ಇತ್ತೀಚಿನ ದಿನಗಲ್ಲಿ ಮೊಬೈಲ್ ಫೋನ್, ಲ್ಯಾಪ್ ಟಾಪ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ, ಆದ್ರೆ ಎಲ್ಲದಕ್ಕೂ ಗೂಗಲ್ ಅನ್ನೋದು ಮಾಹಿತಿಯ ಮುಖ್ಯ ತಾಣವಾಗಿದೆ. ಗೂಗಲ್ ಅನ್ನೋದು ನಮಗೆ ಒಳ್ಳೆಯದು ಹಾಗು ಕೆಟ್ಟದನ್ನು ಎರಡನ್ನು ಮಾಹಿತಿಯ ರೂಪದಲ್ಲಿ ಒದಗಿಸುತ್ತವೆ ಅದನ್ನು ನಾವುಗಳು ಹೇಗೆ ಬಳಸಿಕೊಳ್ಳುತ್ತೇವೋ ಹಾಗೆ ನಮಗೆ ಅನುಕೂಲವಾಗುತ್ತದೆ. ಜಗತ್ತಿನ ಹಲವು ವಿಚಾರಗಳನ್ನು ನಾವುಗಳು ಗೂಗಲ್ ಮೂಲಕ ತಿಳಿದುಕೊಳ್ಳಬಹುದು.
ಇನ್ನು ಗೂಗಲ್ ನಲ್ಲಿ ಇಂತಹ ಪದಗಳನ್ನು ಅಥವಾ ಇಂತಹ ವಿಚಾರಗಳ ಬಗ್ಗೆ ಸರ್ಚ್ ಮಾಡಿದ್ರೆ ಅದು ದೊಡ್ಡ ಅಪಾಯವಾಗಿ ನಿಮಗೆ ಕಾಡುತ್ತದೆ ಅದು ಯಾವ ವಿಚಾರ ಯಾಕೆ ಅಪಾಯ ಅನ್ನೋದನ್ನ ಮುಂದೆ ನೋಡಿ, ಸ್ನೇಹಿತರೆ ಗೂಗಲ್ ನಲ್ಲಿ ನಾವು ಹುಡುಕುವ ಪ್ರತಿಯೊಂದು ಪದ ಹಾಗೂ ಪ್ರಶ್ನೆಗಳು ರೆಕಾರ್ಡ್ ಆಗುತ್ತಾ ಹೋಗುತ್ತವೆ. ಕೆಲವರು ನಾವು ಹುಡುಕುವ ಪದಗಳು ಬೇರೆಯವರಿಗೆ ಗೊತ್ತಾಗಬಾರದು ಎಂದು ಮೊಬೈಲ್ ನಲ್ಲಿ ಇನ್ ಕಾಗ್ನಿಟಿವ್ ಆಪ್ ನ ಮೂಲಕ ಸರ್ಚ್ ಮಾಡುತ್ತಾರೆ, ಆದರೆ ನಾವು ಗೂಗಲ್ ನಲ್ಲಿ ಸರ್ಚ್ ಮಾಡುವ ಯಾವುದೇ ಪದವಾದರೂ ಅದು ರೆಕಾರ್ಡ್ ಆಗಿರುತ್ತದೆ.
ಯಾರೋ ಏನೋ ಕೇಳಿದ್ರು ಅಂತ ಮೊಬೈಲ್ ನಲ್ಲಿ ಏನೇನೋ ಸರ್ಚ್ ಮಾಡಿಬಿಡುತ್ತೇವೆ ಆದ್ರೆ ಇಂತಹ ವಿಹಚಾರಗಳನ್ನು ಸರ್ಚ್ ಮಾಡಲೇಬೇಡಿ ಯಾಕಂದ್ರೆ, ನಾವೇನಾದರೂ ಟೆರರಿಸಂ ಬಗ್ಗೆ ಅಥವಾ ಬಾಂಬ್ ತಯಾರಿಸುವುದರ ಬಗ್ಗೆ ಅಥವಾ ಅದಕ್ಕೆ ಸಂಬಂಧ ಪಟ್ಟ ಯಾವುದೊ ವಿಷಯದ ಬಗ್ಗೆ ಸರ್ಚ್ ಮಾಡಿದರೆ, ನಿಮ್ಮ ಸುತ್ತ ಮುತ್ತಲಿನಲ್ಲಿ ಏನಾದರು ಅವಘಡಗಳು ಸಂಭವಿಸಿದರೆ, ಪೊಲೀಸ್ ಇಲಾಖೆ ಗೂಗಲ್ ಸಹಾಯದ ಮೂಲಕ ಇನ್ವೆಸ್ಟಿಗೇಷನ್ ಶುರು ಮಾಡುತ್ತೆ.
ಆ ಸಮಯದಲ್ಲಿ ಯಾರೋ ಮಾಡಿದ ತಪ್ಪಿಗೆ ನಿಮಗೆ ಇನ್ವೆಸ್ಟಿಗೇಷನ್ ಅದು ಇದು ಅಂತ ನೀವೇ ತೊದಂರೆಗೆ ಒಳಗಾಗಬೇಕಾಗುತ್ತದೆ ಇಂತಹ ಪದಗಳನ್ನ ನಾವು ಹೆಚ್ಚಾಗಿ ಹುಡುಕುತಿದ್ದರೆ ಗುಪ್ತಚರ ಇಲಾಖೆ ನಮ್ಮ ಮೇಲೆ ಒಂದು ಕಣ್ಣಿಟ್ಟಿರುತ್ತೆ. ಅಗತ್ಯ ಬಿದ್ದರೆ ಅಂಥವರನ್ನ ಬಂಧಿಸಲು ಬಹುದು ಹಾಗಾಗಿ ಇಂತಹ ವಿಚಾರಗಳನ್ನು ಹುಡುಕದೆ ಇದ್ರೆ ಒಳ್ಳೆಯದು. ನಿಮ್ಮ ಸ್ನೇಹಿತರಿಗೂ ಇದನ್ನು ಹಂಚಿಕೊಳ್ಳಿ.