ಕೊರೊನಾ ಇದೊಂದು ದೊಡ್ಡ ಮಹಾಮಾರಿ ಆಗಿದ್ದು ಇಡೀ ಪ್ರಪಂಚವನ್ನೇ ಬದಲಾಯಿಸಿ ಬಿಟ್ಟಿದೆ. ಕೊರೊನಾ ಎಂಬ ವೈರಸ್ ಜನರನ್ನು ಒಂದು ವರ್ಷಗಳು ಕಳೆದರೂ ಬಿಟ್ಟು ಹೋಗುತ್ತಿಲ್ಲ. ಹಾಗೆಯೇ ಇದಕ್ಕೆ ಯಾವುದೇ ರೀತಿಯ ಔಷಧಿಗಳು ಸಿಗುತ್ತಿಲ್ಲ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನ್ ನ್ನು ಬಳಸಲಾಗುತ್ತಿದೆ. ಹಾಗೆಯೇ ಕೊರೊನಾದಿಂದ ದೂರ ಇರಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಯಾವುದೇ ರೋಗದಿಂದ ದೂರ ಇರಬೇಕು ಎಂದಾದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುವ ಆಹಾರ ಪದಾರ್ಥಗಳು ನಮ್ಮ ಮನೆಯಲ್ಲೇ ಇರುತ್ತವೆ.ಅವುಗಳೆಂದರೆ ಅರಿಶಿಣ, ಬಾದಾಮಿ, ಟೊಮೆಟೊ, ಪಪ್ಪಾಯಿಹಣ್ಣು ಇನ್ನೂ ಹಲವಾರು ಇವೆ. ಅರಿಶಿಣ ಇದನ್ನು ಅಡಿಗೆಯಲ್ಲಿ ಅತಿ ಹೆಚ್ಚು ಬಳಸಬೇಕು. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆಗಡಿ ಆದವರು ಇದರ ಕಷಾಯವನ್ನು ಮಾಡಿ ಕುಡಿಯಬೇಕು.
ಹಾಗೆಯೇ ಟೊಮೆಟೊ ಇದು ಸಿ ವಿಟಮಿನ್ ಅತಿ ಹೇರಳವಾಗಿ ಹೊಂದಿರುತ್ತದೆ. ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪಪ್ಪಾಯಿ ಹಣ್ಣನ್ನು ಹಾಗೆಯೇ ತಿನ್ನಬಹುದು. ಇಲ್ಲವಾದಲ್ಲಿ ಸಲಾಡ್ ಮಾಡಿ ತಿನ್ನಬಹುದು. ಹಾಗೆಯೇ ಇದು ಪೊಟ್ಯಾಶಿಯಂ ಮತ್ತು ವಿಟಮಿನ್ ಬಿ ಮತ್ತು ವಿಟಮಿನ್ ಬಿ9ನ್ನು ಹೊಂದಿರುತ್ತದೆ. ದೇಹದಲ್ಲಿ ಇರುವ ಬ್ಯಾಕ್ಟೀರಿಯಾಗಳನ್ನು ಹೊರ ಹಾಕುತ್ತದೆ. ಹಾಗೆಯೇ ಕಿವಿಫ್ರೂಟ್ ಮತ್ತು ಬಾದಾಮಿ ಹಲವಾರು ರೀತಿಯ ವಿಟಮಿನ್ ಗಳನ್ನು ನೀಡುತ್ತವೆ.
ಗ್ರೀನ್ ಟೀ ಇದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಅಣಬೆ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ಸೊಪ್ಪುಗಳಲ್ಲಿ ಒಂದಾದ ಪಾಲಕ್ ಸೊಪ್ಪು ಕೂಡ ದೇಹಕ್ಕೆ ಪೋಷಕಾಂಶಗಳನ್ನು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗೆಣಸು ಇದು ಸಹ ರಕ್ತ ಕಣಗಳನ್ನು ಜಾಸ್ತಿ ಮಾಡುತ್ತದೆ. ಬೆಳ್ಳುಳ್ಳಿ ಇದೂ ಸಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೆಗಡಿಯನ್ನು ಕಡಿಮೆ ಮಾಡುತ್ತದೆ.