ನಾವೆಲ್ಲರೂ ಅಧಿಕ ತೂಕ ಮತ್ತು ಬೊಜ್ಜು ಇದ್ದರೆ ಅಪಾಯಕಾರಿ ಎಂಬುದನ್ನು ಕೇಳಿದ್ದೇವೆ ಆದರೆ ಕಡಿಮೆ ತೂಕವಿರುವುದು ಅಷ್ಟು ಒಳ್ಳೆಯದಲ್ಲ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವಾದ್ಯಂತ ನಾಲ್ಕುನೂರಾಅರವತ್ತೆರಡು ಮಿಲಿಯನ್ ವಯಸ್ಕರು ಕಡಿಮೆ ತೂಕವನ್ನು ಹೊಂದಿದ್ದಾರೆ. ಹಾಗಾದರೆ ನಮ್ಮ ತೂಕವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ನಾವು ಇಂದು ತಿಳಿದುಕೊಳ್ಳೊಣ.

ಮನುಷ್ಯ ದಾಪ್ಪಗಾಗಲು ತೆಳ್ಳಗಾಗಲು ಅವನ ದೇಹದಲ್ಲಿರುವಂತಹ ದಾತುಗಳು ಕಾರಣ ಮನುಷ್ಯ ಮಾಡಲ್ಪಟ್ಟಿರುವುದು ಸಪ್ತ ದಾತುಗಳಿಂದ ರಸ ರಕ್ತ ಮಾಂಸ ಮೇದ ಅಸ್ತಿ ಮಜ್ಜೆ ಮತ್ತು ಶುಕ್ರಗಳಿಂದ ಮಾಡಲ್ಪಟ್ಟಿದೆ.ಇವು ಸಮವಾಗಿದ್ದರೆ ಮನುಷ್ಯ ಸರಿಯಾಗಿ ಉತ್ತಮವಾಗಿ ಇರುತ್ತಾನೆ ಒಂದು ವೇಳೆ ಮಾಂಸದಾತು ಮೇದದಾತು ಕಡಿಮೆಯಾದರೆ ಮನುಷ್ಯ ಕ್ಷೀಣಿಸುತ್ತಾನೆ ಮತ್ತು ತೆಳ್ಳಗಾಗುತ್ತಾನೆ.

ಹಾಗಾಗಿ ಮಾಂಸ ಮತ್ತು ಮೇದೊದಾತುವನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ನಿಮ್ಮದಾಗಿಸಿಕೊಳ್ಳಬೇಕು. ಆ ತರಹದ ಗುಣ ಇರುವ ಹಣ್ಣುಗಳನ್ನು ತರಕಾರಿಗಳನ್ನು ಖಾದ್ಯ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ನೀವು ದಪ್ಪ ಆಗುತ್ತಿರಿ ಕೆನ್ನೆಗಳು ಊದಿಕೊಳ್ಳುತ್ತದೆ ನೀವು ಚೆಂದವಾಗಿ ಕಾಣುತ್ತೀರಿ.

ಹಾಗಾದರೆ ಮೇದ ಮತ್ತು ಮಾಂಸವನ್ನು ಹೆಚ್ಚುಮಾಡುವ ಆಹಾರ ಪದಾರ್ಥಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ. ಮಾಂಸವನ್ನು ಹೇಚ್ಚುಮಾಡುವ ಪದಾರ್ಥಗಳಲ್ಲಿ ಒಂದು ಉದ್ದಿನ ಕಾಳು ಇದನ್ನು ಸಂಸ್ಕೃತದಲ್ಲಿ ಮಾಶಾ ಎಂದು ಕರೆಯುತ್ತಾರೆ ಏಕೆಂದರೆ ಇದರಲ್ಲಿ ಮಾಂಸದ ಗುಣಗಳಿರುವುದರಿಂದ ಹಾಗೆ ಕರೆಯಲಾಗುತ್ತದೆ

ಈ ಉದ್ದಿನಕಾಳನ್ನು ಒಂದು ತಟ್ಟೆಯಲ್ಲಿ ಸ್ವಲ್ಪ ನೆನೆಸಿಟ್ಟುಕೊಳ್ಳಿ ಇನ್ನು ಮೇದೊದಾತುವನ್ನು ಹೆಚ್ಚಿಸಲು ಎಮ್ಮೆಯ ತುಪ್ಪವನ್ನು ಬಳಸಬೇಕು ಇಲ್ಲಿ ಹಸುವಿನ ತುಪ್ಪ ಬಳಸುವಂತಿಲ್ಲ ಯಾಕೆ ಎಮ್ಮೆಯ ತುಪ್ಪ ಎನ್ನುವುದಾದರೆ ಇದರಲ್ಲಿ ಮೇದೊದಾತು, ಕೊಬ್ಬು ಹೆಚ್ಚಿಗೆ ಇರುತ್ತದೆ ಈ ತುಪ್ಪವನ್ನು ಉದ್ದಿನ ಕಾಳಿಗೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲದ ಪಾಕವನ್ನು ಹಾಕಿ ಉದ್ದಿನ ಉಂಡೆಯನ್ನು ಮಾಡಿಟ್ಟುಕೊಳ್ಳಿ ಈ ಉದ್ದಿನ ಉಂಡೆಯನ್ನು ಬೆಳಿಗ್ಗೆ ಮತ್ತು ಸಾಯಂಕಾಲ ತಿಂಡಿ ಊಟಕ್ಕಿಂತ ಮೊದಲು ಸತತವಾಗಿ ಮೂರು ತಿಂಗಳ ಕಾಲ ತಿಂದರೆ ಮೈ ತುಂಬಿಕೊಳ್ಳುತ್ತದೆ ನೀವು ದಪ್ಪ ಆದರೂ ಸರಿಯಾಗಿ ಉತ್ತಮವಾಗಿ ಇರುತ್ತೀರಿ.

ನೀವು ಪೌಷ್ಠಿಕಾಂಶ ಇರುವ ಆಹಾರವನ್ನು ಸೇವಿಸಬೇಕು ತೂಕ ಹೆಚ್ಚಿಸಿಕೊಳ್ಳುವುದೆಂದು ಸಿಕ್ಕ ಸಿಕ್ಕ ಆಹಾರವನ್ನು ತಿನ್ನುವುದಲ್ಲ ಅದಕ್ಕೂ ಸಮಯ ಪ್ರಮಾಣ ಇರುತ್ತದೆ. ಪ್ರತಿದಿನ ಐದುನೂರಕ್ಕಿಂತ ಹೆಚ್ಚು ಕ್ಯಾಲೋರಿ ಇರುವ ಆಹಾರ ಪದಾರ್ಥಗಳನ್ನು ಮತ್ತು ಪೋಷಕಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚುತ್ತದೆ.

ನಿಮ್ಮ ತೂಕ ಹೆಚ್ಚಾಗಲು ಸ್ನಾಯುಗಳ ಬೆಳವಣಿಗೆಗೆ ಹಾಲು ಒಳ್ಳೆಯದು.ಇದರಲ್ಲಿ ಕ್ಯಾಲೋರಿ ಹೆಚ್ಚಿರುವುದಲ್ಲದೆ ಪ್ರೊಟೀನ್ ಉತ್ತಮ ಕೊಬ್ಬುಗಳು ಕ್ಯಾಲ್ಸಿಯಂ ಜೀವಸತ್ವಗಳು ಮತ್ತು ಖನಿಜಾಂಶಗಳಿವೆ. ಇನ್ನು ಶುಂಠಿ ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ ಊಟಕ್ಕೆ ಮೊದಲು ಶುಂಠಿಯನ್ನು ಸೇವಿಸಿ ಉತ್ತಮ ಜೀರ್ಣ ಕ್ರಿಯೆಗೆ ಶುಂಠಿ ಸಹಾಯಕಾರಿ.ನೀವು ಡ್ರೈಪ್ರೂಟ್ಸ್ ಗಳ ಸೇವನೆ ಮಾಡಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಬಹಳಷ್ಟು ಜನರು ದಪ್ಪ ಆಗಬೇಕೆಂದು ಅನಾರೋಗ್ಯಕರ ಜಂಕ್ ಫುಡ್ ಸೇವಿಸುತ್ತಾರೆ ಹೀಗೆ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ ನೀವು ದಪ್ಪವಾಗಬೇಕೆಂದರೆ ನಿಮ್ಮ ಆರೋಗ್ಯಕ್ಕೆ ಯಾವುದೇ ಚ್ಯುತಿ ಬಾರದಂತೆ ಮನೆಮದ್ದುಗಳನ್ನು ಬಳಕೆ ಮಾಡಿಕೊಳ್ಳಿ. ತುಂಬಾ ದಪ್ಪಾಗಿರುವುದು ಒಳ್ಳೆಯದಲ್ಲ ತುಂಬಾ ತೆಳ್ಳಗಿರುವುದು ಒಳ್ಳೆಯದಲ್ಲ ಹಾಗಾಗಿ ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!