ ಜನವರಿ 18 ರಿಂದ ಪ್ರಾರಂಭವಾಗಿ ಫೆಬ್ರವರಿ 16 2023 ಕ್ಕೆ ಕೊನೆಗೊಳ್ಳುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿ ಗಳೆಂದರೆ ನಿಮ್ಮ ಫೋಟೋ ಕಾಪಿ ಹಾಗೂ ಸಹಿ ಮತ್ತು ಇ-ಮೇಲ್ ಐಡಿ ಅಥವಾ ಮೊಬೈಲ್ ನಂಬರ್ ನಿವಾಸದ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಶಿಕ್ಷಣದ ಪ್ರಮಾಣ ಪತ್ರಗಳು ಅಂದರೆ ಕನ್ನಡ ಮಾಧ್ಯಮ ಅಥವಾ ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಗಳು ಮುಂತಾದ ದಾಖಲೆಗಳನ್ನು ನೀಡಬೇಕಾಗುತ್ತದೆ.

ಇನ್ನು ಶೈಕ್ಷಣಿಕ ಅರ್ಹತೆ ನೋಡುವುದಾದರೆ ಸಹಾಯಕ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಪದವಿ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು ಜಿಲ್ಲಾ ಪ್ರವೇಶನ ಅಧಿಕಾರಿ 2 ಅಭ್ಯರ್ಥಿಗಳು ಸಮಾಜ ಕಾರ್ಯದಲ್ಲಿ ಪದವಿ ಅಥವಾ ಮನಶಾಸ್ತ್ರದಲ್ಲಿ ಎಂಎ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾನಿಲಯದಿಂದ ತತ್ಸಮಾನ ಪದವಿ ಪಡೆದಿರಬೇಕು.

ಇದನೊಮ್ಮೆ ಓದಿ..KEB ವಿದ್ಯುತ್ ಇಲಾಖೆಯಲ್ಲಿ ಲೈನ್ ಮ್ಯಾನ್ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿಹಾಕಿ

ಕಾನೂನು (Legal Department) ಇಲಾಖೆಯಲ್ಲಿ ಸಹಾಯಕ ವಿಭಾಗ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನು ಎಲ್ ಎಲ್ ಬಿ ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯ ನಿಲಯದಿಂದ ತತ್ಸಮಾನ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಇನ್ನುಳಿದ ಹುದ್ದೆಗಳಿಗೆ ಸಂಬಂಧಪಟ್ಟಂತೆ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಒಟ್ಟಾರೆಯಾಗಿ ಈ ಅವಕಾಶವೂ ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಹೊಂದಿದವರಿಗೆ ಉತ್ತಮ ಅವಕಾಶವಾಗಿರಲಿದೆ.

By

Leave a Reply

Your email address will not be published. Required fields are marked *