2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆಬೇಳೆಗಳನ್ನೊಳಗೊಂಡ ಆಹಾರವನ್ನು ಒದಗಿಸಲು ನಿರ್ಧರಿಸಿತ್ತು. ಸರಕಾರ ಪ್ರಾಯೋಜಿತ ಬಿಸಿಯೂಟ ಊಟ ಯೋಜನೆ ಸರಕಾರಿ, ಖಾಸಗಿ ಅನುದಾನಿತ ಶಾಲೆಗಳ ಮಕ್ಕಳಿಗೆ ನೀಡುವ ಮಧ್ಯಾಹ್ನದ ಭೋಜನ. ಶಾಲಾ ಮಕ್ಕಳು ಇದರಿಂದ ದಾಖಲಾತಿಯಲ್ಲಿ ಅಧಿಕಗೊಂಡಿರುವುದು ಸರಕಾರದ ಲೆಕ್ಕಾಚಾರದಲ್ಲಿ ಸದೃಢ ಆಧಾರಬದ್ಧ ಧೋರಣೆಯಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪೌಷ್ಟಿಕಾಂಶ ದೊರಕಿಸಿಕೊಡುವುದು ಮತ್ತು ಪ್ರಾಥಮಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿತ್ತು ಎನ್ನುವುದು ನಮಗೆಲ್ಲ ತಿಳಿದಿರುವ ವಿಷಯ. ಆದರೆ ಈಗ ಈ ಸಮಯದಲ್ಲಿ ಸುಮಾರು ೧೧.೮ ಕೋಟಿ ವಿದ್ಯಾರ್ಥಿಗಳಿಗೆ ಅವರವರ ಖಾತೆಗೆ ಹಣವನ್ನು ಜಮಾ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದು ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
2003ರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಿದರೆ ಒಳಿತಾಗುತ್ತದೆ ಎನ್ನುವ ನಿಲುವು ತಾಳಿ ಎಸ್.ಎಂ. ಕೃಷ್ಣರವರು ಬಿಸಿಯೂಟದಂತಹ ಭೋಜನ ಕಾರ್ಯಕ್ರಮದ ಆದೇಶ ಜಾರಿಗೆ ತರಲು ಕೇಂದ್ರ ಸರಕಾರದ ಅನುದಾನ ಪಡೆದು ಮತ್ತು ರಾಜ್ಯ ಸರಕಾರದ ಅನುದಾನದೊಂದಿಗೆ ಬಿಸಿಯೂಟವನ್ನು ಪ್ರಾರಂಭಿಸಿದರು. ಅದು ಕೇವಲ ಸರಕಾರಿ ಶಾಲೆಗಳ ಮಕ್ಕಳಿಗೆ ಮಾತ್ರ ಜಾರಿಗೆ ಇತ್ತು. ಸಮ್ಮಿಶ್ರ ಸರಕಾರವು ಆಡಳಿತದಲ್ಲಿ ಇದ್ದಾಗ ಅನುದಾನಿತ ಶಾಲೆಗಳಿಗೂ ವಿಸ್ತರಿಸಿದರು. ಈ ಮುಂಚೆ ಪ್ರಾಥಮಿಕ ಶಾಲೆಗಳಿಗೆ ನೀಡುತ್ತಿದ್ದ, ಬಿಸಿಯೂಟ ಪ್ರೌಢಶಾಲೆಗಳಿಗೂ ವಿಸ್ತರಿಸಲಾಗಿದೆ. ಕೇಂದ್ರ ಸರಕಾರದ ಅನುದಾನ ಪಡಿತರ ಆಗಿದ್ದು ರಾಜ್ಯ ಸರಕಾರದ ಅನುದಾನ ತರಕಾರಿ, ಇಂಧನ ಸಂಬಾರು ದಿನಸಿ ಖರ್ಚನ್ನು ಭರಿಸುತ್ತಿತ್ತು.
ಆದರೆ ಈಗ MDM ಎಂಬ ಯೋಜನೆಯ ಮೂಲಕ ಸರ್ಕಾರ ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿಯನ್ನು ನೀಡಿದೆ. ಸುಮಾರು ೧೧.೮ ಕೋಟಿ ವಿದ್ಯಾರ್ಥಿಗಳಿಗೆ ಅವರವರ ಖಾತೆಗೆ ಹಣವನ್ನು ಜಮಾ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. MDM ಯೋಜನೆ ಏನು? ಯಾವ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದ ಹಣವನ್ನು ಜಮಾ ಮಾಡಲಾಗುತ್ತದೆ ಎನ್ನುವುದನ್ನು ನೋಡುವುದಾದರೆ , MDM ಈ ಯೋಜನೆಯ ವಿಸ್ತೃತ ರೂಪ ನೋಡುವುದಾದರೆ , Midday Meal Scheme ಕನ್ನಡದಲ್ಲಿ ಮಧ್ಯಾಹ್ನದ ಊಟದ ಯೋಜನೆ ಎಂದರ್ಥ. ಈ ಯೋಜನೆಯ ಮೂಲಕ ಮಕ್ಕಳಿಗೆ ನೇರವಾಗಿ ಲಾಭವನ್ನು ಉಂಟುಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ. DBT ಮೂಲಕ ಮಕ್ಕಳ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡುವ ಮೂಲಕ ಆರ್ಥಿಕ ಮಟ್ಟವನ್ನು ಸುಧಾರಿಸುವುದಾಗಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಹೇಗೆ ಹಣವನ್ನು ನೀಡಲಾಗುತ್ತದೆ ಎಂದು ನೋಡುವುದಾದರೆ, ಮಧ್ಯಾಹ್ನದ ಊಟದ ಯೋಜನೆಯ ಎಲ್ಲಾ ಅರ್ಹ ಮಕ್ಕಳಿಗೆ ನೀಡುವ ಅಡುಗೆ ವೆಚ್ಚದ ಸಮಾನವಾಗಿ ಹಣವನ್ನು ನೀಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದೆ ಕೇಂದ್ರ ಸರ್ಕಾರ. ಇದರ ಕುರಿತಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಪ್ರಸ್ತಾಪಿಸಿದ್ದಾರೆ ಹಾಗೂ ಅನುಮೋದನೆ ಸಹ ನೀಡಿದ್ದಾರೆ.
ಇನ್ನು ಈ ಯೋಜನೆಯ ಮೂಲಕ ಬರುವ ಹಣವನ್ನು ಪಡೆಯುವುದು ಹೇಗೆ? ಎಂದು ನೋಡುವುದಾದರೆ , ಶಾಲೆಯಲ್ಲಿ ಮಕ್ಕಳ ಸ್ಕಾಲರ್ ಶಿಪ್ ಪಡೆಯಲು ಬ್ಯಾಂಕ್ ಅಕೌಂಟ್ ಮಾಡಿರುತ್ತಾರೆ ಅದರ ಮೂಲಕ ಈ ಮೊತ್ತವನ್ನು ಪಡೆಯಬಹುದು ಅಥವಾ ಮಕ್ಕಳ ಅಕೌಂಟ್ ಇಲ್ಲದೆ ಇದ್ದರೂ ಪಾಲಕರು ಹಾಗೂ ಮಗುವಿನ ಜಾಯಿಂಟ್ ಅಕೌಂಟ್ ಇದ್ದರೆ ಅದರಿಂದಲೂ ಸಹ ಈ ಯೋಜನೆಯ ಲಾಭ ಪಡೆಯಬಹುದು. ಸರ್ಕಾರದ ಈ ನಿರ್ಧಾರದಿಂದ ಮಕ್ಕಳ ಪೌಷ್ಠಿಕ ಮಟ್ಟವನ್ನು ಹೆಚ್ಚು ಮಾಡಬಹುದು ಹಾಗೂ ಈಗಿರುವ ಕೋರೋನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೇಕಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಸಹಾಯಕಾರಿ ಆಗುತ್ತದೆ. ಈ ಯೋಜನೆಯ ಅಡಿಯಲ್ಲಿ ಒಟ್ಟೂ ೧೧.೮ ಕೋಟಿ ಮಕ್ಕಳನ್ನು ಆಯ್ಕೆ ಮಾಡಿದ್ದು ಇಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಓದುತ್ತಿರುವ ಮಕ್ಕಳು ಈ ಯೋಜನೆಯ ಮೂಲಕ ಲಾಭ ಪಡೆದುಕೊಳ್ಳಬಹುದು. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಖಾತೆಗೆ DBT ಮೂಲಕ ನೇರವಾಗಿ ಹಣವನ್ನು ಜಮಾ ಮಾಡಲಾಗುವುದು. ಈ MDM ಯೋಜನೆಯ ಅಡಿಯಲ್ಲಿ ೧೧.೮ ಕೋಟಿ ಮಕ್ಕಳಿಗೆ ಹಣವನ್ನು ಜಮಾ ಮಾಡುವುದರ ಸಲುವಾಗಿ ಒಟ್ಟು ೧,೨೦೦ ಕೋಟಿ ರೂಪಾಯಿ ಹಣವನ್ನು ಮೀಸಲು ಇಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಖಾತೆಗೆ DBT ಮೂಲಕ ನೇರವಾಗಿ ಹಣವನ್ನು ಜಮಾ ಮಾಡಲಾಗುವುದು ಎಂಬ ಪ್ರಸ್ತಾಪ ಆಗಿದೆ ಆದರೆ ಒಬ್ಬ ವಿದ್ಯಾರ್ಥಿ/ನಿಗೆ ಎಷ್ಟು ಹಣವನ್ನು ಮತ್ತು ಯಾವಾಗ ಜಮಾ ಮಾಡಲಾಗುವುದು ಎನ್ನುವುದರ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರೆತಿಲ್ಲ ಆದಷ್ಟು ಬೇಗ ಈ ಯೋಜನೆ ಜಾರಿಗೆ ಬರಲಿದೆ.