ಕೊರೊನಾ ಎಂಬ ಮಹಾಮಾರಿಯಿಂದಾಗಿ ಎಷ್ಟೋ ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಷ್ಟೋ ಮಂದಿ ನಗರಗಳಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ಹಳ್ಳಿಗೆ ಬಂದಿದ್ದಾರೆ. ಹಾಗೆಯೇ ನಗರಗಳಲ್ಲಿ ಎಷ್ಟೋ ಬಿಸನೆಸ್ ಗಳು ಮತ್ತು ಎಷ್ಟೋ ಕಂಪನಿಗಳು ಮುಚ್ಚಿ ಹೋಗಿವೆ. ಅಂತಹವರು ಹಳ್ಳಿಯಲ್ಲಿ ಕೃಷಿ ಎಂಬ ಉದ್ಯೋಗ ಮಾಡಿ ಒಳ್ಳೆಯ ಲಾಭವನ್ನು ಪಡೆಯಬಹುದು. ಆದ್ದರಿಂದ 2021ರ ಕೃಷಿ ಲಾಭಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೃಷಿಯಲ್ಲಿ ಹಲವಾರು ವಿಧಗಳಿವೆ. ಹಾಗೆಯೇ ಬಂಡವಾಳ ಕಡಿಮೆ ಲಾಭ ಹೆಚ್ಚು. 2021ರಲ್ಲಿ ಕೋಳಿ ಸಾಕಾಣಿಕೆಯನ್ನು ಮಾಡಿ ಒಳ್ಳೆಯ ಲಾಭ ಪಡೆಯಬಹುದು. ಕೋಳಿಯಲ್ಲಿ ಹಲವಾರು ಜಾತಿಗಳಿವೆ. ಹಾಗೆಯೇ ಕೋಳಿಗಳಿಗೆ ಯಾವಾಗಲೂ ಒಳ್ಳೆಯ ಬೆಲೆ ಇದ್ದೇ ಇರುತ್ತದೆ. ಹುಟ್ಟಿದ 7 ರಿಂದ 9 ವಾರಗಳ ಒಳಗೆ ಬೆಳೆಯುತ್ತವೆ. ಹಾಗಾಗಿ ಒಳ್ಳೆಯ ಲಾಭವನ್ನು ಪಡೆಯಬಹುದು. ಹಾಗೆಯೇ ಸೊಪ್ಪುಕೃಷಿ. ಈಗ ಹೆಚ್ಚಾಗಿ ಸೊಪ್ಪುಗಳನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ಅದರಲ್ಲೂ ಕೋವಿಡ್ ನಂತರ ಸೊಪ್ಪುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಸೊಪ್ಪುಗಳನ್ನು ಮಾರಾಟ ಮಾಡಿದರೆ ಲಾಭ ನಿಶ್ಚಿತವಾಗಿರುತ್ತದೆ.

ಕೃಷಿಯಲ್ಲಿ ಹೂವು ಕೃಷಿ ಸಹ ಒಂದು. ಹಬ್ಬ ಹರಿದಿನಗಳಲ್ಲಿ ಹೂವುಗಳು ಬೇಕೇ ಬೇಕು. ಈಗಿನ ಸಮಯದಲ್ಲಿ ಮನೆಗಳಿಗೆ ಅತಿಥಿಗಳು ಕಡಿಮೆ ಬಂದರೂ ಅಲಂಕಾರವೇನೂ ಕಡಿಮೆಯಾಗುವುದಿಲ್ಲ. ಹಾಗಾಗಿ ಆನ್ಲೈನ್ ಫ್ಲವರ್ ಬಿಸನೆಸ್ ಮಾಡಬಹುದು. ಹಾಗೆಯೇ ಕೃಷಿಯಲ್ಲಿ ಜೇನು ಸಾಕಾಣಿಕೆ ಕೂಡ ಬರುತ್ತದೆ. ಜೇನುತುಪ್ಪವನ್ನು ಆಯುರ್ವೇದದಲ್ಲಿ ಒಂದು ಔಷಧಿ ಎಂದು ತಿಳಿಯಲಾಗಿದೆ. ಆದ್ದರಿಂದ ಜೇನುತುಪ್ಪಕ್ಕೆ ಒಂದು ಒಳ್ಳೆಯ ಬೆಲೆ ಇದೆ. ಎಷ್ಟೋ ಕಂಪನಿಗಳು ಇದಕ್ಕೆ ಸಕ್ಕರೆಪಾಕ ಮಿಕ್ಸ್ ಮಾಡಿ ಮಾರುತ್ತಾರೆ. ಹಾಗಾಗಿ ಇದನ್ನು ಪರಿಶುದ್ಧವಾಗಿ ಮಾರುವುದರಿಂದ ಲಾಭ ಕಟ್ಟಿಟ್ಟಬುತ್ತಿ.

ಹಾಗೆಯೇ ಅಣಬೆ ಉದ್ಯಮ. ಇತ್ತೀಚಿನ ದಿನಗಳಲ್ಲಿ ಎಷ್ಟೋ ಜನ ಮಾಂಸವನ್ನು ಬಿಟ್ಟು ಅಣಬೆಯ ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಲ್ಲಿ ವಿಟಮಿನ್ ಗಳು ಇರುತ್ತವೆ. ಹಾಗಾಗಿ ಇದನ್ನು ಒಂದು ಉದ್ಯಮವಾಗಿ ಮಾಡಿಕೊಂಡು ಒಳ್ಳೆಯ ಲಾಭ ಪಡೆಯಬಹುದು. ಕೊನೆಯದಾಗಿ ಹೇಳುವುದೇನೆಂದರೆ ಮೇಕೆ ಮತ್ತು ಕುರಿ ಫಾರ್ಮಿಂಗ್. ಮೇಕೆ ಮತ್ತು ಕುರಿ ಮಾಂಸಕ್ಕೆ ಯಾವಾಗಲೂ ಬೆಲೆ ಕಡಿಮೆಯಾಗುವುದಿಲ್ಲ. ಹಾಗೆಯೇ ಇವುಗಳಿಂದ ಹೊಲಗಳಿಗೆ ಗೊಬ್ಬರ ಆಗುತ್ತದೆ. ಇದರಿಂದ ಒಳ್ಳೆಯ ಬೆಳೆಯನ್ನು ಬೆಳೆಯಬಹುದು. ಹಾಗಾಗಿ ಹೊಸತಾಗಿ ಉದ್ಯೋಗ ಮಾಡುವ ಇಚ್ಛೆ ಉಳ್ಳವರು ಇವುಗಳನ್ನು ಮಾಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!