ತುಂಬಾ ದಿನದಿಂದ ಕೆಮ್ಮು ಇದ್ಯಾ? ಎಷ್ಟೇ ಏನೇ ಔಷಧಿ ಮಾಡಿದ್ರು ಕೆಮ್ಮು ಕಡಿಮೆ ಆಗ್ತಾ ಇಲ್ವಾ ಹಾಗಾದ್ರೆ ಕೆಮ್ಮಿಗೆ ಸುಲಭವಾದ ಈ ಒಂದು ಮನೆ ಮದ್ದನ್ನ ಮಾಡಿ ನೋಡಿ ಬಹಳ ಬೇಗನೆ ಕೆಮ್ಮು ಕಡಿಮೆ ಆಗತ್ತೆ.
ಕೆಮ್ಮ ಕಡಿಮೆ ಮಾಡ್ಕೊಳ್ಳೊಕೆ ಮುಖ್ಯವಾಗಿ ಬೇಕಾಗಿರುವುದು ಹಿಪ್ಪಲಿ ಪೌಡರ್. ಈ ಹಿಪ್ಪಲಿ ಪೌಡರ್ ಒಂದು ಇದ್ದರೆ ಸಾಕು. ಇದನ್ನ ಕಾಲು ಕೆಜಿ ಅಷ್ಟು ತಂದು ಮನೆಯಲ್ಲಿ ತುಪ್ಪ ಹಾಕಿಕೊಂಡು ಹುರಿದುಕೊಂಡು ಪೌಡರ್ ಮಾಡಿ ಇಟ್ಟುಕೊಳ್ಳಬೇಕು. ಇದನ್ನ ಪೌಡರ್ ಮಾಡಿ ಇಟ್ಟುಕೊಂಡರೆ, ಮನೆಯಲ್ಲಿ ಯಾರಿಗೆ ಕೆಮ್ಮು ಇದ್ದರು ಸಹ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರ ವರೆಗೂ ಸಹ ಇದನ್ನ ಬಳಸಬಹುದು. ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರಲ್ಲ ಯಾವುದೇ ಭಯ ಬೇಡ. ಇದನ್ನ ಒಬ್ಬರು ಒಮ್ಮೆ ಒಂಸು ಟಿ ಸ್ಪೂನ್ ಅಷ್ಟು ತೆಗೆದುಕೊಳ್ಳಬಹುದು.
ಒಂದು ಟೀ ಸ್ಪೂನ್ ಹಿಪ್ಪಲಿ ಪೌಡರ್, ಒಂದು ಟಿ ಸ್ಪೂನ್ ಶುಂಠಿ ಪೌಡರ್, ಚೆನ್ನಾಗಿ ಫ್ರೈ ಮಾಡಿ ಪುಡಿ ಮಾಡಿಕೊಂಡ ಏಲಕ್ಕಿ ಪುಡಿ ಒಂದು ಟಿ ಸ್ಪೂನ್, ಬೆಲ್ಲ 3 ಟೀ ಸ್ಪೂನ್. ಇವೆಲ್ಲವನ್ನೂ ಸೇರಿಸಿ ಮಿಕ್ಸ್ ಮಾಡಿ. ಮಿಕ್ಸ್ ಮಾಡಿದಾಗ ಪೇಸ್ಟ್ ಆಗತ್ತೆ. ಅದನ್ನ ಉಂಡೆ ಮಾಡಿಕೊಂಡು ಅಷ್ಟನ್ನು ಒಂದೇ ಬಾರಿಗೆ ತೆಗೆದುಕೊಳ್ಳಬೇಕು. 15 ವರ್ಷ ಮೇಲ್ಪಟ್ಟವರು ಎಲ್ಲರೂ ಇದನ್ನ ಒಮ್ಮೆಗೆ ಅಷ್ಟೂ ತೆಗೆದುಕೊಳ್ಳಬಹುದು. ಇದನ್ನ ಊಟ ಆದ ನಂತರ ರಾತ್ರಿ ಮಲಗುವ ಮುನ್ನ ಈ ಉಂಡೆಯನ್ನ ತಿಂದು ಒಂದು ಲೋಟ ನೀರು ಕುಡಿಯಬೇಕು. ಇದರಿಂದ ಯಾವುದೇ ರೀತಿಯ ಕೆಮ್ಮು ಇದ್ದರೂ ಸಹ ಕಡಿಮೆ ಆಗತ್ತೆ.
ಅದೇ ಚಿಕ್ಕ ಮಕ್ಕಳಿಗೆ, 5 ರಿಂದ 15 ವರ್ಷದ ಮಕ್ಕಳಿಗೆ ಆದರೆ, ನಾವು ತೆಗೆದುಕೊಳ್ಳುವ ಪ್ರಮಾಣದ ಕಾಲು ಭಾಗ ಅಥವಾ ಅರ್ಧ ಭಾಗ ಕೊಟ್ಟರೆ ಸಾಕಾಗತ್ತೆ. ನಂತರ ನೀರು ಕುಡಿಸಿ. ಇನ್ನೂ ಚಿಕ್ಕ ಮಕ್ಕಳಿಗೆ ಅಂದರೆ, ಒಂದರಿಂದ ಐದು ವರ್ಷದ ಮಕ್ಕಳಿಗೆ ಒಂದು ಅಥವಾ ಎರಡು ಚಿಟಿಕೆ ಅಷ್ಟು ಕೊಟ್ಟು ನೀರು ಕುಡಿಸಿದರೆ ಸಾಕು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗದೆ ಇರುವುದರಿಂದ ಹಾಗೂ ಎಲ್ಲ ವಸ್ತುಗಳು ಮನೆಯಲ್ಲಿ ಅಡುಗೆಗೆ ಬಳಸುವುದೇ ಆಗಿರುವುದರಿಂದ ಹಾಗೂ ಯಾವುದೇ ಕೆಮಿಕಲ್ಸ್ ಇಲ್ಲದೆ ಇರುವುದರಿಂದ ಭಯ ಪಡುವ ಅಗತ್ಯ ಇರಲ್ಲ. ಇದನ್ನ ಒಂದೆರಡು ಬಾರಿ ತೆಗೆದುಕೊಂಡರೆ ಒಣ ಕಫ, ದೀರ್ಘ ಕಾಲದ ಕೆಮ್ಮು ಹೀಗೆ ಯಾವುದೇ ರೀತಿಯ ಕೆಮ್ಮು ಇದ್ದರೂ ಸಹ ಕಡಿಮೆ ಆಗತ್ತೆ. ತಿಂಗಳಾದರೂ ಕೆಮ್ಮು ಕಡಿಮೆ ಆಗದೆ ಇದ್ದವರು 10 ದಿನ ರಾತ್ರಿ ಹೀಗೆ ನಿರಂತರವಾಗಿ ತೆಗೆದುಕೊಂಡರೆ ಯಾವುದೇ ಕೆಮ್ಮು ಇದ್ದರೂ ಸಹ ಕಡಿಮೆ ಆಗತ್ತೆ