Goverment of Karnataka jobs: ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಿಂದ ಉದ್ಯೋಗಕ್ಕೆ ಆಹ್ವಾನ ಬಂದಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬನ್ನಿ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ. ಸಿಪಿಸಿಆರ್ ಐ ಮೂಲಕ ಈ ಹುದ್ದೆಗಳ ಭರ್ತಿಗೆ ಆಹ್ವಾನವನ್ನು ನೀಡಲಾಗಿದೆ. ಐದು ಹುದ್ದೆಗಳ ಅವಕಾಶ ಇಲ್ಲಿ ನೀಡಲಾಗಿದ್ದು (Dakshina Kannada) ದಕ್ಷಿಣ ಕನ್ನಡದಲ್ಲಿ (Job place) ಉದ್ಯೋಗ ಸ್ಥಳವನ್ನು ಉಲ್ಲೇಖಿಸಲಾಗಿದೆ. ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಮೊದಲ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಬಹುದಾಗಿದೆ.

ಇನ್ನು ಹುದ್ದೆಯ ಹೆಸರು ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿದ್ದು ತಿಂಗಳಿಗೆ 15 ರಿಂದ 30 ಸಾವಿರ ರೂಪಾಯಿ ಸಂಬಳ ಸಿಗಲಿದೆ. ಇನ್ನು ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯ ವಾದಂತಹ ಯಾವುದೇ ವಿದ್ಯಾ ಸಂಸ್ಥೆಯಿಂದ ಹತ್ತನೇ ತರಗತಿ ಪಾಸ್ ಆದವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಸಿಪಿಸಿಆರ್ ಐ ನ ಅಧಿನಿಯಮದ ಪ್ರಕಾರ ವಯಸ್ಸಿನ ಮಿತಿ ಕನಿಷ್ಠ 18ರಿಂದ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು.

ಆಯ್ಕೆ ಪ್ರಕ್ರಿಯೆಯನ್ನು ಪ್ರಾಯೋಗಿಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನಡೆಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು. ಅಲ್ಲಿ ಕೇಳಿರುವಂತಹ ಎಲ್ಲಾ ದಾಖಲೆಗಳಿಗೆ ಸರಿಯಾದ ಉತ್ತರವನ್ನು ಭರ್ತಿ ಮಾಡಬೇಕು. ಅಲ್ಲಿ ಆಯ್ಕೆಯಾದರೆ ನಿಮಗೆ ಅಲ್ಲಿಗೆ ಹೋಗಿ ಇಂಟರ್ವ್ಯೂನಲ್ಲಿ ಭಾಗವಹಿಸಬೇಕಾಗುತ್ತದೆ. ಜನವರಿ 25 ಅಲ್ಲಿಗೆ ವಾಕಿ ಇನ್ ಇಂಟರ್ವ್ಯೂಗೆ ಹೋಗಬೇಕಾದ ಕೊನೆಯ ದಿನಾಂಕ ಆಗಿರುತ್ತದೆ.

ಇದನ್ನೂ ಓದಿ..ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ ಹುದ್ದೆಗಳಿಗಾಗಿ ಅರ್ಜಿಕರೆಯಲಾಗಿದೆ ಆಸಕ್ತರು ಅರ್ಜಿಹಾಕಿ

ಅತ್ಯಂತ ಕಡಿಮೆ ವಿದ್ಯಾರ್ಹತೆಯಲ್ಲಿ ಸರಿಯಾದ ಸಂಬಳ ಸಿಗುವಂತಹ ಕೆಲಸ ಇದಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯ ಫಾರ್ಮ್ ಅನ್ನು ಫಿಲಪ್ ಮಾಡಿ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಪರಿಶೀಲಿಸಿ. ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡುವುದರ ಮೂಲಕ ಒಂದು ವೇಳೆ ಅವರು ಕೆಲಸವನ್ನು ಹುಡುಕುತ್ತಿದ್ದರೆ ಅವರಿಗೆ ಸಹಾಯ ಮಾಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!